ನವರಾತ್ರಿಯಲ್ಲಿ ನಂಬರ್‌ ಹರಟೆ


ಇದು ನಂಬರ್‌ 6ರ ಅವತಾರ?
ಈ ಲೇಖನದಲ್ಲಿ ಒಬ್ರು ತಮ್ಮ 6 ಮುಖಗಳನ್ನೂ ಊದಿಸಿಕೊಂಡಿದ್ದಾರೆ. ಗೊತ್ತಾಯ್ತಲ್ಲ, ಅದೇ ನಮ್ಮ ಷಣ್ಮುಖ. ನಿಮಗೆಲ್ಲಾ ಷಣ್ಮುಖ ಗಣೇಶನ ಕತೆ ಗೊತ್ತು. ಆದರೆ ಆರರ ಚಮತ್ಕಾರದ ಕತೆ?

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.
[email protected]
ನಿನ್ನೆ ತಾನೆ ಪಂಚಭಕ್ಷ್ಯ, ಪಂಚಾಮೃತ ಎಲ್ಲಾ ಸವಿದಿದ್ದೀರ. ಇವತ್ತು ಷಡ್ರಸೋಪೇತ ಭೋಜನ. ನವರಾತ್ರಿಯ ಒಂದು ಪ್ರಮುಖ ಆಚರಣೆ ಸರಸ್ವತೀ ಹಬ್ಬ. ವಿದ್ಯಾ ಬುದ್ಧಿ ಕೊಡಮ್ಮಾ ಅಂತ ಪೂಜೆ ಮಾಡೋ ದಿನ. ನಾವು ಶಾಲೆಗೆ ಹೋಗುತ್ತಿದ್ದಾಗ ದಸರಾ ರಜ ಅಂತಾನೇ ಕೊಡೋರು, ಅದೇ ಗಾಂಧಿ ಜಯಂತಿ ದಿನದಿಂದ ರಾಜ್ಯೋತ್ಸವದವರೆಗೆ. ನವರಾತ್ರಿಯೂ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಬರೋದು.

ನಮಗೆಲ್ಲಾ ಅರ್ಧವಾರ್ಷಿಕ ಪರೀಕ್ಷೆ ಮುಗಿದಿರುತಿತ್ತು. ಸರಸ್ವತಿ ಸ್ವರೂಪವಾದ ಪುಸ್ತಕ, ಪೆನ್ನು, ಪೆನ್ಸಿಲ್‌ ಎಲ್ಲಾ ಸರಸ್ವತಿಗೇ ಒಪ್ಪಿಸಿ ಪೂಜೆ ಮಾಡಿ ಹಾಯಾಗಿರುತ್ತಿದ್ದೆವು. ಗೆಳೆಯರೊಡನೆ ಬೊಂಬೆ ಬಾಗಿನಕ್ಕೆ ಹೋಗ್ತಾ ಇದ್ವಿ. ಬೊಂಬೆ ಬಾಗಿನ ಅಂದ್ರೆ ಗೊತ್ತಲ್ಲ. ನವರಾತ್ರಿಗೆ ಗೊಂಬೆ ಕೂರಿಸೋದು.

ಸಂಜೆ ಗೊಂಬೆ ಪೂಜೆ ಮಾಡಿ, ಮಕ್ಕಳೆಲ್ಲಾ ಬೊಂಬೆ ಥರಾ ಅಲಂಕರಿಸಿಕೊಂಡು ಪುಟ್ಟ ಪುಟ್ಟ ಡಬ್ಬಿ ಹಿಡಿದು ಮನೆ ಮನೆಗೆ ಬೊಂಬೆ ನೋಡಕ್ಕೆ ಹೋಗೋದು. ಎಲ್ಲರ ಮನೆಯಲ್ಲೂ ಹಾಡು ಹೇಳಿಸಿ, ಇಲ್ಲಾ ಸುಮ್ಮನೇ ಪೀಡಿಸಿ ಬಗೆ ಬಗೆ ತಿಂಡಿ ಕೊಡೋರು. ಚಕ್ಕುಲಿ, ಕೋಡುಬಳೆ, ಉಂಡೆ ಹೀಗೆ. ಒಂದೊಂದು ಮನೇಲಿ ಒಂದೊಂದು ಬಗೆ ತಿಂಡಿ, ನೆನಸಿಕೊಂಡ್ರೆ ಬಾಯಲ್ಲಿ ನೀರು ಬರುತ್ತೆ. ಆದರೂ ಈ ಸರಸ್ವತೀ ಹಬ್ಬದ ದಿನ ಅಷ್ಟೇನೂ ಉತ್ಸಾಹ ಇರುತ್ತಿರಲಿಲ್ಲ, ಏಕೆಂದರೆ ಅವತ್ತು ಎಲ್ಲರ ಮನೇಲೂ ಎರೆಯಪ್ಪ. ಅಷ್ಟೊಂದು ಯಾರಿಗೆ ಬೇಕಪ್ಪ?

