ದೀಪಾವಳಿಯಂದು ಮನೆಯಲ್ಲಿ ಈ ಬಣ್ಣದ ಮೇಣದ ಬತ್ತಿಯನ್ನು ಹಚ್ಚಿ... ಯಾಕೆಂದರೆ..
ಬಹು ನಿರೀಕ್ಷಿತ ದೀಪಾವಳಿ ಹಬ್ಬ ಬಂದೇ ಬಿಡ್ತು. ದೀಪಾವಳಿಯಂದು ನಾವೆಲ್ಲರೂ ನಮ್ಮ ಮನೆಗಳನ್ನು ದೀಪಗಳಿಂದ ಸುಂದರವಾಗಿ ಅಲಂಕರಿಸುತ್ತೇವೆ. ದೀಪಾವಳಿಯ ದಿನದ ಪ್ರಮುಖ ಅಲಂಕಾರ ಅಂದರೆ ದೀಪಗಳು. ಹೀಗಾಗಿ ಮನೆಯ ಮೂಲೆ ಮೂಲೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
ಮನೆಯಲ್ಲಿ ದೀಪಗಳು ಮತ್ತು ಮೇಣದಬತ್ತಿಗಳನ್ನು ಬೆಳಗಿಸಲಾಗುತ್ತದೆ. ಇವುಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇರಿಸಿದರೆ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿಯಂದು ಬೆಳಗುವ ದೀಪಗಳು ಅಥವಾ ಮೇಣದಬತ್ತಿಗಳು ಸರಿಯಾದ ದಿಕ್ಕಿನಲ್ಲಿರಬೇಕು.

ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕು ನಿರ್ದಿಷ್ಟ ಬಣ್ಣವನ್ನು ಪ್ರತಿನಿಧಿಸುತ್ತದೆ. ದೀಪಾವಳಿಯಂದು ಆ ದಿಕ್ಕಿನಲ್ಲಿ ಆ ಬಣ್ಣದ ಮೇಣದಬತ್ತಿಯನ್ನು ಬೆಳಗಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಮತ್ತು ಯಾವ ಬಣ್ಣದ ಮೇಣದಬತ್ತಿಯು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂದು ನೋಡೋಣ.
ಕೆಂಪು ಮೇಣದಬತ್ತಿ
ಮನೆಯಲ್ಲಿ ಕೆಂಪು ಮೇಣದಬತ್ತಿಗಳನ್ನು ಬೆಳಗಿಸುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅದೂ ಕೂಡ ಈ ಕೆಂಪು ಬಣ್ಣದ ಮೇಣದಬತ್ತಿಗಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಬೆಳಗಿಸಬೇಕು. ಹೀಗೆ ಮಾಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಸಂಪತ್ತು ಹೆಚ್ಚಾಗುತ್ತದೆ.
ಹಳದಿ ಮೇಣದಬತ್ತಿ
ದೀಪಾವಳಿಯಂದು ಮನೆಯಲ್ಲಿ ಹಳದಿ ಮೇಣದಬತ್ತಿಗಳನ್ನು ಬೆಳಗಿಸುವುದರಿಂದ ಜೀವನದಲ್ಲಿ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತವೆ. ಮತ್ತು ಈ ಬಣ್ಣದ ಮೇಣದಬತ್ತಿಗಳನ್ನು ಲಕ್ಷ್ಮಿ ದೇವಿ ಬರುವ ಮನೆಯ ಬಾಗಿಲಲ್ಲಿ ಬೆಳಗಿಸಬೇಕು. ಇದಲ್ಲದೇ ಮನೆಯ ಅಭ್ಯುದಯವನ್ನು ಕಾಪಾಡಲು ಮನೆಯ ಮಧ್ಯದಲ್ಲಿ ದೀಪಾಲಂಕಾರ ಮಾಡಬೇಕು.
ಕಪ್ಪು ಮೇಣದಬತ್ತಿ
ಕಪ್ಪು ಮೇಣದಬತ್ತಿಯು ರಕ್ಷಣೆಯ ಸಂಕೇತವಾಗಿದೆ. ಹಾಗಾಗಿ ಕಪ್ಪು ಬಣ್ಣದ ಈ ಕ್ಯಾಂಡಲ್ ಅನ್ನು ಮನೆಯ ಬಾಗಿಲಲ್ಲಿ ಹಚ್ಚಿದರೆ ನೆಗೆಟಿವ್ ಎನರ್ಜಿ ಮನೆಗೆ ಬರದಂತೆ ತಡೆಯುತ್ತದೆ. ಹಾಗೆಯೇ ಮನೆಯ ಉತ್ತರ ದಿಕ್ಕಿಗೆ ಕಪ್ಪುಬತ್ತಿಯನ್ನು ಹಚ್ಚಿದರೆ ಜೀವನದಲ್ಲಿನ ದುಷ್ಟಶಕ್ತಿಗಳು ದೂರವಾಗಿ ಜೀವನ ಉಜ್ವಲವಾಗುವುದು.

ಬಿಳಿ ಮೇಣದಬತ್ತಿ
ದೀಪಾವಳಿಯಂದು ಬಿಳಿ ಮೇಣದಬತ್ತಿಯನ್ನು ಬೆಳಗಿಸುವುದರಿಂದ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ. ಮತ್ತು ಈ ಬಿಳಿ ಮೇಣದಬತ್ತಿಯನ್ನು ಮನೆಯ ಪಶ್ಚಿಮ ಮತ್ತು ಈಶಾನ್ಯ ಮೂಲೆಯಲ್ಲಿ ಬೆಳಗಿಸಬೇಕು. ಇದನ್ನು ಮುಖ್ಯವಾಗಿ ಈಶಾನ್ಯ ದಿಕ್ಕಿನಲ್ಲಿ ಹಚ್ಚುವುದು ಉತ್ತಮವೆಂದು ಪರಿಗಣಿಸಲಾಗಿದೆ.
ಹಸಿರು ಮೇಣದಬತ್ತಿ
ಹಸಿರು ಮೇಣದಬತ್ತಿಯು ಮನೆಯಲ್ಲಿ ಹಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ದೀಪಾವಳಿಯಲ್ಲಿ ನೀವು ಮನೆಯಲ್ಲಿ ದೀಪಗಳನ್ನು ಬೆಳಗಿಸುವಾಗ ಹಸಿರು ಮೇಣದಬತ್ತಿಯನ್ನು ಹಚ್ಚಲು ಮರೆಯಬೇಡಿ. ಈ ಹಸಿರು ಮೇಣದಬತ್ತಿಯನ್ನು ಪೂರ್ವ ದಿಕ್ಕಿನಲ್ಲಿ ಬೆಳಗಿಸಿದರೆ ಅದು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಅಲ್ಲದೆ ಈ ಮೇಣದಬತ್ತಿಯನ್ನು ಬೆಳಗಿಸಲು ಉತ್ತಮವಾದ ದಿಕ್ಕು ಆಗ್ನೇಯ ದಿಕ್ಕು ಎಂದು ಹೇಳಲಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications