ಆಹಾ ರಸಗುಲ್ಲಾ.. ಬಾಯಲ್ಲಿ ಅಧರ ಒಸರಿತಲ್ಲಾ..!


ಹೆಚ್ಚು ಬಗೆಯ ಸಾಮಾನುಗಳ ಅಗತ್ಯವಿಲ್ಲದಿದ್ದರೂ ರಸಗುಲ್ಲ ತಯಾರಿಕೆ ಸ್ವಲ್ಪ ವೇಳೆ ತಿನ್ನುತ್ತದೆ. ತಾಳ್ಮೆಯಾಂದಿದ್ದರೆ ಎಲ್ಲಿ ಗೆಲುವಿಲ್ಲ ಹೇಳಿ?

ಹಾಲಿನ ಹಾದಿಯಲ್ಲೇ ಇರುವ ಸಿಹಿ ರಸಗುಲ್ಲಾ... ಇದು ಸ್ವಲ್ಪ ಪಾಪ್ಯುಲರ್‌ ತಿಂಡಿ. ಆದರೆ ಮನೆಯಲ್ಲಿ ಮಾಡಿದರೆ ಅದರ ರುಚಿಯೇ ಭಿನ್ನವಾಗಿರುತ್ತೆ. ಒಂದು ಕೈ ನೋಡೇ ಬಿಡೋಣವೇ ? ಬೇಕಾಗುವ ಸಾಮಾನುಗಳೂ ಸಿಂಪಲ್‌. ಯಥಾ ಪ್ರಕಾರ ಮೂಲಭೂತ ಅಗತ್ಯ ಎಂದರೆ ದಪ್ಪನೆಯ ಸ್ವಚ್ಚ ಹಾಲು. 12 ಕುಡ್ತೆ ಅಂದರೆ 2 ಲೀಟರ್‌ ಹಾಲು ಸೋಸಿ ರೆಡಿ ಮಾಡಿಟ್ಟುಕೊಳ್ಳಿ. ಇಷ್ಟು ಹಾಲಿಗೆ ಮುಕ್ಕಾಲು ಕೆಜಿ ಸಕ್ಕರೆ ಬೇಕು. 2 ನಿಂಬೆ ಹಣ್ಣು ಮತ್ತು ಅರ್ಧ ಚಮಚ ರೋಸ್‌ ಎಸೆನ್ಸ್‌ ಇರಲಿ. ಚೆನ್ನಾಗಿ ಕಾಯಿಸಿ.

ನಿಂಬೆ ಹಣ್ಣನ್ನು ಬೀಜ ತೆಗೆದು ಕುದಿವ ಹಾಲಿಗೆ ಹಿಂಡಿ ಕೆಳಗಿಳಿಸಿ, 5 ನಿಮಿಷ ಮುಚ್ಚಿಟ್ಟರೆ ಹಾಲು ಒಡೆದಿರುತ್ತದೆ. ಅದನ್ನು ಬಿಳುಪಾದ ದಪ್ಪ ಬಟ್ಟೆಯಲ್ಲಿ ಸೋಸಿ. ಆ ಹಾಲನ್ನು ಮತ್ತೊಮ್ಮೆ ನೀರಿನಿಂದ ಶೋಧಿಸಬೇಕು. ಈಗ ಇದನ್ನು ಸ್ವಲ್ಪ ಎತ್ತರದಲ್ಲಿ ದಾರ ಬಿಗಿದು ತೂಗು ಹಾಕಿ. 2 ಗಂಟೆಯ ನಂತರ ಗಂಟನ್ನು ಬಿಚ್ಚಿ. ಒಂದು ತಟ್ಟೆಯಲ್ಲಿ ಈ ಮುದ್ದೆಯನ್ನು ಹಾಕಿ 10 ನಿಮಿಷ ಚೆನ್ನಾಗಿ ನಾದಬೇಕು.

ಅಂಗೈಯಿಂದ ದೊಡ್ಡ ಸುಲಿದ ಅಡಿಕೆ ಗಾತ್ರದ ಉಂಡೆ ಮಾಡಿ. ಸ್ವಲ್ಪ ಚಪ್ಪಟೆಯಾಗಿದ್ದರೆ ಚೆಂದ ಕಾಣುತ್ತದೆ. ಉಂಡೆಗಳು ಒಂದಕ್ಕೊಂದು ಅಂಟದಂತೆ ನೋಡಿಕೊಂಡು 1 ತಟ್ಟೆಯಲ್ಲಿ ಇಟ್ಟುಬಿಡಿ.

ಸಕ್ಕರೆ ನೀರು ಹಾಕಿ ಒಲೆಯ ಮೇಲೆ ಇಟ್ಟು ಕುದಿದ ನಂತರ ಮಿಶ್ರಣವನ್ನು ಬಟ್ಟೆಯಲ್ಲಿ ಗಾಳಿಸಿ. ಅಗಲವಾದ ಪಾತ್ರೆಯಲ್ಲಿ ಸಕ್ಕರೆ ಪಾಕವನ್ನು ಒಲೆಯ ಮೇಲಿಟ್ಟು ಕುದಿಯುತ್ತಿರುವಾಗಲೇ ಏಳೆಂಟು ಉಂಡೆಗಳನ್ನು ಹಾಕಿ. ಸ್ವಲ್ಪ ಕುದಿದ ಮೇಲೆ ಪುನಃ ಉಂಡೆಗಳನ್ನು ಹಾಕಿ, ಕುದಿಸಿ- ಹೀಗೆ ಮಾಡುತ್ತ 10 ನಿಮಿಷ ಕುದಿಸಿ ಎಸೆನ್ಸ್‌ ಹಾಕಿ ಇಳಿಸಿ. ಆರಿದ ಮೇಲೆ ಡಬ್ಬದಲ್ಲಿ ಹಾಕಿಡಿ.

ಹೆಚ್ಚು ಬಗೆಯ ಸಾಮಾನುಗಳ ಅಗತ್ಯವಿಲ್ಲದಿದ್ದರೂ ರಸಗುಲ್ಲ ತಯಾರಿಕೆ ಸ್ವಲ್ಪ ವೇಳೆ ತಿನ್ನುತ್ತದೆ. ತಾಳ್ಮೆಯಾಂದಿದ್ದರೆ ಎಲ್ಲಿ ಗೆಲುವಿಲ್ಲ ಹೇಳಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+