ದುರ್ಗಾಷ್ಟಮಿಗೆ ಪರವಾಗಿಲ್ಲ, ಜಾಸ್ತಿ ಆಂಬೊಡೆ ಕೊಡೋರು, ಅದೇನೂ ಬೇಜಾರಾಗಲ್ಲ ಬಿಡಿ. ನಾವು 10ನೇ ತರಗತಿವರೆಗೂ ಹೋಗ್ತಿದ್ದೆವು. ಈಗೀಗ ಯಾರೂ ಅಷ್ಟು ಹೋಗಲ್ಲ, ಏನೋ ನಾಚಿಕೆ, ಸಂಕೋಚ. ಆ ಥರ ಸಣ್ಣ ಪುಟ್ಟ ಸಂತೋಷಗಳು ಯಾರಿಗೂ ಬೇಡವಾಗಿದೆ. ನಾನಂತೂ ಈಗಲೂ ಹೋಗಕ್ಕೆ ರೆಡಿ.

ಇವತ್ತು 6ರ ಸ್ಪೆಷಲ್‌ ಅಂತ ಹೇಳಿ ನನ್ನ ಬಗ್ಗೆ ಒಂದು ಮಾತೂ ಹೇಳಿಲ್ಲ ಅಂತ ಇಲ್ಲಿ ಒಬ್ರು ತಮ್ಮ 6 ಮುಖಗಳನ್ನೂ ಊದಿಸಿಕೊಂಡಿದ್ದಾರೆ. ಗೊತ್ತಾಯ್ತಲ್ಲ, ಅದೇ ನಮ್ಮ ಷಣ್ಮುಖ. ನಿಮಗೆಲ್ಲಾ ಷಣ್ಮುಖ ಗಣೇಶನ ಪ್ರಪಂಚ ಸುತ್ತುವ ಕಥೆ ನೆನಪಿರಬಹುದು. ಅದೇ ರೀತಿ ಅವರಿಬ್ಬರಿಗೂ ಒಮ್ಮೆ ಜಾಸ್ತಿ ಬೊಂಬೆ ಬಾಗಿನ ತರುವ ಸ್ಪರ್ಧೆ ನಡೆಯಿತು. ಗಣೇಶ ಇಲಿ ಮೇಲೆ, ಸುಬ್ರಹ್ಮಣ್ಯ ನವಿಲಿನ ಮೇಲೆ ಹೊರಟರು.

ಎಲ್ಲರೂ ನವಿಲಿಗೆ ಡ್ಯಾನ್ಸ್‌ ಮಾಡಕ್ಕೆ ಹೇಳೋರು. ನವಿಲು ಜಂಬದಿಂದ ಕುಣೀತಿತ್ತು. ಆಗ ಇಲಿ ಮೆತ್ತಗೆ ಹೋಗಿ ತಿಂಡಿ ಕದ್ದುಕೊಂಡು ಬಂದು ಗಣೇಶಂಗೆ ಕೊಟ್ಟುಬಿಡೋದು. ಚಿಕ್ಕದು, ಯಾರಿಗೂ ಗೊತ್ತಾಗ್ತಿರ್ಲಿಲ್ಲ. ಗಣೇಶ ಮೊದಲೇ ತಿಂಡಿಪೋತ, ಇನ್ನು ಒಂದೇ ದಿನ ಬಗೆ ಬಗೆ ತಿಂಡಿ ಸಿಕ್ಕಿದ್ರೆ ಸುಮ್ನಿರ್ತಾನಾ, ಎಲ್ಲಾ ಚೆನ್ನಾಗಿ ಗುಳುಂ ಮಾಡ್ತಿದ್ದ. ಇತ್ತ ನವಿಲಿನ ಡ್ಯಾನ್ಸ್‌- ಅತ್ತ ಗಣೇಶ ಗುಳುಂ. ಎಲ್ಲಾರೂ ನವಿಲಿನ ನೃತ್ಯದಿಂದ ಖುಷಿಯಾಗಿ ಷಣ್ಮುಖಂಗೆ ಸ್ವಲ್ಪ ಜಾಸ್ತಿ ತಿಂಡೀನೇ ಕೊಡೋರು, ಆದ್ರೆ ಗಣೇಶ ಇಲಿಯ ಸಹಾಯದಿಂದ ಇನ್ನೂ ಜಾಸ್ತಿ ತಿಂದಿರ್ತಿದ್ದ. ಸ್ಪರ್ಧೆಯಲ್ಲಿ ಷಣ್ಮುಖನೇ ಗೆದ್ದ, ಆದರೆ ಗಣೇಶ ತುಂಬಾ ತಿಂದಿದ್ದರಿಂದ ಅವನ ಹೊಟ್ಟೆ ದಪ್ಪ ಆಗೋಯ್ತು!

