ನವರಾತ್ರಿಯಲ್ಲಿ ನಂಬರ್‌ ಹರಟೆ


ಗಣಿತ ಲೋಕಕ್ಕೆ ಭಾರತದ ಕೊಡುಗೆ ಸೊನ್ನೆ!
ಅತ್ಯಂತ ಹೆಚ್ಚು ಶೂನ್ಯ ಸಂಪಾದನೆ ಮಾಡುವವರು ಯಾರು ಗೊತ್ತೇ? ಅದೇ ನಮ್ಮ ರಾಜಕಾರಣಿಗಳು. ಪರೀಕ್ಷೆಗಳು, ಗುಂಡಗಿನ ಡೊಳ್ಳು ಹೊಟ್ಟೆ, ಭಾಷಣಕ್ಕೆ ನಿಂತಾಗ ಕಲ್ಲು, ಮೊಟ್ಟೆ, ಟೊಮ್ಯಾಟೋ... ಹೀಗೆ ಅವರದೇ ಮೇಲುಗೈ.

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.
[email protected]
ಹೀಗೇ ಎಲ್ಲಾ ಸಂಖ್ಯೆಗಳ ಬಗ್ಗೇನೂ ಬರೆದು ಇನ್ನೇನು ಮುಗೀತಲ್ಲಾ ಅಂತ ರಿಲ್ಯಾಕ್ಸ್‌ ಮಾಡಿಕೊಂಡು ಅದುವೇಕನ್ನಡ ಓದ್ತಾ ಇದ್ದೆ. ಆಗ ಇದ್ದಕ್ಕಿದ್ದ ಹಾಗೆ ನಲ್‌ ಪಾಯಿಂಟರ್‌ ಎಕ್ಸೆಪ್ಷನ್‌ ಪಾಪ್‌ ಅಪ್‌ ಆಯ್ತು. ಅದರಲ್ಲಿನ ನಲ್ಲ್‌, ಅದೇ ನಮ್ಮ ಪ್ರೀತಿಯ ಸೊನ್ನೆ ಬಂದು ‘‘ನಾನೇನು ಅನ್ಯಾಯ ಮಾಡಿದ್ದೆ, ನನ್ನ ಬಗ್ಗೇನೂ ಬರಿ’’ ಅಂತ ಬೇಡಿಕೆ ಇಟ್ಟಿತು. ನಿರಾಕರಿಸಿದರೆ ಇನ್ನೆಲ್ಲಿ ಧರಣಿ ಹೂಡಿ, ಅದುವೇಕನ್ನಡಕ್ಕೆ ಪ್ರೊಟೆಸ್ಟ್‌ ಲೆಟರ್‌ ಬರೆಯುತ್ತೋ, ಆಮೇಲೆ ನೀವೆಲ್ಲಾ ಎಲ್ಲಿ ನನ್ಮೇಲೆ ಮುಗೀಬೀಳ್ತೀರೋ ಅಂತ ಭಯವಾಗಿ, ಆಯ್ತು ಆಯ್ತು ನಿನ್ನ ಬಗ್ಗೇನೂ ಬರೀತೀನಿ ಅಂತ ಹೇಳಿ ಸಾಗಹಾಕಿದೆ.

