ಆಯಿ ನಿನ್ನ ಹೊಟ್ಟೆಯಲ್ಲಿ
ಆಯಿ ನಿನ್ನ ಹೊಟ್ಟೆಯಲ್ಲಿ
ಮತ್ತೆ ನನ್ನ ಇಟ್ಟುಕೋ
ಮತ್ತೆ ನನ್ನ ಹುಟ್ಟಿಸು
ಬಸಿರೊಳಗಿನ ಕತ್ತಲಲ್ಲಿ
ಮತ್ತೆ ನನ್ನ ಮಲಗಿಸು
ನಿನ್ನ ರಕ್ತ ಮಾಂಸದಲ್ಲಿ
ಮತ್ತೆ ನನ್ನ ರೂಪಿಸು
ನೀನು ಹಾಲು ಕರೆಯುವಾಗ
ಅದರ ಸದ್ದು ಕೇಳುವೆ
ನಿನ್ನ ಹಾಡು ಆಲಿಸುತ್ತ
ಮತ್ತೆ ನಿದ್ದೆ ಹೋಗುವೆ
ಆಯಿ ನಿನ್ನ ಹೊಟ್ಟೆಯಲ್ಲಿ
ಮತ್ತೆ ನನ್ನ ಇಟ್ಟುಕೋ
ನನಗೆ ಮತ್ತೆ ಜನ್ಮಕೊಟ್ಟು
ನಿನ್ನ ಎದೆಗೆ ಒತ್ತಿಕೋ
ಚಿಂತಾಮಣಿ ಕೊಡ್ಲೆಕೆರೆ












Click it and Unblock the Notifications