Ugadi 2023; ಘಮ ಘಮಿಸುವ ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ?

ಯುಗಾದಿ ಹಬ್ಬಕ್ಕೆ ಹೋಳಿಗೆ, ಬೇವು-ಬೆಲ್ಲ, ಮಾವಿನಕಾಯಿ ಚಿತ್ರಾನ್ನ, ಸೌತೆಕಾಯಿ ಕೊಸಂಬರಿ ಮುಂತಾದ ಖಾದ್ಯಗಳನ್ನು ತಯಾರು ಮಾಡಲಾಗುತ್ತದೆ. ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಯುಗಾದಿ ಹಬ್ಬ ಬಂದಿದೆ. ಯುಗಾದಿ ಎಂದರೆ ವರ್ಷದ ಆರಂಭ. ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಆರಂಭ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಯುಗಾದಿ (ಉಗಾದಿ)ಯನ್ನು ವರ್ಷದ ಮೊದಲ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ಹಿಂದೂಗಳು ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಬೇವು-ಬೆಲ್ಲ ತಿನ್ನುವ ಮೂಲಕ ಜೀವನದಲ್ಲಿ ಜೀವನದಲ್ಲಿ ಸಿಹಿ-ಕಹಿ ಎರಡೂ ಸಹ ತುಂಬಿರಲಿದೆ ಎಂದು ಅರಿಯುತ್ತಾರೆ.

ಹೊಸ ಬಟ್ಟೆ ತೊಟ್ಟು, ವಿವಿಧ ಬಗೆಯ ಖಾದ್ಯಗಳನ್ನು ಸೇವಿಸಿ, ಬಂಧುಗಳಿಗೆ, ಅಕ್ಕಪಕ್ಕದವರಿಗೆ ಹಬ್ಬದ ಶುಭಾಶಯ ಕೋರುತ್ತಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಬಳಿಕ ಪಂಚಾಂಗ ಪಠಣ ಮಾಡುತ್ತಾರೆ. ಈ ವರ್ಷ ಹೇಗಿರಲಿದೆ?, ಮಳೆ, ಬೆಳೆಯ ಮಾಹಿತಿ ತಿಳಿಯುತ್ತಾರೆ. ಭವಿಷ್ಯವನ್ನು ನಂಬುವವರು ತಮ್ಮ ರಾಶಿಯ ಈ ವರ್ಷದ ಫಲಗಳು, ಶುಭ, ಅಶುಭವನ್ನು ಕೇಳಿ ತಿಳಿದುಕೊಳ್ಳುತ್ತಾರೆ.

Ugadi 2023 Mango Chitranna Recipe In Kannada

ಮಾಗಿಯ ಚಳಿ ಕಳೆದು ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ ಯುಗಾದಿ. ಬೆಳೆಗಳ ಕಟಾವು ಮುಗಿದು ರೈತರು ಸಹ ತಮ್ಮ ಕೆಲಸಗಳಿಂದ ಬಿಡುವು ಪಡೆದಿರುತ್ತಾರೆ. ಹೊಸದಾಗಿ ಬಂದ ಗೇರು, ಮಾವು, ಹಲಸಿನ ಬೆಳೆಗಳು ಜನರ ಕೈಗೆ ಸಿಕ್ಕಿರುತ್ತವೆ. ಯುಗಾದಿ ಹಬ್ಬಕ್ಕೆ ಹೋಳಿಗೆ, ಬೇವು-ಬೆಲ್ಲ, ಮಾವಿನಕಾಯಿ ಚಿತ್ರಾನ್ನ, ಸೌತೆಕಾಯಿ ಕೊಸಂಬರಿ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಬೇವು-ಬೆಲ್ಲವನ್ನು ಕರ್ನಾಟಕದ ಬೇರೆ-ಬೇರೆ ಭಾಗದಲ್ಲಿ ಬೇರೆ ರೀತಿಯಲ್ಲಿ ತಯಾರು ಮಾಡಿ ಜನರು ಯುಗಾದಿ ಹಬ್ಬದ ದಿನ ಸವಿಯುತ್ತಾರೆ.

