ನವರಾತ್ರಿಯಲ್ಲಿ ನಂಬರ್‌ ಹರಟೆ


ಇದು ಬೇಂದ್ರೆ ‘ನಾಕುತಂತಿ’ ಅಲ್ಲಾರೀ..!
‘ನಾಕೊಂದ್ಲ ನಾಲ್ಕು ನಾಕೆರಡ್ಲ ಎಂಟು ಅಷ್ಟೇ ಲೆಕ್ಕದ ನಂಟೂ....’ ಅನ್ನೋ ಹಾಡು, ಶ್ರೀನಾಥ್‌ ಡ್ಯಾನ್ಸ್‌ ಎಲ್ಲರಿಗೂ ನೆನಪಿದೆ. ಹಾಡಿನಲ್ಲಿ ಹೇಳುವಂತೆ, ಲೆಕ್ಕದ ನಂಟು ಅಷ್ಟೇ ಇರಬಹುದು. ಆದರೆ ನಾಲ್ಕರ ನಂಟು ಬಹಳ ಇದೆ!

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.
[email protected]
ನಾಲ್ಕರ ಮಹತ್ವ ದೊಡ್ಡದು. ಚಾತುರ್ವರ್ಣ, ಚತುರ್ವಿಧ ಪುರುಷಾರ್ಥ, ಚಾತುರ್ಮಾಸ್ಯ ಹೀಗೇ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ನಾಲ್ಕು. ಇನ್ನು ಸಾಹಿತ್ಯದಲ್ಲಿ ವರಕವಿ ಬೇಂದ್ರೆಯವರ ನಾಕು ತಂತಿ - ಕೃತಿಗೆ ಪ್ರಸಿದ್ಧ ಜ್ಞಾನಪೀಠ ಪ್ರಶಸ್ತಿ ಬಂದಿರೋದು. ಈಗ ನಾಕು ತಂತಿ ಹೆಸರಿನ ಸೀರಿಯಲ್‌ ಉದಯ ಟೀವಿಯಲ್ಲಿ ಬರುತ್ತಿದೆ. ನಾನು ನೀನು ಆನು ತಾನು ಅಂತ ಅನಂತಸ್ವಾಮಿ ‘ನಾಕುತಂತಿ’ಯ ಹಾಡು ಕೇಳ್ತಾ ಇದ್ದರೆ ಅಲ್ಲಿ ಕೇವಲ ನಾದ ಲೋಕವಷ್ಟೇ ಏನು, ನಾಕವೇ ಸೃಷ್ಟಿಯಾಗುತ್ತೆ.

ಮೊನ್ನೆ ನಮ್ಮ ಸ್ನೇಹಿತರ ಜೊತೆ ಒಂದು ವಾದ ಮಾಡ್ತಾ ಇದ್ದೆ. ಅವರು ಹೇಳೋದು ಬ್ರಹ್ಮ ನಾರ್ತ್‌ ಇಂಡಿಯನ್‌ ಅಂತೆ, ಪ್ರೂಫ್‌ ಏನು ಅಂದ್ರೆ ಬ್ರಹ್ಮ ತನ್ನ ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಪಠಿಸುತ್ತಿರುತ್ತಾನೆ. ಹಾಗಾಗಿ ಬ್ರಹ್ಮನನ್ನು ಚತುರ್ಮುಖ ಅನ್ನೋ ಜೊತೆಗೆ ಚತುರ್ವೇದಿ ಅಂತಾನು ಕರೀಬಹುದು. ಆದ್ದರಿಂದ ಅವನು ನಾರ್ತ್‌ ಇಂಡಿಯನ್‌!

ಈಗ ನಾಲ್ಕರ ಒಂದು ವಿಶೇಷ ಗಮನಿಸೋಣ.

1 x 4 = 4 4
2 x 4 = 8 8
3 x 4 = 12 1+2 = 3
4 x 4 = 16 1+6 = 7
5 x 4 = 20 2+0 = 2
6 x 4 = 24 2+4 = 6
7 x 4 = 28 2+8 = 10 1+0 = 1
8 x 4 = 32 3+2 = 5
9 x 4 = 36 3+6 = 9
10 x 4 = 40 4+0 = 4
11 x 4 = 44 4+4 = 8
12 x 4 = 48 4+8 = 12 1+2 = 3
13 x 4 = 52 5+2 = 7
14 x 4 = 56 5+6 = 11 1+1 = 2
15 x 4 = 60 6+0 = 6

ಹೀಗೇ +1 ಅಂತರದ ಸಂಖ್ಯಾ ಸರಣಿಯನ್ನು 4ರಿಂದ ಗುಣಿಸಿ. ಬರುವ ಗುಣಲಬ್ಧದ ಪ್ರತೀ ಅಂಕಿಯ ಮೊತ್ತ ಯಾವಾಗಲೂ 4-8-3-7-2-6-1-5-9-4-8-3-7-.... ಸರಣಿಯಲ್ಲೇ ಇರುತ್ತದೆ.

ಸ್ವಲ್ಪ ದೊಡ್ಡಾ ಸಂಖ್ಯೆಯ ಮತ್ತೊಂದು ಉದಾಹರಣೆ ನೋಡೋಣ.

233 x 4 = 932 9+3+2 = 14 1+4 = 5
234 x 4 = 936 9+3+6 = 18 1+8 = 9
235 x 4 = 940 9+4+0 = 13 1+3 = 4
236 x 4 = 944 9+4+4 = 17 1+7 = 8
237 x 4 = 948 9+4+8 = 21 2+1 = 3
238 x 4 = 952 9+5+2 = 16 1+6 = 7
239 x 4 = 956 9+5+6 = 20 2+0 = 2
240 x 4 = 960 9+6+0 = 15 1+5 = 6
241 x 4 = 964 9+6+4 = 19; 1+9 = 10; 1+0 = 1
242 x 4 = 968 9+6+8 = 23 2+3 = 5
243 x 4 = 972 9+7+2 = 18 1+8 = 9
244 x 4 = 976 9+7+6 = 22 2+2 = 4
245 x 4 = 980 9+8+0 = 17 1+7 = 8
246 x 4 = 984 9+8+4 = 21 2+1 = 3
247 x 4 = 988 9+8+8 = 25 2+5 = 7

.........

ಇಲ್ಲೂ ಸಹ ಮೇಲೇ ಹೇಳಿದ 4-8-3-7-2-6-1-5-9-4-8-3-7-.... ಸರಣಿಯಲ್ಲೇ ಸುತ್ತುತ್ತದೆ ಅಲ್ಲವೇ ! ಮತ್ತೊಂದು ವಿಶೇಷ ಗುಣಲಬ್ಧದ ಕೊನೇ ಅಂಕಿಗಳು ಸಹಾ 4-8-2-6-0-4-8-2-6-0-.... ವೃತ್ತ ಸರಣಿಯಲ್ಲೇ ಸುತ್ತುತ್ತವೆ.

ನಾಲ್ಕರ ನಂಟಿನ ಬಗ್ಗೆ ನಿಮಗೇನು ಗೊತ್ತು, ಹೇಳ್ತೀರಾ?


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+