ಅ.11ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರಥೋತ್ಸವ

ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನಗಳ ಕಾಲ ಚಾಮುಂಡಿಬೆಟ್ಟ ಭಕ್ತರಿಂದ ತುಂಬಿತುಳುಕಲಿದ್ದು, ರಥೋತ್ಸವ ಹಾಗೂ ತೆಪ್ಪೋತ್ಸವ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಮಂಗಳವಾರ ಬೆಳಿಗ್ಗೆ ಪೂರ್ಣಿಮಾ (ಶೀಗೆ ಹುಣ್ಣಿಮೆ) ಉತ್ತರಭಾದ್ರ ನಕ್ಷತ್ರದಲ್ಲಿ ಬೆಳಿಗ್ಗೆ 8.15ರಿಂದ 9ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಶ್ರೀಮದ್ ದಿವ್ಯ ರಥಾರೋಹಣ ನಡೆಯಲಿದ್ದು, ಮರದ ಸಿಂಹವಾಹನದಲ್ಲಿ ದೇವಿ ಚಾಮುಂಡಿಯ ಉತ್ಸವಮೂರ್ತಿಯನ್ನಿಟ್ಟು ರಥೋತ್ಸವವನ್ನು ನಡೆಸಲಾಗುವುದು.
ಹಂಸವಾಹನೋತ್ಸವ, ಬಲಿಪ್ರದಾನ ಹಾಗೂ ಮಂಟಪೋತ್ಸವ ಸೇರಿದಂತೆ ಹಲವು ಕೈಂಕರ್ಯಗಳು ನಡೆಯಲಿವೆ. ಅಕ್ಟೋಬರ್ 13ರಂದು ರಾತ್ರಿ 7 ಗಂಟೆಗೆ ಬೆಟ್ಟದಲ್ಲಿರುವ ದೇವಿಕೆರೆಯಲ್ಲಿ ಶ್ರೀ ತಾಯಿ ಚಾಮುಂಡೇಶ್ವರಿಯ ತೆಪ್ಪೋತ್ಸವ ನಡೆಯಲಿದೆ. [ಮೈಸೂರಲ್ಲಿ ಚಾಮುಂಡಿ ನೆಲೆನಿಂತದ್ದು ಹೇಗೆ? ಮುಂದಿನ ಪುಟ]












Click it and Unblock the Notifications