ಈಗ ಕೊಟ್ಟ ಮಾತಿಗೆ ತಪ್ಪಲಾರೆನು ಅಂತ ‘‘ಶೂನ್ಯ ಸಂಪಾದನೆ’’ಗೆ ಕುಳಿತಿದ್ದೇನೆ. ನಾವೆಲ್ಲಾ ಜೀವನದಲ್ಲಿ ಒಂದು ಬಾರಿ ಆದ್ರೂ ಶೂನ್ಯ ಸಂಪಾದನೆ ಮಾಡೆ ಇರ್ತೀವಿ. ಅದು ಯಾವ ರೀತಿಯದ್ದಾದರೂ ಇರಬಹುದು. ಉದಾಹರಣೆಗೆ ಶಾಲಾ ಕಾಲೇಜು ದಿನಗಳಲ್ಲಿ - ಕಿರುಪರೀಕ್ಷೆ, ಅರ್ಧವಾರ್ಷಿಕ, ವಾರ್ಷಿಕ ಅಂತ ನಮ್ಮನ್ನು ಗೋಳಾಡಿಸ್ತಿದ್ದರಲ್ಲ ಆ ಪರೀಕ್ಷೆ ಇರಬಹುದು. ಇಲ್ಲ, ವಧು-ವರ ಪರೀಕ್ಷೆ ಆಗಿರಬಹುದು. ನಿರುದ್ಯೋಗಿ ಆಗಿದ್ದಾಗ ಸಂಪಾದನೆಯೇ ಶೂನ್ಯ. ಸಾಹಿತ್ಯಾಸಕ್ತರಾಗಿದ್ರೆ ಉದ್ಗ್ರಂಥ ‘‘ಶೂನ್ಯ ಸಂಪಾದನೆ’’ ಓದಿರಲೂಬಹುದು. ಯಾವುದೂ ಇಲ್ಲ ಅಂದ್ರೆ, ಈ ಶೂನ್ಯ ಸಂಪಾದನೆಯನ್ನೇ ಓದಿಬಿಡಿ !

ಒಂದು ಪ್ರಶ್ನೆ, ಅತ್ಯಂತ ಹೆಚ್ಚು ಶೂನ್ಯ ಸಂಪಾದನೆ ಮಾಡುವವರು ಯಾರು ಗೊತ್ತೇ? ಅದೇ ನಮ್ಮ ರಾಜಕಾರಣಿಗಳು. ಪರೀಕ್ಷೆಗಳು, ಗುಂಡಗಿನ ಡೊಳ್ಳು ಹೊಟ್ಟೆ, ಭಾಷಣಕ್ಕೆ ನಿಂತಾಗ ಕಲ್ಲು, ಮೊಟ್ಟೆ, ಟೊಮ್ಯಾಟೋ... ಹೀಗೆ ಅವರದೇ ಮೇಲುಗೈ. ಇನ್ನು ದುಡ್ಡಿನ ವಿಷಯಕ್ಕೆ ಬಂದ್ರೆ, 1ರ ಬಲಭಾಗಕ್ಕೆ ಎಷ್ಟು ಸೊನ್ನೆ ಬಂದರೂ ಅವರಿಗೆ ಲೆಕ್ಕ ಇಲ್ಲ.

ಸೊನ್ನೆಗೆ ಬೆಲೆ ಇಲ್ಲ ಅಂತ ಅದನ್ನು ಅಷ್ಟು ಹಗುರವಾಗಿ ನೋಡಬಾರದು. ಸೂರ್ಯ, ಚಂದ್ರ, ಭೂಮಿ ಎಲ್ಲಾವುದೂ ದೊಡ್ಡ ಸೊನ್ನೇನೇ! ಎರಡು ಸೊನ್ನೆ ಪಕ್ಕ ಪಕ್ಕ ಸೇರಿಬಿಟ್ಟಾರೆ ಅನಂತ (infinite) ಆಗುತ್ತೆ.

ಸೊನ್ನೆ ಕಂಡ್ರೆ ಗಂಡಸಿರಿಗಿಂತ ಹೆಂಗಸರಿಗೆ ಜಾಸ್ತಿ ಇಷ್ಟ ಅಂತ ನನ್ನ ಥಿಯರಿ. ಹಾಗಂದ್ರೆ ಹೆಂಗಸರಿಗೇ ಬುದ್ಧಿ ಕಮ್ಮಿ ಅಂಥ ಅರ್ಥ ಮಾಡ್ಕೋಬೇಡಿ. ಮುತ್ತು, ಹವಳ, ಬೀಡ್ಸ್‌... ಹೀಗೇ ಸೊನ್ನೆ ಥರ ದುಂಡಗಿರುವ ಶೇಪ್‌ ಇರುವ ವಸ್ತುಗಳ ಮೇಲಿನ ಅವರ ಆಸಕ್ತಿ ನೋಡಿ ಹೀಗೆ ಹೇಳಿದೆ. ಜೊತೆಗೆ ಅವರ ಫೇವರಿಟ್‌ ಗಂಗಾ-ಯಮುನಾಸ್ತ್ರದ್ದೂ ಸೊನ್ನೆಯದೇ ಶೇಪ್‌ :-) ಅದಕ್ಕೆ ಮಿಗಿಲಾದ ಯಾವ maleಅಸ್ತ್ರ ಇದೆ, ಹೇಳಿ!

