ಹೂವು- ಹಣ್ಣು

ಜೋಜೋ ನನ್ನ ಮುದ್ದಿನ ಕಂದ ಗುಮ್ಮನೆ
ಬಂದಳೋ ಜೋ ಆಯಿ ಜೋ ಜೋ
ನನ್ನ ಚಿನ್ನದ ಕಂದ ಚಂದಿರ ಬಂದ ಜೋಜೋ ಆಯಿ।

ತಾಯಿ ತಾಯಿ ಲಾಲಿ ಹಾಡೋ ಭೂಮಿ ಹಾಡೋ ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ ।।ತಾಯಿ।।

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು ಅನುಕ್ಷಣಾ ಮಿಡಿವಳು
ಕಾಲಕೂಟವನ್ನು ಸಹಿಸಿ ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ ದುಡಿವಳು
ಮಗುವಿಗೆ ಎಂದೂ ಪ್ರೇಮಮಯಿ ಈ ತಾಯಿ ।।ತಾಯಿ।।

ಗರ್ಭವೇ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ ವಹಿಸಿದಾ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ ಇರುವಳು ದಿನ ಉಪವಾಸ
ವೇದಮಯಿ ಈ ತಾಯಿ ।।ತಾಯಿ।।

ಯೌವನ ಜತೆ ಬಡತನ ಹಂಗಿಸೋ ಆ ಸಿರಿತನ
ಈ ಉದರಕಾಗಿ ಈ ಅಧರಕ್ಕೆ ಕಹಿ ಚುಂಬನಾ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವಾ
ತ್ಯಾಗಮಯಿ ಈ ತಾಯಿ ।।ತಾಯಿ।।

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+