ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲಾಷ್ಟಮಿ ಜನವರಿ 2022: ದಿನಾಂಕ, ಕಥೆ, ಮಹತ್ವ, ಪೂಜಾ ವಿಧಾನ

|
Google Oneindia Kannada News

ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಕಾಲಾಷ್ಟಮಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿ, ಈ ಶುಭ ದಿನಾಂಕ ಜನವರಿ 25 ರಂದು ಮಂಗಳವಾರ ಬಂದಿದೆ. ಶಿವಪುರಾಣದ ಪ್ರಕಾರ, ಕಲಾಭೈರವ ಶಿವನ ಭಾಗದಿಂದ ಹುಟ್ಟಿಕೊಂಡವನು, ಆದ್ದರಿಂದ ಅಷ್ಟಮಿ ದಿನಾಂಕದಂದು ಬರುವ ಕಾಲಾಷ್ಟಮಿಯನ್ನು ಕಾಲಭೈರವಾಷ್ಟಮಿ ಅಥವಾ ಭೈರವಾಷ್ಟಮಿ ಎಂದೂ ಕರೆಯುತ್ತಾರೆ. ಈ ದಿನದ ಉಪವಾಸದ ಮೂಲಕ ಶಿವನು ಸಂತಸಗೊಂಡು ಶೀಘ್ರದಲ್ಲೇ ಅನುಗ್ರಹಿಸುತ್ತಾನೆ ಮತ್ತು ಶುಭ ಫಲವನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ನಾಳೆ ಆಚರಿಸಲಾಗುವ ಕಾಲಾಷ್ಟಮಿಯ ಮಹತ್ವವೇನು..? ಕಾಲಾಷ್ಟಮಿ ಪೂಜೆ ವಿಧಾನಗಳಾವುವು..?

ಭಕ್ತರು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಜೊತೆಗೆ ಭಗವಾನ್ ಕಾಲಭೈರವನನ್ನು ಪೂಜಿಸುತ್ತಾರೆ. ಪೂಜೆಯ ನಂತರ, ಅವರು ಕಾಲಭೈರವ ಕಥೆಯನ್ನು ಸಹ ಓದುತ್ತಾರೆ. ಕಾಲಾಷ್ಟಮಿ ದಿನದಂದು ಭೈರವ ಬಾಬಾ ಅಂದರೆ ಭಗವಾನ್‌ ಶಿವನು ಪಾಪಗಳಿಂದ ನಮ್ಮನ್ನು ರಕ್ಷಿಸುತ್ತಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಇದನ್ನು ಭೈರವ ಬಾಬಾ ಆರಾಧನೆ ಎಂದೂ ಕರೆಯಲಾಗುತ್ತದೆ. ಕಲಾಭೈರವನು ನಾಯಿಯ ಮೇಲೆ ಸವಾರಿ ಮಾಡುತ್ತಾನೆ. ಅದಕ್ಕಾಗಿಯೇ ಈ ದಿನ ನಾಯಿಗೆ ಆಹಾರವನ್ನು ನೀಡಬೇಕು, ದೇವರು ಇದರಿಂದ ಸಂತಸಗೊಳ್ಳುತ್ತಾನೆ. ಪ್ರಸ್ತುತ ಭೈರವನನ್ನು ಬಟುಕ್‌ ಭೈರವ ಮತ್ತು ಕಾಲಭೈರವ ಎಂದು ಪೂಜಿಸಲಾಗುತ್ತದೆ. ಮಾತ್ರವಲ್ಲದೆ ಭೀಷ್ಣ ಭೈರವ, ಚಂದ್ರ ಭೈರವ, ಕ್ರೋಧ ಭೈರವ, ರುದ್ರ ಭೈರವ, ಅಸಿತಾಂಗ ಭೈರವ, ಸಂಹಾರ ಭೈರವ, ಕಪಾಲಿ ಭೈರವ, ಉನ್ಮತ್ತ ಭೈರವ ಹೀಗೆ ಭೈರವನನ್ನು ಎಂಟು ಹೆಸರುಗಳಿಂದ ಪೂಜಿಸುವುದು ರೂಢಿಯಲ್ಲಿದೆ. ಈ ದಿನ ಕಲಾಭೈರವನನ್ನು ಆರಾಧಿಸುವುದರಿಂದ ಭಯ ಮತ್ತು ಜೀವನದ ಎಲ್ಲಾ ಅಡೆತಡೆಗಳನ್ನು ದೂರಾಗುತ್ತವೆ ಎನ್ನುವ ನಂಬಿಕೆಯಿದೆ. ಪುರಾಣಗಳ ಪ್ರಕಾರ, ಶಕ್ತಿಪೀಠಗಳ ಅಂಗರಕ್ಷಕನಾಗಿ ಕಾಲಭೈರವನು ಇರುತ್ತಾನೆ. ಆದ್ದರಿಂದ ಪ್ರತಿ ಶಕ್ತಿಪೀಠದ ಬಳಿ ಒಂದು ಕಾಲಭೈರವ ದೇವಾಲಯ ಖಂಡಿತವಾಗಿಯೂ ಕಂಡುಬರುತ್ತದೆ.

