ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದಂಥ ಸಂಬಂಧಕ್ಕೆ ಮುತ್ತಿನ ರಾಖಿ

|
Google Oneindia Kannada News

Bejewelled rakhi
ಎಲ್ಲೋ ದೂರದೂರಿನಲ್ಲಿರುವ ಅಣ್ಣನಿಗೆ ತಂಗಿ ಪ್ರೀತಿಯಿಂದ ರಾಖಿ ಆಯ್ಕೆ ಮಾಡಿ ಕಳುಹಿಸಿಕೊಡುತ್ತಾಳೆ. ಅದನ್ನು ಅಣ್ಣನೂ ಕೂಡ ಅಷ್ಟೇ ಜತನದಿಂದ ಕಾಪಾಡಿಕೊಳ್ಳುತ್ತಾನೆ. ರಾಖಿ ಬರಿಯ ವಸ್ತುವಲ್ಲ, ಎರಡು ಹೃದಯಗಳ ನವಿರಾದ ಬಾಂಧವ್ಯದ ಸೋಪಾನ. ಸೋದರ ಸೋದರಿ ನಡುವೆ ಪ್ರೀತಿಹಂಚಿಕೊಳ್ಳಲು ರಾಖಿ ಹಬ್ಬ ಅಪೂರ್ವ ಅವಕಾಶ. ಮನೆಯಲ್ಲಿ ಯಾವಾಗಲೂ ಜಗಳವಾಡುವ ಅಣ್ಣ ತಂಗಿಯರೂ ಕೂಡ ರಾಖಿ ಹಬ್ಬದಂದು ಎಲ್ಲವನ್ನು ಮರೆತು ಪ್ರೀತಿಯಿಂದ ರಾಖಿ ಕಟ್ಟುತ್ತಾರೆ. ಸಿಹಿ ತಿಂಡಿ ಹಂಚಿಕೊಳ್ಳುತ್ತಾರೆ.

;

ಇಂತಹ ಚಿನ್ನದಂಥ ಬಂಧಕ್ಕೆ ಹೆಸರುವಾಸಿಯಾಗಿರುವ ರಕ್ಷಾಬಂಧನದಲ್ಲಿ ನಮ್ಮ ಈ ಅನುಬಂಧ ಚಿನ್ನದಂತೆ ಪ್ರಜ್ವಲಿಸಬೇಕು, ಗಟ್ಟಿಯಾಗಿರಬೇಕು ಮತ್ತು ನಿರಂತರವಾಗಿರಬೇಕು ಎಂದು ಸೋದರಿಯರು ಸೋದರರಿಗೆ ಹಾರೈಸಿ ರಕ್ಷಾಬಂಧನವನ್ನು ಕಟ್ಟುತ್ತಾರೆ.

;

ಈಗ ಚಿನ್ನದ ರೀತಿ ವಿನ್ಯಾಸಗೊಳಿಸಿರುವ ಡಿಸೈನರ್ ರಾಖಿಗಳನ್ನು ಕಟ್ಟುವುದೂ ಹೊಸತಾಗಿದೆ. ಅನೇಕ ಹರಳು, ಬೆಲೆಬಾಳುವ ರತ್ನಗಳನ್ನು ಹೊಂದಿರುವ ಈ ರಾಖಿಯನ್ನು ಕಟ್ಟಿದರೆ ಸಂಬಂಧವೂ ಬೆಲೆಬಾಳುತ್ತದೆ ಎಂಬ ನಂಬಿಕೆ. ಜರ್ದೋಸಿ ರಾಖಿಯಂತೆ ಇದನ್ನೂ ಕೂಡ ಡಿಸೈನ್ ಮಾಡಲಾಗಿರುತ್ತೆ. ಆದರೆ ಈ ಡಿಸೈನ್ ಗಳು ಅತಿಯಾಗಿರದೆ ಕಣ್ಣಿಗೆ ಮತ್ತು ಮನಕ್ಕೆ ಹಿತವೆನಿಸುವಂತಿರುತ್ತವೆ. ಬೆಲೆ ಸ್ವಲ್ಪ ಹೆಚ್ಚೆನಿಸಿದರೂ ರಾಖಿಯ ಡಿಸೈನ್ ಗಳ ಮುಂದೆ ಬೆಲೆ ಗಣನೆಗೆ ಬರುವುದಿಲ್ಲ.

ಇನ್ನೇಕೆ ತಡಮಾಡುತ್ತೀರ? ಇಷ್ಟೂ ವಿಧಧ ರಾಖಿಗಳಲ್ಲಿ ನಿಮ್ಮ ಅಣ್ಣನಿಗೆ ಒಪ್ಪುವಂತ ಮತ್ತು ಅಚ್ಚುಮೆಚ್ಚಾಗುವ ರಾಖಿಯನ್ನು ಕೊಂಡುಕೊಳ್ಳಲು ತಯಾರಾಗಿ. ನಿಮ್ಮ ಈ ಅನುಬಂಧ ಎಂದೆಂದೂ ಹಸಿರಾಗಿರಲಿ...

English summary
Gone are the days when rakhis for Rakshabandhan were symbolic threads to be tied on the brothers wrist. With the upcoming age of consumerism, traditional rakhis are steadily going out of fashion. Now a days we have what is called. 'designer rakhis'. Take a look at designer rakhi's whether it will suit your brother for this raksha bandhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X