ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಢನಂಬಿಕೆ ದೂರಾಗಿಸೋ ಚಿತ್ರ ಬರಲಿ: ಕಟ್ಟಾ

By Staff
|
Google Oneindia Kannada News

ಮೈಸೂರು, ಸೆ. 20: ಸಮಾಜದಲ್ಲಿ ಇರುವ ಅಜ್ಞಾನ, ಮೂಡನಂಬಿಕೆ ಹೋಗಲಾಡಿಸುವಂತಹ, ಯುವಜನತೆಗೆ ಪ್ರೋತ್ಸಾಹ ನೀಡುವ, ಜನತೆಗೆ ಮನೋರಂಜನೆ, ಸಂತೋಷ ಹಾಗೂ ಮನಸ್ಸಿಗೆ ಮುದ ನೀಡುವ ಚಲನಚಿತ್ರಗಳು ನಿರ್ಮಾಣವಾಗುವ ಅವಶ್ಯಕತೆ ಇದೆ ಎಂದು ಅಬಕಾರಿ, ವಾರ್ತಾ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತಿಳಿಸಿದರು.

ಅವರು ಶನಿವಾರ ನಗರದ ಕಲಾಮಮದಿರದಲ್ಲಿ ನಡೆದ 'ದಸರಾ ಚಲನಚಿತ್ರೋತ್ಸವ' ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದು. ಭಾವನಾತ್ಮಕ ಸಂಕೋಲೆಯಿಂದ ಬಿಡಿಸಿಕೊಂಡು, ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಕಾರ್ಯವನ್ನು ಈ ಚಲನಚಿತ್ರ ಮಾಡುತ್ತದೆ. ಅಲ್ಲದೆ ಸಮಾಜಕ್ಕೆ ಒಳ್ಳೆಯ ಸದಭಿರುಚಿಯ ಚಲನಚಿತ್ರಗಳು ಅವಶ್ಯಕವಾಗಿದ್ದು, ಸಮಾಜ ಸುಧಾರಣೆ ಮಾಡುವ ಕೆಲಸವನ್ನು ಚಲನಚಿತ್ರ ಮಾಡುತ್ತಿದೆ. ಅಲ್ಲದೆ ಸರ್ಕಾರ ಕೂಡ ಚಲನಚಿತ್ರ ರಂಗದ ಸಮಸ್ಯೆಗಳನ್ನು ಬರೆಹರಿಸುವ ಕಾರ್ಯವನ್ನು ಮಾಡುತ್ತಿದ್ದು, ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಪ್ರಶಸ್ತಿ, ಪ್ರೋತ್ಸಾಹಗಳನ್ನು ನೀಡಿ ಗೌರವಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದ ಸಚಿವರು ಚಲನಚಿತ್ರ ಮಂಡಳಿ ನೀಡಿದ ಬೇಡಿಕೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆರವರು ಚಲನಚಿತ್ರ ಒಂದು ಉದ್ಯಮವಾಗಿದ್ದು, ಸಾವಿರಾರು ಜನರಿಗೆ ಕೆಲಸವನ್ನು, ಕಲಾವಿದರಿಗೆ ವೇದಿಕೆಯನ್ನು ಒದಗಿಸಿ, ದುಡಿದು ಬಂದ ಕಾರ್ಮಿಕರಿಗೆ, ರೈತರಿಗೆ ಹಾಗೂ ಜನರಿಗೆ ಮುದ ನೀಡುವ , ಮನರಂಜನೆ ನೀಡುವ ಕಾರ್ಯ ಮಾಡುತ್ತಿದ್ದು, ಸರ್ಕಾರ ಕೂಡ ಈ ಚಲನಚಿತ್ರ ರಂಗದ ಸಮಸ್ಯೆಗಳಿಗೆ ಸ್ಪಂದಿಸಿ ಸಹಕಾರ ನೀಡುತ್ತಿದೆ ಹಾಗೂ ಪೈರಸಿ ತಡೆಯಲು ಗೂಂಡಾ ಕಾಯ್ದೆ ಜಾರಿಗೆ ತಂದಿದ್ದು, ಕಲಾವಿದರಿಗೆ ಹಾಗೂ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರ ಕಲಾವಿದರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಜಗ್ಗೇಶ್‌ರವರು ಜನರ ಅಭಿರುಚಿಗೆ ಪೂರಕವಾಗಿ ಚಲನಚಿತ್ರಗಳನ್ನು ನಿರ್ಮಾಣವಾಗುತ್ತಿದ್ದು ಪ್ರೀತಿ ಮತ್ತು ಸ್ನೇಹಕ್ಕೆ ಹೆಚ್ಚು ಒತ್ತು ನೀಡುವ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದಕ್ಕೆ ಜನತೆಯಿಂದ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ವಾರ್ತಾ ಇಲಾಖೆ ಉಪನಿರ್ದೇಕರಾದ ಎ ಆರ್ ಪ್ರಕಾಶ್ ಸ್ವಾಗತಿಸಿದರು. ಚಾಮರಾಜ ಕ್ಷೇತ್ರದ ಶಾಸಕರಾದ ಶಂಕರಲಿಂಗೇಗೌಡ, ಮೈಸೂರು ಮಹಾಪಾಲಿಕೆಯ ಮಹಾಪೌರರಾದ ಪುರುಷೋತ್ತಮ್ ಅವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಎಸ್ ಧರ್ಮೇಂದ್ರರವರು, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜುರವರು, ತೋಂಟದಾರ್ಯ, ಭಾರತಿಶೆಟ್ಟಿ ಹಾಗೂ ವಿಮಲಗೌಡರವರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲರವರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣರವರು, ಚಲನಚಿತ್ರ ಕಲಾವಿದರಾದ ತಾರಾ, ರಾಧಿಕಾ ಪಂಡಿತ್ ಹಾಗೂ ಮಂಡ್ಯ ರಮೇಶ್‌ರವರು ಮತ್ತು ಇತರೆ ಎಲ್ಲ ಗಣ್ಯರು ಭಾಗವಹಿಸಿದ್ದರು.

(ದಟ್ಸ್ ಕನ್ನಡ ದಸರಾ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X