ಕಾಲಭೈರವ ನ ಕಥೆ

ಕಾಲಭೈರವ ನ ಕಥೆ

ಆದಿತ್ಯ ಪುರಾಣದಲ್ಲಿ ಈ ದಿನದ ಮಹತ್ವವನ್ನು ತಿಳಿಸಲಾಗಿದೆ. ಒಮ್ಮೆ ಮೂವರು ದೇವರಾದ ಬ್ರಹ್ಮ, ವಿಷ್ಣು ಮತ್ತು ಶಿವನ ನಡುವೆ ಯಾರು ಶ್ರೇಷ್ಠರು ಎಂಬುದಾಗಿ ವಾಗ್ವಾದ ನಡೆಯುತ್ತದೆ. ಬ್ರಹ್ಮನು ಶಿವನ ಕುರಿತಾಗಿ ಕೆಲವೊಂದು ಮಾತುಗಳನ್ನು ಹೇಳುತ್ತಾರೆ. ಸಭೆಯಲ್ಲಿ ಶಿವನ ಬಗ್ಗೆ ಪಂಡಿತರು ಋಷಿಗಳು ಹೇಳಿದ ಮಾತಿಗೆ ಬ್ರಹ್ಮನು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಮೂವರೂ ದೇವತೆಗಳು ಸಮಾನ ಶಕ್ತಿಯನ್ನು ಹೊಂದಿದ್ದಾರೆ ಎಂಬ ಮಾತಿಗೆ ಬ್ರಹ್ಮನು ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ.

ಇದರಿಂದ ಶಿವನು ಕ್ರೋಧಗೊಳ್ಳುತ್ತಾರೆ. ಹೆಚ್ಚು ಶಾಂತ ದೇವತೆ ಎಂದೇ ಕರೆಯಿಸಿಕೊಳ್ಳುವ ಶಿವನಿಗೆ ಕೂಡ ಬ್ರಹ್ಮನ ಮಾತು ಕೋಪವನ್ನು ತರಿಸುತ್ತದೆ. ಬ್ರಹ್ಮನ ವಾದವನ್ನು ಅಲ್ಲಗೆಳೆಯುವುದಕ್ಕಾಗಿ ಶಿವನು ಮಹಾಕಾಳೇಶ್ವರ ರೂಪವನ್ನು ಧರಿಸಿ ಬ್ರಹ್ಮನ ತಲೆಯನ್ನು ತುಂಡರಿಸುತ್ತಾರೆ. ಶಿವನ ಈ ಹೊಸ ರೂಪವನ್ನು ನೋಡಿ ದೇವತೆಗಳು ಹೆದರಿ ಶಿವನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾರೆ ಮತ್ತು ಬ್ರಹ್ಮನಿಗೆ ಕೂಡ ತಮ್ಮ ತಪ್ಪಿನ ಅರಿವಾಗುತ್ತದೆ. ಆದ್ದರಿಂದಲೇ ಈ ದಿನವನ್ನು ಮಹಾಕಾಳ ಅಷ್ಟಮಿ ಎಂದು ಕರೆಯಲಾಗುತ್ತದೆ.

ಏನೆಲ್ಲಾ ದಾನ ಮಾಡಬಹುದು

ಏನೆಲ್ಲಾ ದಾನ ಮಾಡಬಹುದು

ಕಲಾಭೈರವನಿಗೆ ಖಿಚಡಿಯನ್ನು, ಅಕ್ಕಿಯನ್ನು, ಬೆಲ್ಲವನ್ನು, ಎಣ್ಣೆಯನ್ನು ಸೇರಿದಂತೆ ಇತ್ಯಾದಿಗಳನ್ನು ಅರ್ಪಣೆಯಾಗಿ ಅರ್ಪಿಸಲಾಗುತ್ತದೆ. ಕಾಲಾಷ್ಟಮಿಯ ಈ ಉಪವಾಸವು ರೋಗ, ದುಃಖ ಮತ್ತು ಶತ್ರುಗಳ ಕಾಟದಿಂದ ನಮ್ಮನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಈ ದಿನ, ನೀವು ಕಾಲಭೈರವನ ನೆಚ್ಚಿನ ವಸ್ತುಗಳಾದ ನಿಂಬೆ, ಎಕ್ಕದ ಹೂವು, ಕಪ್ಪು ಎಳ್ಳು, ಧೂಪ ದಾನ, ಸಾಸಿವೆ ಎಣ್ಣೆ, ಉದ್ದಿನ ಬೇಳೆ ಇತ್ಯಾದಿಗಳನ್ನು ದಾನ ಮಾಡಬಹುದು.

ಮಹತ್ವ

ಮಹತ್ವ

ಪೂರ್ಣಮಿಯ ನಂತರ ಎಂಟನೇ ದಿನವನ್ನು ಕಾಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ಪೂರ್ಣ ಚಂದ್ರನು ಆಗಸದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಕೃಷ್ಣ ಪಕ್ಷದಲ್ಲಿ ಇದು ಬರುತ್ತದೆ. ಭಗವಂತ ಕಾಲಭೈರವ ಈ ದಿನ ಜನಿಸಿದರು ಎಂಬುದಾಗಿ ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಈ ದಿನ ಕಾಲಭೈರವನನ್ನು ಪೂಜಿಸಲಾಗುತ್ತದೆ. ಕಾಲಭೈರವ ಜಯಂತಿ ಅಥವಾ ಕಾಲಭೈರವ ಅಷ್ಟಮಿ ಎಂಬುದಾಗಿ ಕೂಡ ಈ ದಿನವನ್ನು ಕರೆಯಲಾಗುತ್ತದೆ. ಸಮಯವನ್ನು ಕಾಲವು ಪ್ರತಿನಿಧಿಸುತ್ತಿದ್ದು ಮರಣವನ್ನು ಇದು ಸೂಚಿಸುತ್ತದೆ. ಯಮ ರಾಜ ಮರಣಕ್ಕೆ ದೇವತೆಯಾಗಿದ್ದರೂ ಕಾಲನ ಆಜ್ಞೆ ಮುಖ್ಯವಾಗಿರುತ್ತದೆ. ಆದ್ದರಿಂದಲೇ ಕಾಲಭೈರವ ಅಷ್ಟಮಿ ಎಂಬುದಾಗಿ ಈ ದಿನವನ್ನು ಕರೆಯಲಾಗುತ್ತದೆ.

