ಭಾವಲೋಕದಿಂದ ಜಾರಿ ಎದೆ ತುಂಬ ನಕ್ಷತ್ರ


ನನ್ನ ಎದೆಯ ಭಾವ ನಕ್ಷತ್ರಗಳು ಓದುಗರಿಗೆ ಅಷ್ಟಿಷ್ಟು ಮೆಚ್ಚಿಕೆಯಾದರೆ ನಾನು ಕೃತಾರ್ಥ’ ಎನ್ನುತ್ತಿದ್ದರು ಮಲ್ಲಿಗೆಯ ಕವಿ ಕೆಎ-ಸ್‌ನ. ಬೆಂಗಳೂರಿನ ವಿ.ಸೀ. ಸಂಪದ ಪ್ರಕಾಶನ ಹೊರ-ತಂದಿ-ರುವ ‘ಎದೆ ತುಂಬ ನಕ್ಷತ್ರ’ ಪುಸ್ತಕದಿಂದ ಹೆಕ್ಕಿದ ಒಂದು ನಕ್ಷತ್ರ ಇಲ್ಲುಂಟು.

ಹೆರಿಗೆಯಾಸ್ಪತ್ರೆಯಲ್ಲಿ

ಹೆರಿಗೆಯ ನೋವನೆ ಹಾಡುವಿರೇತಕೆ
ಪಕ್ಕದಲೇನಿದೆ ನೋಡಿ ;
ಒಲವಿನ ಬಳ್ಳಿಯ ಚೆಲುವಿನ ಮೊಗ್ಗಿಗೆ
ಒಪ್ಪುವಂಥದನೆ ಹಾಡಿ.

ಮಗುವನು ಮುಟ್ಟುತ ನಿಟ್ಟುಸಿರೆಳೆದಳು
ದೀಪವ ನೋಡುತ ರಾಣಿ ;
ಹೂಮಗು ತಾಯಿಯ ಮೊಲೆಯನು ಹುಡುಕಿತು,
ತೊಟ್ಟಿಲಡಿಗೆ ಸಾಂಬ್ರಾಣಿ.

ರಾಯರು ಬಂದರು ಮಂಚದ ಹತ್ತಿರ
ಪೇಟವ ಕೈಯಲಿ ಹಿಡಿದು ;
‘ಹೇಗಿದ್ದೀಯ?’ ಎಂದರು ರಾಯರು
ಮಂಚದ ಅಂಚನು ಮಿಡಿದು.

ರಗ್ಗನು ಮಡಿಸುತ ಅವಳಿಂತೆಂದಳು-
‘ಮಗುವನು ಎತ್ತಿಕೊಳಿ,
ಹೆಣ್ಣಾದರು ಮಗು ಬಲು ಚೆನ್ನಾಗಿದೆ,
ಕೆನ್ನೆಗೆ ಮುತ್ತು ಕೊಡಿ.’

ದೀಪವು ಹೋಯಿತು; ಕೋಣೆಯ ಮೂಲೆಗೆ
ಬಂದಿತು ದೀಪದ ಕಂಬ ;
ರಾಣಿಯು ಮಗುವನು ತೊಟ್ಟಿಲಿಗಿಟ್ಟಳು,
ನಕ್ಕಳು ಕೆನ್ನೆಯ ತುಂಬ.

ಬೀಗದ ಎಸಳನು ಎಸೆಯುತ ಹಿಡಿಯುತ
ನಡೆದಳು ನಿಲಯಕೆ ದಾದಿ ;
ಬಾನುಲಿಯಲಿ ತೇಲಿತು ಹೊಸಗೀತ :
‘ಯಾರಿಗೆ ಬೇಕು ಯುಗಾದಿ !’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+