ಯುಗಾದಿಯ ಊಟದಲ್ಲಿ ಚಿತ್ರಾನ್ನ ಅದರಲ್ಲೂ ಮಾವಿನಕಾಯಿ ಚಿತ್ರಾನ್ನಕ್ಕೆ ಅತ್ಯಂತ ಮಹತ್ವವಿದೆ. ಚಳಿಗಾಲದಲ್ಲಿ ಮಾವು ಹೂ ಬಿಡುತ್ತದೆ. ಬೇಸಿಗೆ ಆರಂಭದಲ್ಲಿ ಅದು ಕಾಯಿಯಾಗಿ ಹೊಸ ಫಸಲು ಕೈಗೆ ಸೇರಿರುತ್ತದೆ. ಎಳೆ ಮಾವಿನಕಾಯಿಯನ್ನು ಉಪಯೋಗಿಸಿಕೊಂಡು ಯುಗಾದಿ ಹಬ್ಬಕ್ಕೆ ಮಾವಿನಕಾಯಿ ಚಿತ್ರಾನ್ನ ತಯಾರು ಮಾಡಿ ಸವಿಯಲಾಗುತ್ತದೆ. ಚಿತ್ರಾನ್ನ ಮಾಡುವುದು ಅತಿ ಸುಲಭದ ಕೆಲಸ, ಅದರಲ್ಲೂ ಅವಿವಾಹಿತ ಪಾಲಿನ ಸದಾ ಇಷ್ಟದ ಆಹಾರ ಎಂದರೆ ಚಿತ್ರಾನ್ನ. ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು, ಅರಿಶಿಣ, ಲಿಂಬೆಹಣ್ಣು, ಶೇಂಗಾ ಬೀಜ ಸಿಕ್ಕರೆ ಚಿತ್ರಾನ್ನ ಸಿದ್ಧ ಮಾಡಿಬಿಡಬಹುದು. ಆದರೆ ಯುಗಾದಿಯ ದಿನ ಮಾಡುವ ಚಿತ್ರಾನ್ನ ಅದರಲ್ಲೂ ಮಾವಿನಕಾಯಿ ಚಿತ್ರಾನ್ನಕ್ಕೆ ವಿಶೇಷವಾದ ಮಹತ್ವವಿದೆ.

ಹಬ್ಬದ ದಿನವಾದ ಕಾರಣ ಹಲವು ಮನೆಗಳಲ್ಲಿ ಈರುಳ್ಳಿ ಬಳಕೆ ಮಾಡುವುದಿಲ್ಲ. ಲಿಂಬೆಹಣ್ಣಿನ ಬದಲು ಮಾವಿನಕಾಯಿ ತುರಿ ಬಳಕೆ ಮಾಡಿಕೊಂಡು ಚಿತ್ರಾನ್ನ ತಯಾರು ಮಾಡುತ್ತಾರೆ. ಘಮಘಮಿಸುವ ಮಾವಿನಕಾಯಿ ಚಿತ್ರಾನ್ನವನ್ನು ಈ ಯುಗಾದಿ ಹಬ್ಬಕ್ಕೆ ತಯಾರು ಮಾಡುವುದು ಹೇಗೆ? ಎಂಬ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ. ಈ ಯುಗಾದಿ ಹಬ್ಬ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಒನ್ ಇಂಡಿಯಾ ಕನ್ನಡದ ಓದುಗರಿಗೆಲ್ಲ ಯುಗಾದಿ ಹಬ್ಬದ ಶುಭಾಶಯಗಳು.

Ugadi 2023 Mango Chitranna Recipe In Kannada

ಮಾವಿನಕಾಯಿ ಚಿತ್ರಾನ್ನ; ಯುಗಾದಿ ಹಬ್ಬದಂದು ಮಾವಿನಕಾಯಿ ಚಿತ್ರಾನ್ನ ಮಾಡಲು ಬೇಕಾದ ಸಾಮಾಗ್ರಿಗಳು. ಅನ್ನ, ಹುರಿದ ಅಥವ ಹಸಿ ಶೇಂಗಾ ಬೀಜ, ಹಸಿ ಮೆಣಸಿನಕಾಯಿ, ಒಂದೆರಡು ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಅಡುಗೆ ಎಣ್ಣೆ (ಕೊಬ್ಬರಿ ಎಣ್ಣೆಉತ್ತಮ), ಇಂಗು, ಕರಿ ಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ತುರಿದ ಮಾವಿನಕಾಯಿ, ತೆಂಗಿನ ತುರಿ.

ಒಲೆಯ ಮೇಲಿಟ್ಟ ಬಾಣಲೆ ಸರಿಯಾಗಿ ಕಾದ ನಂತರ ಎಣ್ಣೆಯನ್ನು ಹಾಕಿ. ಶೇಂಗಾ ಬೀಗ, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಇಂಗು ಸೇರಿಸಿ. ಅರಿಶಿಣ, ತುರಿದುಕೊಂಡ ಮಾವಿನಕಾಯಿ ಸೇರಿಸಿ ಚೆನ್ನಾಗಿ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಾವಿನ ಕಾಯಿಯ ಘಮ ಹೋಗದಂತೆ ಚೆನ್ನಾಗಿ ಫ್ರೈ ಮಾಡಿ. ತೆಂಗಿನ ತುರಿಯನ್ನು ಸೇರಿಸಿ ಅಂತಿಮವಾಗಿ ಅನ್ನವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಯುಗಾದಿಯ ಹಬ್ಬದ ಊಟದ ಜೊತೆ ಮಾವಿನಕಾಯಿ ಚಿತ್ರಾನ್ನ ಸವಿಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+