ಪೂಜಾ ವಿಧಾನ

ಪೂಜಾ ವಿಧಾನ

ಕಲಾಷ್ಟಮಿ ದಿನದಂದು, ಬ್ರಹ್ಮಮುಹೂರ್ತದಲ್ಲಿ ಎದ್ದು ಸ್ನಾನ ಮುಂತಾದ ದೈನಂದಿನ ಕರ್ಮಗಳನ್ನು ಮುಗಿಸಿ ಮತ್ತು ಮರದ ಹಲಗೆಯಲ್ಲಿ ಶಿವ ಮತ್ತು ಪಾರ್ವತಿ ದೇವಿಯೊಂದಿಗೆ ಕಾಲಭೈರವನ ಪ್ರತಿಮೆ ಅಥವಾ ಚಿತ್ರವನ್ನು ಸ್ಥಾಪಿಸಿ. ಇದರ ನಂತರ, ಗಂಗಾ ನೀರನ್ನು ಸುತ್ತಲೂ ಸಿಂಪಡಿಸಿ ಮತ್ತು ಎಲ್ಲಾ ಹೂವುಗಳ ಹೂಮಾಲೆ ಅಥವಾ ಹೂವುಗಳನ್ನು ಅರ್ಪಿಸಿ. ಇದರೊಂದಿಗೆ ತೆಂಗಿನಕಾಯಿ, ಜಹಾಂಗೀರ್‌, ಪಾನ್, ಮದ್ಯ, ಕೇಸರಿ ಬಣ್ಣ ಅಥವಾ ಕೇಸರಿ ಬಣ್ಣದ ಬಟ್ಟೆ ಇತ್ಯಾದಿಗಳನ್ನು ಅರ್ಪಿಸಿ. ಇದರ ನಂತರ ಧೂಪ - ದೀಪಗಳನ್ನು ಬೆಳಗಿ, ಅರಿಶಿನ ಅಥವಾ ಕುಂಕುಮದಿಂದ ಎಲ್ಲರಿಗೂ ತಿಲಕವನ್ನು ಇಡಿ.

 ಭೈರವ್ ಮಂತ್ರಗಳನ್ನು 108 ಬಾರಿ ಜಪಿಸಿ

ಭೈರವ್ ಮಂತ್ರಗಳನ್ನು 108 ಬಾರಿ ಜಪಿಸಿ

ಇದರ ನಂತರ, ಶಿವ ಚಾಲೀಸಾ ಮತ್ತು ಭೈರವ ಚಾಲೀಸಾ ಪಠಿಸಿ. ನೀವು ಬಟುಕ್‌ ಭೈರವ ಪಂಜಾರ ಕವಚವನ್ನು ಸಹ ಪಠಿಸಬಹುದು. ಇದರೊಂದಿಗೆ ಭೈರವ್ ಮಂತ್ರಗಳನ್ನು 108 ಬಾರಿ ಜಪಿಸಿ, ಕಾಲಭೈರವನನ್ನು ಇದರ ನಂತರ ಪೂಜಿಸಿ. ಉಪವಾಸ ಮುಗಿದ ನಂತರ, ಕಪ್ಪು ನಾಯಿಗೆ ಸಿಹಿ ತಿಂಡಿಯನ್ನು ಅಥವಾ ಹಸಿ ಹಾಲು ನೀಡಬೇಕು ಮತ್ತು ದಿನದ ಕೊನೆಯಲ್ಲಿ ನಾಯಿಯನ್ನು ಪೂಜಿಸಬೇಕು. ಇದರ ನಂತರ, ಕಾಲ ಭೈರವನಿಗೆ ಸಾಸಿವೆ ಎಣ್ಣೆ, ಉದ್ದು, ದೀಪ, ಕಪ್ಪು ಎಳ್ಳು ಇತ್ಯಾದಿಗಳೊಂದಿಗೆ ರಾತ್ರಿಯ ಸಮಯದಲ್ಲಿ ಪೂಜೆ ಮಾಡಿ ಮತ್ತು ರಾತ್ರಿ ಜಾಗರಣೆ ಮಾಡಿ.

Recommended Video

Union Budget 2022-23: ಕೇಂದ್ರ Budgetನಲ್ಲಿ ನಿರೀಕ್ಷೆ ಇರುವ ಕೆಲವು ಒಳ್ಳೆಯ ಅಂಶಗಳು | Oneindia Kannada

English summary
Kalashtami fast is kept on the Ashtami of Krishna Paksha of every month. Let us know the worship method of Kalbhairav and the importance of this fast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X