ಅಮೆರಿಕಾದಲ್ಲೊಂದು ಕನ್ನಡ ಶಾಲೆ!

* ನಾಗರಾಜ ಮಲ್ಲೇಶ್ವರಪ್ಪ, ನ್ಯೂಯಾರ್ಕ್
ಇದೇನಪ್ಪ ಬೆಳಿಗ್ಗೆ ಬೆಳಿಗ್ಗೆನೆ ಏಪ್ರಿಲ್ ಪೂಲ್ ಮಾಡ್ತಾ ಇದಾರಲ್ಲ... ಇವತ್ತು ಏನು ಏಪ್ರಿಲ್ 1st? ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ ದುರ್ಬೀನ್ ಇಡ್ಕೊಂಡು ಹುಡುಕಾಡೋ ಈ ಕಾಲದಲ್ಲಿ ದೂರದ ಅಮೇರಿಕಾದಲ್ಲಿ ಕನ್ನಡ ಶಾಲೆನಾ? ಎಂದು ಮೂಗಿನ ಮೇಲೆ ಬೆರಳಿಡಬೇಡಿ... ಇದು ಅಪ್ಪಟ ಸತ್ಯ!
ನ್ಯೂಯಾರ್ಕ್ ಸ್ಟೇಟ್ ಪಕ್ಕದಲ್ಲೇ ಇರುವ ಕನೆಕ್ಟಿಕಟ್ ನಲ್ಲಿ ಕನ್ನಡ ಕೂಟದ ಸಹಾಯದಿಂದ ಪ್ರತಿ ಶನಿವಾರ ಮದ್ಯಾನ್ಹ 3 ಗಂಟೆಯಿಂದ ಸುಮಾರು ಒಂದೂವರೆ ಗಂಟೆಕಾಲ ಸೌತ್ ವಿಂಡ್ಸರ್ ಲೈಬ್ರರಿಯಲ್ಲಿ ಕನ್ನಡ ಶಾಲೆ ನಡೆಯುತ್ತದೆ. 3 ವರ್ಷದಿಂದ 10 ವರ್ಷದೊಳಗಿನ ಮಕ್ಕಳು ಉತ್ಸಾಹದಿಂದ ಅ-ಆ-ಇ-ಈ, ವ್ಯಾಕರಣ ಅಭ್ಯಾಸ ಮಾಡಿ ಕನ್ನಡದಲ್ಲಿ ಮುದ್ದು ಮುದ್ದಾಗಿ ಮಾತನಾಡುವುದನ್ನು ಕೇಳಿದರೆ ಆಗುವ ಸಂತೋಷ ವರ್ಣಿಸಲು ಅಸಾದ್ಯ! [ಗ್ಯಾಲರಿ ನೋಡಿರಿ]
ಪೋಷಕರೂ ಸಹ ತಮ್ಮ ತಮ್ಮ ಬ್ಯುಸಿ ಕಾರ್ಯಕ್ರಮದಲ್ಲೂ ಪುರುಸೊತ್ತು ಮಾಡಿಕೊಂಡು 20-30 ಮೈಲಿ ಡ್ರೈವ್ ಮಾಡಿಕೊಂಡು ಮಕ್ಕಳನ್ನು ಅಷ್ಟೇ ಉತ್ಸಾಹದಿಂದ ಕನ್ನಡ ಶಾಲೆಗೆ ಕರೆತಂದು, ಎಲ್ಲರ ಜೊತೆಯಲ್ಲಿ ಕನ್ನಡದಲ್ಲೇ ಮಾತನಾಡುವುದು ನಿಜಕ್ಕೂ ಮೆಚ್ಹತಕ್ಕದ್ದೇ. ಅಷ್ಟೇ ಶ್ರದ್ದೆಯಿಂದ, ಪ್ರೀತಿಯಿಂದ ಬಿಡುವು ಮಾಡಿಕೊಂಡು ಕನ್ನಡ ಕಲಿಸಿ ವಿದ್ಯಾದಾನ ಮಾಡುತ್ತಿರುವ ಕನ್ನಡ ಗುರುಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇತ್ತೀಚೆಗೆ ಬೆಂಗಳೂರಿಗೆ ಬಂದು ಇಳಿದಾಕ್ಷಣ ಯಾವುದೋ ಪರದೇಶಕ್ಕೆ ಬಂದಿದ್ದೇವೆ ಎನಿಸುವಂಥಹ ವಾತಾವರಣವಿತ್ತು. ಅಮೆರಿಕಾದಲ್ಲಿ ಕನ್ನಡದ ಕಂಪನ್ನು ಹರಡುತ್ತಿರುವ, ಕನ್ನಡ ಭಾಷೆ - ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಗುರುಗಳಿಗೂ, ಪೋಷಕರಿಗೂ ಎಲ್ಲರಿಗೂ ಹೃದಯ ಪೂರ್ವಕ ವಂದನೆಗಳು. ಜೈ ಕರ್ನಾಟಕ ಮಾತೆ!
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications