ನಿಮ್ಮ ಅಭಿಮಾನದ ಗೂಡು ಕನ್ನಡ . ಇನ್‌ಫೊ.ಕಾಂ ಅಂತರ್ಜಾಲಕ್ಕೆ ಇದೇ ಮಾರ್ಚ್ 25ಕ್ಕೆ , ಅಂದರೆ ವಿಷುನಾಮ ಸಂವತ್ವರದ ಯುಗಾದಿ ಮುಹೂರ್ತಕ್ಕೆ ಒಂದು ವರ್ಷ ತುಂಬುತ್ತಿದೆ. ವಿಕ್ರಮನಾಮ ಸಂವತ್ಸರದ ಯುಗಾದಿ ದಿನದಿಂದ ವಿಶ್ವ ಕನ್ನಡಿಗರ ಮನೆ-ಮನಗಳ ಬಾಗಿಲು ತಟ್ಟುತ್ತಾ ಬಂದಿರುವ ಕನ್ನಡ . ಇನ್‌ಫೊ.ಕಾಂ ಕನ್ನಡ ಅಂತರ್‌ಜಾಲದ ಮೊಟ್ಟಮೊದಲ ಪೋರ್ಟಲ್ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಕಣ್ಣು ಮಿಟುಕಿಸುವುದರಲ್ಲಿ ಒಂದು ವರ್ಷ ಕಳೆದು ಹೋಯಿತು . ಈ ಒಂದು ವರ್ಷದಲ್ಲಿ ಏನೆಲ್ಲಾ ನಡೆದು ಹೋಯಿತು ? ನಮ್ಮ ಮನೆಗೆ ಇತ್ತಿತ್ತಲಾಗಿ ಬರುತ್ತಿರುವ ಅನೇಕ ಅತಿಥಿಗಳಿಗೆ ನಾವು ನಿನ್ನೆಯ ಕಥೆ ಹೇಳಬೇಕು. ತನ್ನಿಮ್ಮಿತ್ತ ಈ ಹೊಸ ಅಂಕಣ ..ನೂರೆಂಟು ನೆನಪು ಎದೆಯಾಳದಿಂದ..ಕಳೆದ ಒಂದು ವರ್ಷ ಅವಧಿಯಲ್ಲಿ ನಮ್ಮಲ್ಲಿ ಬೆಳಕು ಕಂಡ ಬರಹ, ಸಂದರ್ಶನ, ಸುದ್ದಿ, ಚಿತ್ರ-ಚಿತ್ತಾರಗಳನ್ನು ಮತ್ತೆ ಆರಿಸಿ, ವಯನಾಗಿ ಜೋಡಿಸಿ ನಿಮ್ಮ ಮುಂದೆ ಈ ಮೂಲಕ ಇಡುತ್ತಿದ್ದೇವೆ. ಕರ್ನಾಟಕ ಮತ್ತು ಕನ್ನಡಿಗರು ಈ ಎಲ್ಲ ದಿನಗಳಲ್ಲಿ ನಡೆದು ಬಂದ ಹಾದಿಯನ್ನು ತೆರೆದು ತೋರಿಸುವ ಈ ಅಂಕಣ ನಿಮಗೆ ಅಂಗೈ ಕನ್ನಡಿಯಂತೆ ಜತೆಯಾಗಿರುತ್ತದೆ ಎನ್ನುವ ನಂಬಿಕೆ ನಮ್ಮದು.