ಕ್ರಿಸ್ಟಲ್ ರಾಖಿ ನೀಡಲಿ ಸ್ಫಟಿಕದಂಥ ಸಂಬಂಧ

ಬ್ರೇಸ್ಲೆಟ್ ರಾಖಿ: ಬ್ರೇಸ್ಲೆಟ್ ರಾಖಿ ಮಾರ್ಡನ್ ಮತ್ತು ಸಾಂಪ್ರದಾಯಿಕ ವಿನ್ಯಾಸ ಎರಡರ ಮಿಶ್ರಣದಂತೆ. ಬೆಳ್ಳಿ ಬ್ಯಾಂಡ್ ನಂತೆ ಕಾಣುವ ಈ ರಾಖಿ ಹುಡುಗರಿಗೆ ಹೇಳಿ ಮಾಡಿಸಿದಂತೆ. ತಮ್ಮ ವಾಚ್ ನೊಂದಿಗೂ ಹೊಸ ಲುಕ್ ಕೊಡುವ ಈ ರಾಖಿಗಳನ್ನು ನಿಮ್ಮ ಅಣ್ಣ ತಮ್ಮಂದಿರು ಖುಷಿಯಿಂದ ಕಟ್ಟಿಸಿಕೊಳ್ಳುವುದಂತೂ ಗ್ಯಾರಂಟಿ.
;ಮೆಟಲ್, ಹಿತ್ತಾಳೆ, ಬೆಳ್ಳಿ, ಚಿನ್ನದ ಬಣ್ಣದ ಲೇಪಿತವಿರುವ ಈ ಬ್ರೇಸ್ಲೆಟ್ ಗಳು ರಾಯಲ್ ಲುಕ್ ಕೊಡುವುದಲ್ಲದೆ ಇದು ನೋಡಿದ ತಕ್ಷಣ ಡೈಮಂಡ್
ಇರಬಹುದೇನೋ ಎಂದೂ ಅನಿಸುವುದುಂಟು. ಆದ್ದರಿಂದ ಈ ಬಾರಿ ಸ್ಪೆಷಲ್ ಆಗಿ ಈ ಬ್ರೇಸ್ಲೆಟ್ ರಾಖಿ ಕಟ್ಟಿ ನಿಮ್ಮ ಅಣ್ಣನನ್ನು ಸಂತೋಷಪಡಿಸಿ.
ಸಾಂಪ್ರದಾಯಿಕವಾಗಿದ್ದ ರಾಖಿ ಹಬ್ಬ ಇದೀಗ ಫ್ಯಾಷನ್ ಆಗಿ ಬದಲಾಗುತ್ತಿದೆ.
ಕ್ರಿಸ್ಟೆಲ್ ಬ್ರೇಸ್ಲೆಟ್ ರಾಖಿ: ಹೊಳೆಯುವ ಬ್ರೇಸ್ಲೆಟ್ ರಾಖಿಗಳನ್ನ ಇಷ್ಟಪಡುವವರಿಗೆ ಈ ಕ್ರಿಸ್ಟಲ್ ರಾಖಿ ತುಂಬಾ ಅಚ್ಚುಮೆಚ್ಚಾಗುತ್ತೆ. ತಮ್ಮ ಚೆಂದದ ಬಟ್ಟೆಗೆ
ತಕ್ಕುದಾಗಿ ಈ ಕ್ರಿಸ್ಟಲ್ ಬ್ರೇಸ್ಲೆಟ್ ರಾಖಿ ತೊಟ್ಟರೆ ನಿಜಕ್ಕೂ ನಿಮ್ಮ ಅಣ್ಣ ಆಕರ್ಷಣೆಯ ಕೇಂದ್ರ ಬಿಂದು ಆಗುವುದರಲ್ಲಿ ಎರಡು ಮಾತಿಲ್ಲ. ತುಂಬಾ ಸೂಕ್ಷ್ಮವಾಗಿರುವ ಈ ಕ್ರಿಸ್ಟಲ್ ಬ್ರೇಸ್ಲೆಟ್ ಗಳು ಅನೇಕ ಡಿಸೈನ್ ಮತ್ತು ವಿವಿಧ ಬಣ್ಣಗಳಲ್ಲಿ ಸಿಗುತ್ತವೆ. ಇವುಗಳಲ್ಲಿ ನಿಮಗೊಪ್ಪುವ, ನಿಮ್ಮ ಅಣ್ಣನ ಮೆಚ್ಚುಗೆಗೆ ಅರ್ಹವಾಗುವ ರಾಖಿಯನ್ನು ಕಟ್ಟಿ ಅಣ್ಣನನ್ನು ಖುಷಿ ಪಡಿಸಿ ರಾಖಿ ಹಬ್ಬವನ್ನು ಸಂತೋಷದಿಂದ ಆಚರಿಸಿ.












Click it and Unblock the Notifications