ಚಂದಕಿಂತ ಚಂದ ಚಂದ್ರಕಳಾ..
ಊಟದ ತಟ್ಟೆಯ ಪಕ್ಕವೇ ಬಟ್ಟಲಿನಲ್ಲಿ ಬೆಚ್ಚಗೆ ಬೆಚ್ಚಗೆ ಚಂದ್ರಕಳಾ ಬಡಿಸಿಟ್ಟರೆ ತಿನ್ನುವ ಸೊಗಸು ಬಣ್ಣಿಸುವ ಪರಿಯೆಂತು ಹೇಳಿ.
ಅರ್ಧ ಸೇರು ಒಳ್ಳೆಯ ದಪ್ಪ ಹಾಲಿದ್ದರೆ ಸೈ. ಹಾಲು ಎಷ್ಟು ಚೆನ್ನಾಗಿರುತ್ತೋ ನೀವು ತಯಾರಿಸುವ ಸ್ವೀಟ್ ಕೂಡ ಅಷ್ಟೇ ರುಚಿಯಾಗಿ ಬರುತ್ತೆ. ಒಂದು ಪಾವು ಮೈದಾ ಹಿಟ್ಟು, ಪಾವು ಸಕ್ಕರೆ, ಸ್ವಲ್ಪ ಕೇಸರಿ ಬಣ್ಣ. ಏಳೆಂಟು ಬಾದಾಮಿ, ಸ್ವಲ್ಪ ಒಣ ದ್ರಾಕ್ಷಿ, 1 ಕುಡ್ತೆ ತುಪ್ಪ.
ಹಾಲನ್ನು ಚೆನ್ನಾಗಿ ಕಾಯಿಸಿ, ತಣಿಸಿ. ಬಾದಾಮಿಯನ್ನು ಕುದಿಯುವ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ಚೂರು ಮಾಡಿ ತಣಿಸಿದ ಹಾಲಿಗೆ ಹಾಕಿ ಮಗುಚಿ. ಈಗ, ಮೈದಾ ಹಿಟ್ಟು ಒಂದು ಚಮಚ, ಸಕ್ಕರೆ, ರಂಗಿನ ಪುಡಿ, ದ್ರಾಕ್ಷಿ, ಒಂದು ಚಮಚ ತುಪ್ಪ ಎಲ್ಲಾ ಹಾಕಿ. ನಂತರ ಸಣ್ಣ ಉರಿಯಲ್ಲಿಟ್ಟು, ಮಿಶ್ರಣವನ್ನು ಮಗುಚುತ್ತಿರಿ. ಇದು ಖೋವಾ ರೂಪಕ್ಕೆ ಬರುತ್ತದೆ. ನಂತರ ಈ ಗಟ್ಟಿ ಖೋವವನ್ನು ನಿಂಬೆ ಹಣ್ಣಿನಷ್ಟು ದೊಡ್ಡ ಉಂಡೆ ಮಾಡಿ ತುಪ್ಪದಲ್ಲಿ ಕರಿಯಬೇಕು.
ಸಕ್ಕರೆಯನ್ನು ಪಾಕ ಮಾಡಿ ಅದಕ್ಕೆ ಕರಿದ ಉಂಡೆಗಳನ್ನು ಹಾಕಬೇಕು. ಪಾಕದಿಂದ ಆಚೆಗೆ ಬಂದ ಚಂದ್ರಕಳಾ -ಧರೀ..ಶಂಕರೀ..












Click it and Unblock the Notifications