ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ,ಭಾದ್ರಪದ ಮಾಸಗಳ ಹಬ್ಬ ಹರಿದಿನಗಳ ಪಟ್ಟಿ

|
Google Oneindia Kannada News

ಆಷಾಡದ ತಣ್ಣನೆಯ ಗಾಳಿಯಿಂದ ಕಾಲಚಕ್ರ ಶ್ರಾವಣ ಮಾಸದತ್ತ ತಿರುಗಿತ್ತಿದೆ. ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸದಲ್ಲಿ ದಿನವೂ ಏನಾದರೂ ಹಬ್ಬ, ಭೋಜನ ಪ್ರಿಯರಿಗಂತೂ ನಿತ್ಯವೂ ಫುಲ್ ಮೀಲ್ಸ್.

ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಎನ್ನುವಂತೆ ಹಬ್ಬದ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದ ಎನ್ನದೇ ತಮ್ಮ ತಮ್ಮ ಶಕ್ತ್ಯಾನುಸಾರ ಬರುವ ಹಬ್ಬಗಳನ್ನು ಸ್ವಾಗತಿಸಿ, ಆಚರಿಸಿ, ಸಂಭ್ರಮಿಸುವ ಮಾಸ.

ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಅಥವಾ ದೀವಿಗೆ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ನಿಮಿತ್ತವಾಗಿ ಬರುವ ಸಾಲುಸಾಲು ರಜೆಗಳನ್ನು ಎದುರು ನೋಡುವ ಸಮಯ, ಅದರಲ್ಲಿ ವಾರಾಂತ್ಯದಲ್ಲಿ ಬರುವ ರಜೆಗಳ ಲೆಕ್ಕಾಚಾರ ಮಾಡುವ ಸಮಯ. ಇದೇ ತಿಂಗಳ ಏಳರಂದು ಶ್ರಾವಣ ಮಾಸ ಆರಂಭವಾಗುತ್ತಿದೆ.

Festival Holidyas

ಒನ್ ಇಂಡಿಯಾ ಕನ್ನಡ 2013ರಲ್ಲಿನ ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಬರುವ ಹಬ್ಬಹರಿದಿನಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದೆ. ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆಯಿರಿ ಅಥವಾ ಅಡುಗೆ ಮನೆಯ ಗೋಡೆಯ ಮೇಲೆ ಅಂಟಿಸಿರಿ. ಒಟ್ಟಿನಲ್ಲಿ ಸಂಭ್ರಮದಿಂದ ಹಬ್ಬಗಳನ್ನು ಆಚರಿಸಿ. ಹ್ಯಾಪಿ ಶ್ರಾವಣ ಮಾಸ.

ಶಾಲಿವಾಹನ ಶಕ 1936 ವಿಜಯ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ,2013
ದಿನಾಂಕ ದಿನ ಹಬ್ಬ ರಜಾದಿನ
10.08.2013,
17.08.2013,
24.08.2013,
31.08.2013,
ಶನಿವಾರ ಶ್ರಾವಣ ಶನಿವಾರ --
06.08.2013 ಮಂಗಳವಾರ ದೀವಿಗೆ ಅಮವಾಸ್ಯೆ,
ಭೀಮನ ಅಮವಾಸ್ಯೆ
--
07.08.2013 ಬುಧವಾರ ಸಂಪದ್ ಗೌರೀ ವೃತ --
09.08.2013 ಶುಕ್ರವಾರ (ಈ ಮುಂಚೆ ಘೋಷಿಸಿದ ದಿನಾಂಕ) ರಂಜಾನ್ ರಜೆ
11.08.2013 ಭಾನುವಾರ ನಾಗರ ಪಂಚಮಿ --
13.08.2013 ಮಂಗಳವಾರ ಮಂಗಳ ಗೌರೀ ವೃತ,
ತುಳಸೀದಾಸ ಜಯಂತಿ
--
15.08.2013 ಗುರುವಾರ ಸ್ವಾತಂತ್ರ್ಯ ದಿನಾಚರಣೆ ಸಾರ್ವತ್ರಿಕ ರಜೆ
16.08.2013 ಶುಕ್ರವಾರ ವರಮಹಾಲಕ್ಷ್ಮಿ ವೃತ ನಿರ್ಬಂಧಿತ ರಜೆ
20.08.2013 ಮಂಗಳವಾರ ಸರ್ವ ಖುಗುಪಾಕರ್ಮ,
ಯಜುರುಪಾಕರ್ಮ,
ಓಣಂ,
ರಕ್ಷಾಬಂಧನ,

ನಿರ್ಬಂಧಿತ ರಜೆ
21.08.2013 ಬುಧವಾರ ಹಯಗ್ರೀವ ಜಯಂತಿ,
ಸಮುದ್ರಪೂಜೆ
--
22.08.2013 ಗುರುವಾರ ಶ್ರೀರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ --
28.08.2013 ಬುಧವಾರ ಶ್ರೀಕೃಷ್ಣ ಜನ್ಮಾಷ್ಠಮಿ
ನಿರ್ಬಂಧಿತ ರಜೆ
29.08.2013 ಗುರುವಾರ ಶ್ರೀಕೃಷ್ಣ ಲೀಲೋತ್ಸವ,
ಉಡುಪಿ ವಿಟ್ಲಪಿಂಡಿ
--
05.09.2013 ಗುರುವಾರ ಬೆನಕನ ಅಮವಾಸ್ಯೆ,
ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಜನ್ಮದಿನ,
ಶಿಕ್ಷಕರ ದಿನಾಚರಣೆ
--
ಶಾಲಿವಾಹನ ಶಕ 1936 ವಿಜಯ ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪಾದ ಮಾಸ, 2013
08.09.2013 ಭಾನುವಾರ ಗೌರಿ ತೃತೀಯ,
ಸಾಮೋಪಕರ್ಮ
--
09.09.2013 ಸೋಮವಾರ ಗಣೇಶ ಚತುರ್ಥಿ ರಜೆ
10.09.2013 ಮಂಗಳವಾರ ಭೂವರಾಹ ಜಯಂತಿ,
ಖುಷಿಪಂಚಮಿ
--
18.09.2013 ಬುಧವಾರ ಅನಂತ ಚತುರ್ದಶಿ,
ನೋಂಪು
--
02.10.2013 ಬುಧವಾರ ಗಾಂಧಿ ಜಯಂತಿ ಸಾರ್ವತ್ರಿಕ ರಜೆ
04.10.2013 ಶುಕ್ರವಾರ ಮಹಾಲಯ ಅಮವಾಸ್ಯೆ,
ಸರ್ವಪಿತೃ ಅಮವಾಸ್ಯೆ
ಸರಕಾರೀ ರಜೆ
English summary
List of Hindu, Muslim festivals and Karnataka Government holidays during the month of August to October 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X