ಆರು ಋತುಗಳಲ್ಲೂ , ಅರಿಷಡ್ವರ್ಗಗಳನ್ನು ಮೀರಿ ಅರಿವಿನತ್ತ ಸಾಗೋಣ.

ಪುರಾಣ ಸಾಕು, ಈಗ 6ರ ಒಂದು ಚಮತ್ಕಾರ ನೋಡೋಣ. ಮೊದಲು 6ರ ಮಗ್ಗಿ ಬರೆಯಬೇಕು.

6 x 1 = 6
6 x 2 = 12
6 x 3 = 18
6 x 4 = 24
6 x 5 = 30
6 x 6 = 36
6 x 7 = 42

..... ಹೀಗೇ ಬರೆಯುತ್ತಾ ಹೋಗಿ. ನಂತರ ಫಲಿತಾಂಶದ ಸಂಖ್ಯೆಯ ಎಲ್ಲಾ ಅಂಕಿಗಳನ್ನೂ ಕೂಡಿ. ಈ ರೀತಿ

6 => 6
12 => 1+2= 3
18 => 1+8= 9
24 => 2+4= 6
30 => 3
36 => 3+6= 9
42 => 4+2= 6
48 => 4+8=12 => 1+2= 3
54 => 5+4= 9
60 => 6
66 => 6+6=12=>1+2= 3
72 => 7+2= 9
78 => 7+8=15 => 1+5= 6
84 => 8+4=12 => 1+2= 3
90 => 9

... ಹೀಗೇ ಸಾಗುತ್ತದೆ. ವೈಶಿಷ್ಟ್ಯ ಗಮನಿಸಿರಬಹುದು. ಅದೇ, 6-3-9ರ ಸರಣಿ ದೊರಕಿದೆ .

ಟು ಜನರಲೈಜ್‌, ಒಂದು ಯಾವುದೇ x, x+1, x+2 ಸಂಖ್ಯೆಯನ್ನು 6ರಿಂದ ಗುಣಿಸಿ. ಬಂದ ಗುಣಲಬ್ಧದ ಪ್ರತೀ ಅಂಕಿಗಳ ಮೊತ್ತ 6-3-9 ಅಥವಾ 3-9-6 ಅಥವಾ 9-6-3 ಸರಣಿ ಆಗಿರುತ್ತದೆ.

ಉದಾಹರಣೆಗೆ x= 257 ಆಗಿರಲಿ

x=257 257 x 6=1542 =>1+5+4+2=12=>1+2=3
x+1=258 258 x 6=1548 =>1+5+4+8=>18=>1+8=9
x+2=259 259 x 6=1554 =>1+5+5+4=>15=>1+5=6

ನೋಡಿದಿರಾ, 3-9-6 ದೊರಕಿತು.

ಮತ್ತೊಂದು ಉದಾಹರಣೆಗೆ x= 7392 ಆಗಿರಲಿ

x=7392 7392 x 6=44352 =>4+4+3+5+2=18=>1+8=9
x+1=7393 7393 x 6=44358 =>4+4+3+5+8=>24=>2+4=6
x+2=7394 7394 x 6=44364 =>4+4+3+6+4=>21=>2+1=3

ನೋಡಿದಿರಾ, 9-6-3 ದೊರಕಿತು.

ಹೀಗೇ ನಿಮಗಿಷ್ಟ ಬಂದ ಸಂಖ್ಯೆಗಳಿಗೆ ಪ್ರಯತ್ನಿಸಿನೋಡಿ. ಏನು ಬಂತು ತಿಳಿಸಿ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+