ನವರಾತ್ರಿ 2022: ಇಲ್ಲಿವೆ ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಬಹುದಾದ ಸಂದೇಶಗಳು
ಇದೇ ಸೆಪ್ಟೆಂಬರ್ 26 ರಿಂದ ನವರಾತ್ರಿ ಹಬ್ಬ ಶುರುವಾಗಲಿದೆ. ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಬೇಕಾದ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.
ನವರಾತ್ರಿ ಹಬ್ಬವನ್ನು ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಶುಭ ಹಬ್ಬವೆಂದು ಪರಿಗಣಿಸಲಾಗುತ್ತದೆ. ದುರ್ಗಾ ದೇವಿಯನ್ನು ಪೂಜಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಹಬ್ಬದ ಎಲ್ಲಾ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ವಿವಿಧ ರೂಪಗಳನ್ನು ಅಂದರೆ ಆಕೆಯ 9 ಅವತಾರವನ್ನು ಪೂಜಿಸಲಾಗುತ್ತದೆ.
ಎಲ್ಲಾ ಒಂಬತ್ತು ದಿನಗಳಲ್ಲಿ ಉಪವಾಸವನ್ನು ಆಚರಿಸುವುದು ನವರಾತ್ರಿ ಆಚರಣೆಯ ಅತ್ಯಗತ್ಯ ಭಾಗವಾಗಿದೆ. 2022 ರ ನವರಾತ್ರಿ ಹಬ್ಬವು ನಾಳೆಯಿಂದ ಅಂದರೆ ಸೆಪ್ಟೆಂಬರ್ 26 ರಿಂದ ಆರಂಭವಾಗಲಿದೆ.

ಇದು ಸಂಭ್ರಮದ ಹಬ್ಬ. ಹಿಂದೂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ಕೂಡಾ ಒಂದು. ಅಸುರೀ ಶಕ್ತಿಯನ್ನು ಸೋಲಿಸಿ ದೈವೀ ಶಕ್ತಿ ಗೆದ್ದ ಸಂದರ್ಭವಿದು. ಕೆಟ್ಟದ್ದನ್ನು ಅಳಿಸಿ ಒಳ್ಳೆಯದ್ದನ್ನು ಗೆದ್ದ ಕ್ಷಣವಿದು. ತಾಯಿ ದುರ್ಗೆ ಭೂಮಿಗೆ ಬರುವ ಸಮಯವಿದು... ಲೋಕ ಕಂಟಕನಾಗಿ ಮೆರೆದಾಡುತ್ತಿದ್ದ ಮಹಿಷಾಸುರನನ್ನು ವಧಿಸಿದ ನಂತರದ ವಿಜಯೋತ್ಸವದ ಸಡಗರವಿದು.
ನವರಾತ್ರಿ ಎಂದರೇನೇ ಸಂಭ್ರಮ, ಸಡಗರ. ಈ ಒಂಭತ್ತು ದಿನ ದುರ್ಗೆಯ ಒಂಭತ್ತು ಅವತಾರವಾದ ನವದುರ್ಗೆಯರ ಆರಾಧನೆಯಲ್ಲಿ ಜನ ನೆಮ್ಮದಿ ಕಾಣುತ್ತಾರೆ.
ನವರಾತ್ರಿ ಹಬ್ಬದ ಸಂದೇಶಗಳು ಇಲ್ಲಿವೆ
*ನವರಾತ್ರಿ ಹಬ್ಬವು ಸಂತೋಷ ಮತ್ತು ಸಮೃದ್ಧಿಯ ಮುನ್ನುಡಿಯಾಗಿರಲಿ. ಹ್ಯಾಪಿ ನವರಾತ್ರಿ
*ಈ ನವರಾತ್ರಿ, ಮಾ ದುರ್ಗಾ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ, ಅವರ ಒಂಭತ್ತು ರೂಪದ ಶುಭ ಆಶೀರ್ವಾದಗಳನ್ನು ನೀಡಲಿ ಎಂದು ಹಾರೈಸುವೆ.
