Year Ender 2024: ಈ ವರ್ಷ ನಿವೃತ್ತಿ ಘೋಷಿಸಿದ ಪ್ರಮುಖ ಕ್ರೀಡಾತಾರೆಗಳು

2024ರಲ್ಲಿ ನಡೆದ ಕ್ರೀಡಾಕೂಟಗಳೇನು ಕಡಿಮೆಯಿಲ್ಲ, ಟಿ20 ವಿಶ್ವಕಪ್, ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಕೂಟಗಳು ಕ್ರೀಡಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿವೆ. ಅದೇ ರೀತಿ ಹಲವು ಪ್ರಮುಖ ಕ್ರೀಡಾಪಟುಗಳು ಈ ವರ್ಷ ಆಟಕ್ಕೆ ವಿದಾಯ ಹೇಳಿದ್ದು ಬೇಸರ ಕೂಡ ತರಿಸಿದೆ. ರವಿಚಂದ್ರನ್ ಅಶ್ವಿನ್‌ ರಿಂದ ರಾಫೆಲ್ ನಡಾಲ್‌ವರೆಗೆ ಹಲವು ತಾರೆಗಳು ಈ ವರ್ಷ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಕ್ರಿಕೆಟ್ ನಿಂದ ಹಾಕಿವರೆಗೆ ಪ್ರಮುಖ ಕ್ರೀಡೆಗಳಲ್ಲಿ ತಾರೆಗಳಾಗಿ ಮಿಂಚಿದವರು 2024ರಲ್ಲಿ ತಮ್ಮ ಆಟಕ್ಕೆ ನಿವೃತ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಹಾಗಾದರೆ ಈ ವರ್ಷ ನಿವೃತ್ತಿ ಘೋಷಣೆ ಮಾಡಿದ ಪ್ರಮುಖ ಕ್ರೀಡಾಪಟುಗಳು ಯಾರು ಎನ್ನುವ ಮಾಹಿತಿ ಇಲ್ಲಿದೆ.

year ender 2024 virat kohli nadal ashwin sports legends retired

ರವಿಚಂದ್ರನ್ ಅಶ್ವಿನ್‌

ಭಾರತ ತಂಡದ ದಿಗ್ಗಜ ಬೌಲರ್ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯದ ಬಳಿಕ ದಿಢೀರ್ ಎಂದು ನಿವೃತ್ತಿ ಘೋಷಿಸಿದ್ದು ಸಾಕಷ್ಟು ಅಚ್ಚರಿ ಮೂಡಿಸಿತ್ತು. ಬ್ರಿಸ್ಬೇನ್‌ನ ಗಬ್ಬಾ ಅಂಗಳದಲ್ಲಿ ನಡೆದ ಸರಣಿಯ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು.

2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅವರು, 106 ಟೆಸ್ಟ್, 116 ಏಕದಿನ ಮತ್ತು 65 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 537 ವಿಕೆಟ್ ಪಡೆದಿದ್ದರೆ, ಏಕದಿನ ಮಾದರಿಯಲ್ಲಿ 156 ವಿಕೆಟ್ ಮತ್ತು ಟಿ20 ಮಾದರಿಯಲ್ಲಿ 72 ವಿಕೆಟ್ ಪಡೆದಿದ್ದಾರೆ. ಅವರು 2025ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪರವಾಗಿ ಕಣಕ್ಕಿಳಿಯಲಿದ್ದು ತವರಿನ ಅಭಿಮಾನಿಗಳು ಅಶ್ವಿನ್ ಆಟವನ್ನು ಇನ್ನಷ್ಟು ದಿನ ನೋಡಬಹುದಾಗಿದೆ.

ರಾಫೆಲ್ ನಡಾಲ್

ದಾಖಲೆಯ 14 ಫ್ರೆಂಚ್ ಓಪನ್ ಮತ್ತು 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ರಾಫೆಲ್ ನಡಾಲ್ ಅವರು 2024 ರಲ್ಲಿ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದರು, ನವೆಂಬರ್‌ನಲ್ಲಿ ಡೇವಿಸ್ ಕಪ್ ಫೈನಲ್‌ ಪಂದ್ಯ ಅವರ ಕೊನೆಯ ಪಂದ್ಯವಾಗಿತ್ತು. ಹಲವು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಿದಾಯ ಹೇಳಲು ನಿರ್ಧರಿಸಿದ್ದರು. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಡಾಲ್‌ ಮುಂದಿನ ಪೀಳಿಗೆಗೆ ಹಲವು ವಿಚಾರಗಳಲ್ಲಿ ಸ್ಪೂರ್ತಿಯಾಗಿದ್ದಾರೆ.

ಹಾಕಿ ದಿಗ್ಗಜ ಶ್ರೀಜೇಶ್

ಭಾರತ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಆಗಸ್ಟ್ 8ರಂದು ನಿವೃತ್ತಿ ಘೋಷಣೆ ಮಾಡಿದರು. ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಸ್ಪೇನ್ ವಿರುದ್ಧ ಗೆದ್ದು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿತು. ಒಲಿಂಪಿಕ್ ಪದಕದ ಗೆಲುವಿನ ಖುಷಿಯಲ್ಲೇ ಶ್ರೀಜೇಶ್ ಹಾಕಿಗೆ ವಿದಾಯ ಹೇಳಿದರು.

ವಿರಾಟ್, ರೋಹಿತ್, ಜಡೇಜಾ

2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ಗೆದ್ದು ಚಾಂಪಿಯನ್ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಶಸ್ತಿ ಗೆದ್ದ ಖುಷಿಯಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಅಭಿಮಾನಿಗಳಿಗೆ ಆಘಾತ ನೀಡಿದರು. ಇದಾದ ಒಂದು ದಿನದ ಬಳಿಕ ಆಲ್‌ರೌಂಡರ್ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+