ನೊಯಿಡಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Noida Kannada Sangham to celebrate Kannada Rajyotsava
ನವದೆಹಲಿ, ನ. 2 : ವಾರ್ತಾ ಇಲಾಖೆ ಮತ್ತು ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ, ಜೆ.ಎಸ್.ಎಸ್. ಆಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ನೊಯಿಡಾ ಮತ್ತು ನೊಯ್ಡಾ ಕನ್ನಡ ಸಂಗಮ, ನೊಯಿಡಾ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2009 ರ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ, ನವೆಂಬರ್ 8ರ ಭಾನುವಾರ ಸಂಜೆ 5 ಘಂಟೆಗೆ. ಸ್ಥಳ: ಜೆ.ಎಸ್.ಎಸ್. ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್, ಸಿ-20/1, ಸೆಕ್ಟರ್-62, ನೊಯಿಡಾ-201301(ಉತ್ತರ ಪ್ರದೇಶ).

ಉದ್ಘಾಟನೆ : ವಿ.ಧನಂಜಯ ಕುಮಾರ್, ವಿಶೇಷ ಪ್ರತಿನಿಧಿಗಳು, ಕರ್ನಾಟಕ ಸರ್ಕಾರ, ನವದೆಹಲಿ.
ಮುಖ್ಯ ಅತಿಥಿಗಳು: ಶ್ರೀಮತಿ ಇಮ್‌ಕೊಂಗ್ಲಾ ಜಮೀರ್ ಐ.ಎ.ಎಸ್. ಮಾನ್ಯ ನಿವಾಸಿ ಆಯುಕ್ತರು, ಕರ್ನಾಟಕ ಭವನ, ನವದೆಹಲಿ.
ಅಧ್ಯಕ್ಷತೆ: ಪ್ರೊ. ಎಂ.ಎಲ್. ಗುಪ್ತಾ ಸಲಹೆಗಾರರು, ಜೆ.ಎಸ್.ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್, ನೊಯಿಡಾ.

ಸಾಂಸ್ಕೃತಿಕ ಕಾರ್ಯಕ್ರಮಗಳು : ರಾಜೇಶ್ವರಿ ಭಟ್ ಮತ್ತು ಸಂಗಡಿಗರಿಂದ ನೃತ್ಯರೂಪಕ. ಟಿ.ಎಸ್. ರಮೇಶ್ ಹಾಗೂ ತಂಡದವರಿಂದ ಗೀತಗಾಯನ ಮತ್ತು ಜೆ.ಎಸ್.ಎಸ್. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ನೀವೂ ಬನ್ನಿ ಹಾಗೂ ಸ್ನೇಹಿತರನ್ನೂ ಕರೆತನ್ನಿ ಎಂದು ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ನಿನ ಪ್ರಾಂಶುಪಾಲರು ಹಾಗೂ ನವದೆಹಲಿ ಕರ್ನಾಟಕ ವಾರ್ತಾ ಕೇಂದ್ರದ ಉಪ ನಿರ್ದೇಶಕರು ಆಮಂತ್ರಣ ಕೊಟ್ಟಿದ್ದಾರೆ.

(ದಟ್ಸ್ ಕನ್ನಡ ಸಭೆಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+