*ಒಂಭತ್ತು ದೈವಿಕ ದಿನಗಳು ನಿಮ್ಮ ಜೀವನವನ್ನು ಎಂದೆಂದಿಗೂ ಸಂತೋಷದ ದಿನವಾಗಿ ಬೆಳಗಲಿ
*ನವರಾತ್ರಿಯಂದು ದುರ್ಗಾ ದೇವಿಯು ತನ್ನ 9 ರೂಪಗಳೊಂದಿಗೆ ಬ್ರಹ್ಮಾಂಡದ ಎಲ್ಲಾ ಶಕ್ತಿಯನ್ನು ನಿಮಗೆ ಆಶೀರ್ವದಿಸಲಿ
*ಮಹಾ ದೇವತೆ ತಾಯಿ ದುರ್ಗಾ ನಿಮಗೆ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯವನ್ನು ನೀಡಲಿ
*ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ.
*ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಾಡ ಹಬ್ಬ ದಸರಾದ ಶುಭಾಶಯಗಳು
*ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು, ನಿಮ್ಮೆಲ್ಲಾ ಆಸೆಗಳು ನೆರವೇರಲಿ, ಆ ರಾಮನ ಆಶೀರ್ವಾದ ನಿಮ್ಮ ಮೇಲಿರಲಿ.
*ಕೆಟ್ಟದರ ವಿರುದ್ಧ ಹೋರಾಡಿ ಗೆದ್ದ ದಿನವನ್ನು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ. ಈ ಹಬ್ಬವು ನಿಮಗೂ, ನಿಮ್ಮ ಕುಟುಂಬಕ್ಕೂ ಖುಷಿ, ನೆಮ್ಮದಿಯನ್ನು ತರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.
* ನವದುರ್ಗೆಯರು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಮುನ್ನಡೆಯುವ ಶಕ್ತಿಯನ್ನು ನಿಮಗೆ ನೀಡಲಿ. ಶುಭ ನವರಾತ್ರಿ
* ನವರಾತ್ರಿ ಹಬ್ಬ ತಂದ ಸಂಭ್ರಮ, ಖುಷಿ, ನೆಮ್ಮದಿ ಈ ಒಂಭತ್ತು ದಿನ ಮಾತ್ರವಲ್ಲ ಎಂದೆಂದಿಗೂ ನಿಮ್ಮೊಂದಿಗೆ ಇರಲಿ ಎಂದು ನಾನು ಹಾರೈಸುತ್ತೇನೆ. ನಿಮಗೆ ನವರಾತ್ರಿ ಹಬ್ಬದ ಶುಭಾಶಯಗಳು
* ನವರಾತ್ರಿಯ ಒಂಭತ್ತು ದಿನಗಳು ಮತ್ತು ಒಂಭತ್ತು ರಾತ್ರಿಗಳು ನಿಮಗೆ ಜೀವನದುದ್ದಕ್ಕೂ ಉತ್ತಮ ಆರೋಗ್ಯ ಮತ್ತು ಅದೃಷ್ಟವನ್ನು ತರಲಿ. ನವರಾತ್ರಿ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು
* ಈ ಹಬ್ಬದಲ್ಲಿ ಮಾಂತ್ರಿಕ ಸೆಳೆತವಿದೆ. ಕತ್ತಲೆಯನ್ನು ಬೆಳಕಾಗಿ, ಸಂಕಟವನ್ನು ಸಂತಸದ ಕ್ಷಣವನ್ನಾಗಿ ಬದಲಾಯಿಸುವ ಶಕ್ತಿ ಈ ಹಬ್ಬಕ್ಕಿದೆ. ನವದುರ್ಗೆಯರು ಎಲ್ಲೆಲ್ಲೂ ಸಂತೋಷ, ನೆಮ್ಮದಿಯನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನವರಾತ್ರಿ ಶುಭಾಶಯಗಳು
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications