ಮನೆಯನು ಬೆಳಗುವ ಅಲಂಕಾರಿಕ ಕ್ರಿಸ್ಮಸ್ ಟ್ರೀ

ಕ್ರಿಸ್ ಮಸ್ ಗಿಡದ ಅಲಂಕಾರ ಜೋರಿದ್ದಷ್ಟು ಹಬ್ಬಕ್ಕೆ ಕಳೆ. ಆದರೆ ಕ್ರಿಸ್ಮಸ್ ಗಿಡದ ಅಲಂಕಾರ ಒಂದೊಂದು ಕಡೆ ಒಂದೊಂದು ರೀತಿ ಇರುತ್ತೆ. ಅಲಂಕಾರಕ್ಕೆಂದು ಅನೇಕ ರೀತಿಯ ಕ್ರಿಸ್ಮಸ್ ಗಿಡಗಳು ಲಭ್ಯವಿದೆ. ಎಲೆ, ಬಣ್ಣ ಮತ್ತು ಇನ್ನಿತರ ಅಂಶಗಳಲ್ಲಿ ವಿಭಿನ್ನವಾಗಿರುವ ಅನೇಕ ಕ್ರಿಸ್ಮಸ್ ಟ್ರೀ ಗಿಡಗಳಿವೆ. ಅವು ಯಾವುವೆಂದು ಮುಂದೆ ತಿಳಿದುಕೊಳ್ಳಿ.
ಕ್ರಿಸ್ ಮಸ್ ಗಿಡದ ವಿಧ ಮತ್ತು ಅಲಂಕಾರ:
1. ಫಿರ್ : ತುಂಬಾ ಮೃದು, ಅಗಲ ಮತ್ತು ಚಪ್ಪಟೆ ಹಸಿರು ಎಲೆಗಳನ್ನು ಹೊಂದಿರುವ ಈ ಗಿಡ ಕ್ರಿಸ್ ಮಸ್ ಗೆಂದು ಬಳಸುವ ನೈಜ ಗಿಡ. ಇದರಲ್ಲಿ ನಾರ್ಡ್ ಮಾನ್ ಫಿರ್, ಫ್ರೇಸರ್ ಫಿರ್, ಡಗ್ಲಾಸ್ ಫಿರ್, ಬಾಲ್ಸಾಮ್ ಫಿರ್ ಮತ್ತು ವೈಟ್ ಫಿರ್ ಪ್ರಸಿದ್ಧ. ಹಬ್ಬದ ಸಮಯದಲ್ಲಿ ಈ ಮರವನ್ನು ಕತ್ತರಿಸಿ ಮನೆಯಲ್ಲಿಟ್ಟು ಅಲಂಕರಿಸಲಾಗುತ್ತದೆ.
2. ಪೈನ್ : ಈ ಗಿಡವನ್ನು ಅಲಂಕರಿಸಿದರೆ ಮನೆಯಲ್ಲಿ ಗಂಧವೂ ತುಂಬಿರುತ್ತೆ. ಸೂಜಿಯಂತಿರುವ ಇದರ ಎಲೆಗಳು 4 ವಾರದವರೆಗು ಹಸಿರಾಗಿರುತ್ತದೆ. ಹೊಸ ವರ್ಷಕ್ಕೂ ಕೂಡ ಗಿಡ ತಾಜಾ ಆಗಿಯೇ ಕಾಣುತ್ತಿರುತ್ತದೆ. ಅಲಂಕಾರದಲ್ಲಿ ತುಂಬಾ ಮನೋಹರವಾಗಿ ಕಾಣುವ ಈ ಎಲೆಗಳ ಮಧ್ಯದಲ್ಲಿ ಸಾಕಷ್ಟು ಜಾಗವಿರುವುದರಿಂದ ಅಲಂಕಾರಿಕ ವಸ್ತುಗಳನ್ನು ಸುಲಭವಾಗಿ ಇಡಬಹುದು. ವರ್ಜಿನಿಯಾ ಪೈನ್ ಮತ್ತು ಜುನಿಪರ್ ಪೈನ್ ಎಂಬ ವಿಧವೂ ಇದರಲ್ಲಿದೆ.
3. ಸ್ಪ್ರ್ಯೂಸ್ : ಬೆಳ್ಳಿ ಮತ್ತು ನೀಲಿ ಮಿಶ್ರಿತವಾಗಿರುವ ಈ ಮರ ಒಳ್ಳೆಯ ಸುವಾಸನೆ ಪಡೆದುಕೊಂಡಿದೆ. ಮನೆಯ ಹೊರಗೆ ಮತ್ತು ಒಳಗೆ ಇದರ ಅಲಂಕಾರ ಮಾಡಿದರೆ ಮನೆಗೆ ಮೆರುಗು ನೀಡುತ್ತೆ. ಇದರಲ್ಲಿ ಬ್ಲೂ, ನಾರ್ವೆ ಮತ್ತು ಒಮೊರಿಕಾ ಸ್ಪ್ರ್ಯೂಸ್ ಎಂಬ ವಿಧಗಳಿದೆ. ಇಂಗ್ಲೆಂಡ್ ನಲ್ಲಿ ನಾರ್ವೆ ಸ್ಪ್ರ್ಯೂಸ್ ತುಂಬಾ ಪ್ರಸಿದ್ಧ ಕ್ರಿಸ್ ಮಸ್ ಗಿಡವೆನಿಸಿದೆ. ಇದನ್ನು ಪಾಟ್ ಗಳಲ್ಲಿ ಬೆಳಸಿ ಕ್ರಿಸ್ಮಸ್ ಸಮಯದಲ್ಲಿ ಅಲಂಕಾರಗೊಳಿಸಿ ಇಡುವುದು ರೂಢಿ.
4. ಸೈಪ್ರಸ್ : ಗಾಢ ಹಸಿರು ಬಣ್ಣದ ಈ ಗಿಡ ಪುಕ್ಕಗಳಂತೆ ಕಾಣುತ್ತದೆ. ಸುಗಂಧವಿರುವ ಈ ಗಿಡದಲ್ಲಿ ಔಷಧೀಯ ಅಂಶವೂ ಇರುವುದರಿಂದ ಈ ಗಿಡವನ್ನು ಪವಿತ್ರವೆನ್ನುತ್ತಾರೆ. ಈ ಗಿಡ ಅಲರ್ಜಿಯನ್ನು ಹೋಗಿಸಿ ಗಾಳಿಯನ್ನು ಶುದ್ಧಗೊಳಿಸುತ್ತದೆ. ಲೇಲ್ಯಾಂಡ್ ಸೈಪ್ರಸ್ ಒಂದು ವಿಧದ ಕ್ರಿಸ್ಮಸ್ ಗಿಡ.
5. ಸಿಡಾರ್ : ಈ ಕೆಂಪು ಸಿಡಾರ್ ಮರ ಪ್ರಾಚೀನವಾದ ಕ್ರಿಸ್ಮಸ್ ಟ್ರೀ. ಇದರ ಕೊಂಬೆಗಳು ಭಾರ ರಹಿತ, ತ್ರಿಭುಜಾಕಾರವಾಗಿರುತ್ತದೆ. ಈ ಕೆಂಪು ಸಿಡಾರ್ ಪ್ರಸಿದ್ಧ ಕ್ರಿಸ್ಮಸ್ ಟ್ರೀ. ಇದನ್ನು ಬಳಸಿದರೆ ಕ್ರಿಸ್ಮಸ್ ಹಬ್ಬಕ್ಕೆ ಮೆರುಗು ನೀಡುತ್ತದೆ.












Click it and Unblock the Notifications