ಅಮ್ಮ ಶಾರದೆ

  • ಮೂಲ : ಶ್ರೀ ಶಂಕರಾಚಾರ್ಯ
  • ಕನ್ನಡಾನುವಾದ : ವಿಶ್ವೇಶ್ವರ್‌ ದೀಕ್ಷಿತ್‌
ಎದೆಯಾಳಿತು ಸುರಿವ ಸೊದೆ ಕೊಡದ ಮೊಲೆಯವಳೆ,
ತಿಳಿವು ತಿಳಿಗೊಳಿಪ ಪುಣ್ಯ ಸೆಲೆ, ಕರುಣಾಳೆ,
ತೊಂಡೆ ತುಟಿ, ತುಂಬು ತಿಂಗಳಿನ ಮೊಗದವಳೆ,
, ಭಜಿಪೆ ನಿರತ, ನನ್ನಮ್ಮ. *1*

ಕರುಣೆ ಸೂಸುವ ಕಣ್ಣು, ತಿಳಿವು ಕೈ ಗುರುತು,
ಸೊಂಟದಲಿ ಡಾಬು, ಅಚ್ಚ ಕಲೆಗಳ ನೆಲೆಯೆ,
ತುಂಗೆ ತಟದಲಿ ನೆಲೆತ ಚೈತನ್ಯ ಮಾನ್ಯೆ,
, ಭಜಿಪೆ ನಿರತ, ನನ್ನಮ್ಮ. *2*

ಹಣೆಯಲ್ಲಿ ತಿಲಕ, ಸಂಗೀತ ಸುಳಿ ಮನದಿ,
ಜಯಸಿರಿಯ ಕೆನ್ನೆ, ರುದ್ರಾಕ್ಷಿ ಸರ ಕರದಿ,
ರನ್ನ ಜುಮಕಿಯ ಕಿವಿಯ, ಭಕುತರನು ಕಾವ,
, ಭಜಿಪೆ ನಿರತ, ನನ್ನಮ್ಮ. *3*

ಗಿಳಿಮುದ್ದು ನುಡಿ, ಚಿಗರಿ ಚಂಚಲ ನಯನೆ,
ನಲಿವಿಂದ ನೆನೆವ ಬೈತಲೆಯ ಕುಂತಲೆಯೆ,
ಸೊದೆ ಸವಿದ ಮೊಗದವಳೆ, ಸುರಪ ಮಣಿದವಳೆ,
, ಭಜಿಪೆ ನಿರತ, ನನ್ನಮ್ಮ. *4*

ಮುಂಗುರುಳ ಕಣ್ಣಂಚು, ತೆಳುವು ಮೈ ಮಿಂಚು,
ಊಹೆಗೊಳಪಡದ, ಕೊನೆಮೊದಲುಗಳು ಇರದ
ತಪಸಿಗಳು ನೆನೆನೆನೆವ ನೆಮ್ಮದಿಯ ನೀರೆ
, ಭಜಿಪೆ ನಿರತ, ನನ್ನಮ್ಮ. *5*

ಮಾನವಮಿ ದಿನ ಕುದುರೆ, ಮದ್ದಾನೆ, ಚಿಗರಿ,
ಗರುಡ, ವನರಾಜ, ಬಸವ, ಅಂಚೆಯನೇರಿ
ವರುಷವೂ ಬರುವ ಮುನಿಸಿರದ ಮೊಗದವಳೆ,
, ಭಜಿಪೆ ನಿರತ, ನನ್ನಮ್ಮ. *6*

ಉರಿ ಹೊಳಪು, ಜಗ ಮರುಳುಗೊಳಿಪ ಉರು ಮೈಯ,
ನೆನೆಯುವವರ ಮನ ಸುಮನಗಳ ಬಂಡುಣಿಯೆ,
ತನ್ನ ನುತಿ ಗಾಯನಕೆ ಕುಣಿದು ಮಿರುಗುವಳೆ,
, ಭಜಿಪೆ ನಿರತ, ನನ್ನಮ್ಮ. *7*

ತಿಸುಳಿ, ಅಜ, ಕಮಲ ಕಣ್ಣಿಗರು ಪೂಜಿಸಿದ ತಾಯೆ,
ಮುಗುಳುನಗೆ ಮಿಂಚಿ ಬೆಳಗುತಿಹ ಮೊಗದವಳೆ,
ಮನಸು ಸೆಳೆಯುವ ಕಿವಿಯ ಒಡವೆ ಲೋಲಿಸುವ,
, ಭಜಿಪೆ ನಿರತ, ನನ್ನಮ್ಮ. *8*

ಮೂಲ ಸಂಸ್ಕೃತ :

ಶ್ರೀ ಶಾರದಾ ಭುಜಂಗ ಪ್ರಯಾತಾಷ್ಟಕಂ

ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಂ
ಸದಾಸ್ಯೇಂದುಬಿಂಬಾಂ ಸದಾನೋಷ್ಠಬಿಂಬಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *1*

ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಂ
ಪುರಸ್ತೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *2*

ಲಲಾಮಾಂಕಫಾಲಾಂ ಲಸದ್ಗಾನಲೋಲಾಂ
ಸ್ವಭಕ್ತೈಕಪಾಲಾಂ ಯಶಃಶ್ರೀಕಪೋಲಾಂ
ಕರೇತ್ವಕ್ಷಮಾಲಾಂ ಖನತ್ಪ್ರತ್ನಲೋಲಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *3*

ಸುಸೀಮಂತವೇಣೀಂ ದೃಶಾ ನಿರ್ಜಿತೈಣಿಂ
ರಮತ್ಕೀರವಾಣೀಂ ನಮದ್ವಜ್ರಪಾಣೀಂ
ಸುಧಾಮಂಥರಾಸ್ಯಾಂ ಮುದಾ ಚಿಂತ್ಯವೇಣೀಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *4*

ಸುಶಾಂತಾಂ ಸುದೇಹಾಂ ದೃಗಂತೇ ಕಚಾಂತಾಂ
ಲಸತ್ಸಲ್ಲತಾಂಗೀಮನಂತಾಮಚಿಂತ್ಯಾಂ
ಸ್ಮರೇತ್ತಾಪಸೈಃ ಸರ್ಗಪೂರ್ವಸ್ಥಿತಾಂ ತಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *5*

ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ
ಮರಾಲೇ ಮದೇಭೇ ಮಹೋಕ್ಷೇǚಧಿರೂಢಾಂ
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *6*

ಜ್ವಲತ್ಕಾಂತಿವಹ್ನೀಂ ಜಗನ್ಮೋಹನಾಂಗೀಂ
ಭಜನ್ಮಾನಸಾಂಭೋಜ ಶುಭ್ರಾಂತ ಭೃಂಗೀಂ
ನಿಜಸ್ತೋತ್ರ ಸಂಗೀತ ನೃತ್ಯ ಪ್ರಭಾಂಗೀಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *7*

ಭವಾಂಭೋಜ ನೇತ್ರಾಜ ಸಂಪೂಜ್ಯಮಾನಾಂ
ಲಸನ್ಮಂದಹಾಸ್ಪ್ರಭಾವಕ್ತ ಚಿಹ್ನಾಂ
ಚಲಚ್ಚಂಚಲಾಚಾರು ತಾಟಂಕಕರ್ಣಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಂ *8*

ಮುಖಪುಟ / ಮೈಸೂರು ದಸರಾ


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+