ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ:ಗ್ರಾಮೀಣ ಜನತೆ ಪ್ರತಿಭಾ ಅನಾವರಣ

By Staff
|
Google Oneindia Kannada News

ಮೈಸೂರು, ಸೆ, 22:ಸರ್ಕಾರ ದಸರಾ ಹಬ್ಬವನ್ನು "ನಾಡಹಬ್ಬ" ವೆಂದು ಘೋಷಿಸಿದ್ದು, ಗ್ರಾಮೀಣ ಭಾಗದ ಜನರು ಕೂಡಾ ಈ ಹಬ್ಬದಲ್ಲಿ ಭಾಗವಹಿಸಿ, ಗ್ರಾಮೀಣ ಭಾಗದ ಸೊಗಡನ್ನು ಕಲೆ ಮೂಲಕ ಪ್ರದರ್ಶಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಅವರು ಇಂದು ನಂಜನಗೂಡು ತಾಲ್ಲೂಕಿನಲ್ಲಿ ನಡೆದ "ಗ್ರಾಮೀಣ ದಸರಾ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಅನೇಕ ಯೋಜನೆಗಳ ಮೂಲಕ ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಅಂತಹ ಯೋಜನೆಗಳನ್ನು ಜನತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದ ಸಚಿವರು ಗ್ರಾಮೀಣ ಭಾಗದ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಬೇಕು ಹಾಗೂ ನಾಡಹಬ್ಬದಲ್ಲಿ ಭಾಗವಹಿಸಿ ಸಂತೋಷ, ಮನರಂಜನೆಯನ್ನು ಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಎಸ್ ಧರ್ಮೇಂದ್ರ ಅವರು ಗ್ರಾಮೀಣ ಭಾಗದ ಸೊಗಡನ್ನು ಬಿಂಬಿಸುವಂತಹ ಕಾರ್ಯಕ್ರಮಗಳನ್ನು ಈ ದಸರಾದಲ್ಲಿ ಹಾಕಿಕೊಳ್ಳಲಾಗಿದ್ದು, ಜನತೆ ಇದನ್ನು ಸಂತೋಷ ಹಾಗೂ ಸಂಭ್ರಮದಿಂದ ನೋಡಿ ಮನರಂಜನೆಯನ್ನು ಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ನೃತ್ಯ ಕಲಾವಿದರು, ಡೊಳ್ಳು ಕುಣಿತ, ಪೂಜಾ ಕುಣಿತ ಇನ್ನು ಅನೇಕ ಕಾರ್ಯಕ್ರಮಗಳ ಮೂಲಕ ಜನತೆಯ ಮುಂದೆ ಪ್ರದರ್ಶಿಸಿದರು. ಅಲ್ಲದೇ ಗ್ರಾಮೀಣ ಸಂಸ್ಕೃತಿ, ಕಲೆ ಮತ್ತು ಸೊಗಡನ್ನು ಎತ್ತಿ ತೋರಿಸುವಂತೆ ವಸ್ತು ಪ್ರದರ್ಶನ ಮೂಲಕ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಾಸಕ ವಿ ಶ್ರೀನಿವಾಸ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷ ತಮ್ಮಣ್ಣೇಗೌಡ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಸಿ ಎನ್ ಮಂಜೇಗೌಡ ಹಾಗೂ ಇತರೇ ಗಣ್ಯರು ಭಾಗವಹಿಸಿದ್ದರು.

ಗ್ರಾಮೀಣ ದಸರಾಕ್ಕೆ ಪುಢಾರಿಗಳಿಂದ ಕಪ್ಪುಚುಕ್ಕೆ
ಚಾಮರಾಜನಗರ: ಇಲ್ಲಿ ಇಂದು ಪ್ರಾರಂಭವಾದ ಗ್ರಾಮೀಣ ದಸರಾ ಗಲಾಟೆ, ಗೊಂದಲಕ್ಕೆ ನಾಂದಿ ಹಾಡಿತು. ದಸರಾ ಸಂಪೂರ್ಣ ಸರ್ಕಾರಿ ಕಾರ್ಯಕ್ರಮವಾಗಿದೆ. ಪ್ರತಿಪಕ್ಷದವರಿಗೆ ಸರಿಯಾದ ಆಹ್ವಾನವಿಲ್ಲ, ಜನತೆ ಸರಿ ಮಾಹಿತಿಯಿಲ್ಲ ಎಂದು ಕಾಂಗ್ರೆಸ್ ಮುಖಂಡರು ಟೀಕಿಸುತ್ತಾ, ವೇದಿಕೆ ಮುಂದೆ ಬಂದು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆ ನಡೆಯಿತು.

ಗ್ರಾಮೀಣ ಸಂಸ್ಕೃತಿ, ಕಲೆ ಮತ್ತು ಸೊಗಡನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ಗ್ರಾಮೀಣ ದಸರಾ ಆಯೋಜನೆ ಆಗಿರುವುದು. ನಿಮ್ಮ ವಾಕ್ಚಾತುರ್ಯದ ಮಾತುಗಳನ್ನು ಕೇಳಲಿಕ್ಕಲ್ಲ. ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಜನರು ತಮ್ಮ ಸ್ವಂತ ಇಚ್ಛೆಯಿಂದ ಪಾಲ್ಗೊಳ್ಳುತ್ತಿದ್ದಾರೋ ಕೇಳಿ ನೋಡಿ ಎಂದು ಕಾಂಗ್ರೆಸ್ಸಿಗರ ಟೀಕೆಗೆ ಬಿಜೆಪಿ ಮುಖಂಡ ನಿರಂಜನ್ ಪ್ರತ್ಯುತ್ತರ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X