ಕೊನೆಯಲ್ಲಿ ಒಂದು ಮುಖ್ಯವಾದ ಸಂಗತಿ. ಗಣಿತ ಲೋಕಕ್ಕೆ ಭಾರತದ ಕೊಡುಗೆ ಸೊನ್ನೆ ! ಶಾಕ್‌ ಆಯ್ತಾ? ಹೌದು, ನಾನೇನು ತಪ್ಪು ಹೇಳಿಲ್ಲ. ಗಣಿತಕ್ಕೆ ಭಾರತದ ಶ್ರೇಷ್ಠ ಕೊಡುಗೆ ‘‘0’’. ’’ಸೊನ್ನೆ’’ ಭಾರತದ ಅವಿಷ್ಕಾರ !!

ಇಲ್ಲಿಗೆ ನನ್ನ ನಂಬರ್‌ ಹರಟೆ ಮುಗಿಸುತ್ತೇನೆ. ಎಲ್ಲರಿಗೂ ವಿಜಯದಶಮಿ ಶುಭಾಶಯಗಳು. ಅಂಕಿಗಳೊಡನೆ ವಿನೋದ ವಿಹಾರ ಹೇಗಿತ್ತು ? [email protected]

***

ಪ್ರೇರಣೆ : ನಮ್ಮ ಅಪ್ರಮೇಯ ವಿಚಿತ್ರಾನ್ನ punಡಿತರ ಪ್ರಮೇಯ 204. ಅವರು ‘ನಿಜ ಹೇಳಿ; 19ರ ಮಗ್ಗಿ ನೆನಪಿದೆಯಾ?’ ಎಂದಾಗ , ಬರೀ 19ಲ್ಲ, 119, 199ರ ಮಗ್ಗಿ ಬೇಕಾದ್ರೂ ಸುಲಭವಾಗಿ ಹೇಳಬಹುದು ಎನ್ನಿಸಿ ಬರೆದದ್ದು ಈ ಲೇಖನ. ಜೋಶಿ ಅವರ ಆಸಕ್ತಿ, ಪ್ರೋತ್ಸಾಹ ಮತ್ತು ಸಲಹೆಗಳಿಗೆ ವಿಶೇಷ ಧನ್ಯವಾದಗಳು.

ಅರ್ಪಣೆ : ಗಣಿತದ ವಿಸ್ಮಯಗಳಲ್ಲಿ ವಿಹರಿಸಲು ಕಲಿಸಿದ ಲೆಕ್ಕದ ಮೇಷ್ಟ್ರು ಅಪ್ಪನಿಗೆ, ಗಣಿತವೆಂಬ ಕಬ್ಬಿಣದ ಕಡಲೆಯನ್ನು(?) ಅರಗಿಸಿ ನೀರು ಕುಡಿಸುವ(ಇಲ್ಲಾ ಬರೀ ನೀರು ಕುಡಿಸುವ!) ಎಲ್ಲಾ ಲೆಕ್ಕದ ಮೇಷ್ಟ್ರುಗಳಿಗೆ.

ಸ್ಮರಣೆ : ಗಣೇಶ!, ವಿನೋದಗಣಿತ ಮತ್ತು of course ಗೂಗಲೇಶ!!


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+