ಮೈಸೂರು ದಸರಾ ಗಜಪಡೆ ಬಯೋಡೇಟಾ

ಬಲರಾಮ
ಲಿಂಗ : ಗಂಡು, ವಯಸ್ಸು : 52 ವರ್ಷಗಳು, ಅಂದಾಜು ತೂಕ : 4900 ಕೆಜಿ.
ಶಿಬಿರ ಮತ್ತು ವಿಭಾಗ : ತಿತಿಮತಿ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ.
ಗುಣ ಲಕ್ಷಣಗಳು : ಈ ಆನೆಯು ತುಂಬಾ ಸೌಮ್ಯ ಸ್ವಭಾವದಾಗಿದ್ದು, ಇದನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆಯು ತುಂಬಾ ಬಲಶಾಲಿಯಾಗಿದ್ದು, ಸುಮಾರು 15 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಕಳೆದ 11 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುತ್ತಿದೆ. ಈ ಬಾರಿಯೂ ಕೂಡ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಅಭಿಮನ್ಯು
ಲಿಂಗ : ಗಂಡು, ವಯಸ್ಸು : 44 ವರ್ಷಗಳು. ಅಂದಾಜು ತೂಕ : 4270 ಕೆಜಿ.
ಶಿಬಿರ ಮತ್ತು ವಿಭಾಗ : ಮೂರ್ಕಲ್ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ.
ಗುಣ ಲಕ್ಷಣಗಳು : ಇದನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು 12 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ಹೊತ್ತಿರುತ್ತದೆ.
ವರಲಕ್ಷ್ಮಿ
ಲಿಂಗ : ಹೆಣ್ಣು, ವಯಸ್ಸು :55 ವರ್ಷಗಳು, ಅಂದಾಜು ತೂಕ : 3090 ಕೆಜಿ.
ಶಿಬಿರ ಮತ್ತು ವಿಭಾಗ : ಸುಂಕದಕಟ್ಟೆ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ.
ಗುಣ ಲಕ್ಷಣಗಳು : ಈ ಆನೆಯು ತುಂಬಾ ಸಾಧುಸ್ವಭಾವದ್ದಾಗಿದ್ದು ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು 7 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.
ಗಜೇಂದ್ರ
ಲಿಂಗ : ಗಂಡು, ವಯಸ್ಸು : 55 ವರ್ಷಗಳು, ಅಂದಾಜು ತೂಕ : 4570 ಕೆಜಿ.
ಶಿಬಿರ ಮತ್ತು ವಿಭಾಗ : ಕೆ.ಗುಡಿ ಆನೆ ಶಿಬಿರ. ಚಾಮರಾಜನಗರ ವನ್ಯಜೀವಿ ವಿಭಾಗ.
ಗುಣ ಲಕ್ಷಣಗಳು : ಇದನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು ಬಲಿಷ್ಠವಾಗಿರುತ್ತದೆ. ಈ ಆನೆಯು 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಇದು ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿಯನ್ನು ಹೊತ್ತಿರುತ್ತದೆ.
ಅರ್ಜುನ
ಲಿಂಗ : ಗಂಡು, ವಯಸ್ಸು : 50 ವರ್ಷಗಳು, ಅಂದಾಜು ತೂಕ : 4750 ಕೆಜಿ.
ಶಿಬಿರ ಮತ್ತು ವಿಭಾಗ : ಬಳ್ಳೆ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ.
ಗುಣ ಲಕ್ಷಣಗಳು : ಈ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು ಒಂದು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುತ್ತದೆ.
ಸರಳಾ
ಲಿಂಗ : ಹೆಣ್ಣು, ವಯಸ್ಸು : 68 ವರ್ಷಗಳು, ಅಂದಾಜು ತೂಕ : 3250 ಕೆಜಿ.
ಶಿಬಿರ ಮತ್ತು ವಿಭಾಗ : ಸುಂಕದಕಟ್ಟೆ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ.
ಗುಣ ಲಕ್ಷಣಗಳು : ಇದನ್ನು 1968ರಲ್ಲಿ ಖೆಡ್ಡಾದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು ಸುಮಾರು 11 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.












Click it and Unblock the Notifications