ಸ್ನೇಹದ ಅನುಬಂಧಕ್ಕೆ ಈ ಫ್ರೆಂಡ್ ಶಿಪ್ ರಾಖಿ
ತಂಗಿಯೆಡೆಗಿನ
ವಿಶೇಷ ಕಾಳಜಿ, ಪ್ರೀತಿಯನ್ನು ಪ್ರತಿನಿಧಿಸುವ ಈ ರಕ್ಷಾಬಂಧನದಲ್ಲಿ ಅಣ್ಣನಿಗೆ, ನೀನು ನನ್ನ ಅಣ್ಣ ಮಾತ್ರವಲ್ಲ, ನನ್ನ ನೋವು ನಲಿವುಗಳನ್ನು ಹಂಚಿಕೊಳ್ಳುವ ಆಪ್ತ ಗೆಳೆಯನಿದ್ದಂತೆ ಎಂದೂ ರಾಖಿ ಕಟ್ಟುವ ಪರಿ ಇದೆ. ಒಂದೇ ಮಡಿಲಲ್ಲಿ ಹುಟ್ಟಿ ಜೊತೆಯಲ್ಲಿ ಬೆಳೆದ ಅಣ್ಣ ತಂಗಿಯರ ಈ ಮಧುರ ಬಂಧಕ್ಕೆ ಈ ದಿನ ಪ್ರಮುಖವಾದುದು. id="toptextpromo">ಫ್ರೆಂಡ್
ಶಿಪ್ ಬ್ಯಾಂಡ್ ಗಳನ್ನು ಸ್ನೇಹಿತರ ದಿನ ಕಟ್ಟುತ್ತೇವೆ. ಇದನ್ನು ಏಕೆ ಅಣ್ಣನಿಗೆ ಕಟ್ಟಬೇಕು ಅನ್ನುತ್ತೀರ? ಇದೀಗ ಫ್ರೆಂಡ್ ಶಿಪ್ ಕಮ್ ರಕ್ಷಾಬಂಧನ ರಾಖಿಗಳೂ ಕೂಡ ಬಂದಿವೆ. ಈ ರಾಖಿಯಿಂದ ಅಣ್ಣನಿಗೆ ನೀನು ನನಗೆ ಆಪ್ತರಲ್ಲಿ ಆಪ್ತ ಗೆಳೆಯನಿದ್ದಂತೆ ಎಂದು ಸಂದೇಶ ನೀಡಿದಂತಾಗುತ್ತದೆ. id='are-slot-1' class='oiad oi-axt oiadv'> id='top-searched-articles'>;ಜೀನ್ಸ್,
ಮಾಡರ್ನ್ ಡ್ರೆಸ್ ಗಳಿಗೆ ಈ ರಾಖಿ ಒಳ್ಳೆ ಮ್ಯಾಚ್. ರಬ್ಬರ್ ನಲ್ಲಿ ಮತ್ತು ಮೆಟಲ್ ಪೀಸ್ ನಲ್ಲಿ ಈ ಡಿಫರೆಂಟ್ ರಾಖಿಗಳು ಸಿಗುತ್ತವೆ. ಇದನ್ನು ನಿಮ್ಮ ಅಣ್ಣನಿಗೆ ಕಟ್ಟಿದರೆ ನಿಮ್ಮ ಭ್ರಾತೃತ್ವ ಮತ್ತು ಸ್ನೇಹ ಬಂಧ ಎರಡೂ ಗಟ್ಟಿಗೊಳ್ಳುತ್ತದೆ. ಅಷ್ಟೇ ಅಲ್ಲ, ಕೈಗಳಿಗೆ ಚೆಂದ ಕಾಣುವ ಈ ರಾಖಿಯನ್ನ ಸಂತೋಷದಿಂದ ಕಟ್ಟಿಸಿಕೊಳ್ತಾರೆ ನಿಮ್ಮ ಅಣ್ಣಂದಿರು.











Click it and Unblock the Notifications