ವಿಶೇಷ ಕನ್ನಡಿಗ: ಬಿಎಂಟಿಸಿ ನಿರ್ವಾಹಕ ಚಂದ್ರೇಗೌಡ

Posted By:
Subscribe to Oneindia Kannada
   ಕನ್ನಡವನ್ನೇ ಬಳಸುತ್ತಾ , ಉಳಿಸುತ್ತಾ ಬೆಳೆಸುತ್ತಿದ್ದಾರೆ ಹೆಮ್ಮೆಯ ಕನ್ನಡಿಗ ಚಂದ್ರೇಗೌಡ | Oneindia Kannada

   62ನೇ ಕನ್ನಡ ರಾಜ್ಯೋತ್ಸವದ ಈ ಸುಸಂಧರ್ಭದಲ್ಲಿ ವಿಶೇಷ ಕನ್ನಡಿಗರನ್ನು ನಿಮಗೆ ಪರಿಚಯಿಸುವ ಪ್ರಯತ್ನ ನಿಮ್ಮ ಒನ್ ಇಂಡಿಯಾ ಕನ್ನಡ ಮಾಡುತ್ತಿದೆ.

   ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!

   ಕನ್ನಡದ ವಿಶಿಷ್ಟ ಸೇವಕರನ್ನು ಹುಡುಕಿ ಹೊರಟಾಗ ನಮಗೆ ಸಿಕ್ಕ ಮೊದಲ ವ್ಯಕ್ತಿಯೇ ಚಂದ್ರೇಗೌಡ. ವೃತ್ತಿಯಲ್ಲಿ ಬಿಎಂಟಿಸಿ ನಿರ್ವಾಹಕರಾಗಿರುವ ಇವರು ಕನ್ನಡ ಸೇವೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.

   Meet famous Kannda Condutor of BMTC Chandre Gowda

   ಬಿಎಂಟಿಸಿ ಸರ್ಕಾರಿ ಸಂಸ್ಥೆಯಲ್ಲಿ ಸರಿಸುಮಾರು 16 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಚಂದ್ರೇಗೌಡ ಅವರು ಮೊದಲು ಚಾಲಕರಾಗಿ ನಂತರ ನಿರ್ವಾಹಕರಾಗಿದ್ದಾರೆ. ಇವರ ವಿದ್ಯಾರ್ಹತೆ ಹತ್ತನೇ ತರಗತಿ.

   ಟ್ವಿಟ್ಟರ್ ನಲ್ಲಿ #ಕನ್ನಡರಾಜ್ಯೋತ್ಸವ ಟ್ರೆಂಡಿಂಗ್

   ಕನ್ನಡ ಭಾಷೆಯ ಜೊತೆಗೆ ಆಂಗ್ಲ ಭಾಷೆಯು ನಮ್ಮ ಬದುಕಿನ ಭಾಗವಾಗಿರುವಾಗ ಅದಕ್ಕೆ ವಿರುದ್ಧವೆಂಬಂತೆ ಇವರು ತಮ್ಮ ದೈನಂದಿನ ಜೀವನದಲ್ಲಿ ಒಂದೇ ಒಂದು ಇತರೆ ಭಾಷೆಯ ಪದಗಳನ್ನು ಬಳಸದೆ ಪ್ರತಿಯೊಂದನ್ನು ಕನ್ನಡವಾಗಿಸುತ್ತ ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷಿಗರಿಗೂ ಕನ್ನಡವನ್ನು ಕಲಿಸುತ್ತಾ, ಬಳಸುತ್ತಾ ಜೊತೆಗೆ ಉಳಿಸುತ್ತಾ ಬೆಳೆಸುತ್ತಿದ್ದಾರೆ.

   Meet famous Kannda Condutor of BMTC Chandre Gowda

   ತಾವು ಪ್ರಯಾಣಿಸುವ ಮಾರ್ಗದ ಬಸ್ಸಿನಲ್ಲಿ ತನ್ನೆಲ್ಲ ವ್ಯವಹಾರಗಳನ್ನು, ನಿಲ್ದಾಣಗಳ ಹೆಸರುಗಳನ್ನೂ ಮತ್ತು ತಮ್ಮ ಸಹೋದ್ಯೋಗಿಗಳ ಜೊತೆ ಮಾತುಕತೆ ಹೀಗೆ ಪ್ರತಿಯೊಂದನ್ನು ಕನ್ನಡದಲ್ಲಿ ಮಾಡುತ್ತಾ ಕನ್ನಡದಲ್ಲೇ ಉಸಿರಾಡುತ್ತಿದ್ದಾರೆ. ಇದಲ್ಲದೆ ಇವರ ಈ ಸೇವೆಯನ್ನು ಗಮನಿಸಿ ಹಲವಾರು ಖಾಸಗಿ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

   ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

   ಇವರು ಅಚ್ಚ ಕನ್ನಡದಲ್ಲಿ ಸ್ವಚ್ಛ ಉಚ್ಚಾರಣೆಯ ಭಾಷಾ ಪ್ರೇಮಕ್ಕೆ ಹಲವಾರು ಖುಷಿಯಿಂದ ಪ್ರಶಂಸಿಸಿದರೆ ಇನ್ನೂ ಕೆಲವರು ವ್ಯಂಗ್ಯವಾಡುತ್ತಾರೆಂದು ಹೇಳುತ್ತಾ ನಗುನಗುತ್ತಲೇ ತಮ್ಮ ಕೆಲಸವನ್ನು ನಿಷ್ಟೆಯಿಂದ ಮಾಡುತ್ತಿದ್ದಾರೆ .

   Meet famous Kannda Condutor of BMTC Chandre Gowda

   ಈಗಿನ ಕಾಲದ ಮಕ್ಕಳಲ್ಲಿನ ಕನ್ನಡ ಭಾಷೆಯ ಬಗೆಗಿನ ತಾತ್ಸಾರ, ಕಡೆಗಣನೆ ಕನ್ನಡ ಮಾತನಾಡುವುದಕ್ಕೆ ಹಿಂಜರಿಯುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ ಈಗೆಲ್ಲ ಭಾಷೆಯ ಪರವಾದ ಎಲ್ಲಾ ಹೋರಾಟಗಳು ಲಾಭದ ಅಂಶಗಳಿಂದ ಕೂಡಿರುತ್ತವೆ ಯಾವುದರಲ್ಲೂ ಸದುದ್ದೇಶವಿರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು ..

   ನಾನು ಕಲಿತಿರುವುದು ಕೇವಲ 50ರಷ್ಟು ಕನ್ನಡ ಕಲಿಯುವುದು ಮತ್ತು ಕಲಿಸುವುದು ಇನ್ನೂ ಸಾಕಷ್ಟಿದೆ ಎಂದು ತಮ್ಮ ಆಶಯವನ್ನು ಹಂಚಿಕೊಂಡರು.

   ನಮ್ಮನಿಮ್ಮೆಲ್ಲರ ಹೆಮ್ಮೆಯ ಕನ್ನಡಿಗ ಚಂದ್ರೇಗೌಡ ಅವರ ಸಂದರ್ಶನವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ..

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Meet famous Kannda Condutor of BMTC Chandre Gowda who uses only Kannada language in his daily routine work and encourages non-Kannadigas to learn and use Kannada language.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