Year-Ender 2024: 2024ರಲ್ಲಿ ತಾಯಾದ ಕನ್ನಡದ ನಟಿಯರಿವರು: ಕಂದಮ್ಮಗಳ ಫೋಟೋ ಕೂಡ ರಿವೀಲ್‌

ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದ ನಾವು ಆಗಲೇ 12 ತಿಂಗಳನ್ನು ಸಂಪೂರ್ಣವಾಗಿ ಮುಗಿಸಿ 2025ನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದೇವೆ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಒಂದು ವರ್ಷವೇ ಕಳೆದು ಹೋಗಿದ್ದು, ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. 2025 ಎಲ್ಲರ ಜೀವನದಲ್ಲಿ ಹೊಸತನ ತರಲಿ ಎನ್ನುವ ಆಶಯದೊಂದಿಗೆ 2024ರ ವರ್ಷದ ಕೊನೆಯಲ್ಲಿ ಈ ವ‍ರ್ಷ ನೆನಪಿನಲ್ಲಿಡಬಹುದಾದ ಕೆಲವು ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ. 2024ರಲ್ಲಿ ತಾಯಾದ ಕನ್ನಡ ನಟಿಯರ ವಿವರ ಇಲ್ಲಿದೆ.

Year-Ender 2024 Notable Kannada Actresses Who Welcomed Newborns This Year

ಮಿಲನಾ ನಾಗರಾಜ್‌

ಕನ್ನಡ ಚಿತ್ರರಂಗದ ಲವ್‌ ಮಾಕ್ಟೇಲ್‌ ಜೋಡಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಯ ಬಾಳಿಗೆ ಈ ವರ್ಷ ಮುದ್ದು ದೇವತೆಯ ಆಗಮನವಾಗಿದೆ. ಮುದ್ದಾದ ​ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ 2024ರಲ್ಲಿ ತಂದೆ-ತಾಯಾದ ಖುಷಿಯಲ್ಲಿದ್ದಾರೆ. ಕೃಷ್ಣ ಹಾಗೂ ಮಿಲನಾ ದಂಪತಿ ಈಗಾಗಲೇ ಮಗುವಿನ ಮುಖ ಕೂಡ ರಿವೀಲ್‌ ಮಾಡಿದ್ದಾರೆ. ಜೊತೆಗೆ ಆಕೆಯನ್ನು ಪರಿ ಎಂದು ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ 2021ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು.

Year-Ender 2024 Notable Kannada Actresses Who Welcomed Newborns This Year

ಅದಿತಿ ಪ್ರಭುದೇವ

2024ರ ಮೊದಲ ದಿನ ಅಂದರೆ ಹೊಸ ವರ್ಷದ ದಿನವೇ ತಾಯಾಗುತ್ತಿರುವ ಖುಷಿ ಹಂಚಿಕೊಂಡಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ ಯುಗಾದಿ ಹಬ್ಬದ ದಿನ ಹೆಣ್ಣು ಮಗುವಿನ ತಾಯಾದ ಸಿಹಿ ಸುದ್ದಿ ನೀಡಿದ್ದರು. ಈಗಾಗಲೇ ಮಗಳನ್ನು ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿರುವ ಅದಿತಿ ಪ್ರಭುದೇವ ಮಗಳಿಗೆ ನೇಸರ ಎಂದು ಮುದ್ದಾದ ಹೆಸರು ಇಟ್ಟಿದ್ದಾರೆ. ಇನ್ನು ದಾವಣಗೆರೆ ಮೂಲದ ನಟಿ ಅದಿತಿ ಪ್ರಭುದೇವ ಅವರು 2022ರಲ್ಲಿ ಉದ್ಯಮಿ ಹಾಗೂ ಯುವ ರೈತ ಯಶಸ್‌ ಚಂದ್ರಕಾಂತ್​ ಪಟ್ಲಾ ಅವರನ್ನು ವಿವಾಹವಾಗಿದ್ದರು.

Year-Ender 2024 Notable Kannada Actresses Who Welcomed Newborns This Year

ಹರ್ಷಿಕಾ ಪೂಣಚ್ಚ

ಕನ್ನಡ ಚಿತ್ರರಂಗದ ಮತ್ತೊಂದು ಕ್ಯೂಟ್‌ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ ಈ ವರ್ಷ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿಕೊಂಡಿದ್ದಾರೆ. ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿದ್ದ ಈ ಜೋಡಿಗೆ 2024ರ ಅಕ್ಟೋಬರ್ ತಿಂಗಳಲ್ಲಿ ಹೆಣ್ಣು ಮಗುವಾಗಿದೆ. ಮಗಳಿಗೆ ಚೈಕಾರ್ತಿ ಎಂದು ಹೆಸರಿಡಲಾಗಿದ್ದು, ಈವರೆಗೂ ಮಗುವಿನ ಫೋಟೋವನ್ನು ಎಲ್ಲೂ ರಿವೀಲ್‌ ಮಾಡಿಲ್ಲ. ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ ಜೋಡಿ 2023ರ ಆಗಸ್ಟ್ 24ರಂದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

Year-Ender 2024 Notable Kannada Actresses Who Welcomed Newborns This Year

ನೇಹಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ನಟಿ ಗೊಂಬೆ ಹಾಗೂ ನಟ ಚಂದನ್‌ ಗೌಡ ದಂಪತಿ ಈ ವರ್ಷ ಮಗಳನ್ನು ಸ್ವಾಗತಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು ನೇಹಾ ಗೌಡ ಕಿರುತೆರೆಯ ಗೊಂಬೆ ಎಂದೇ ಜನಪ್ರಿಯತೆ ಪಡೆದಿದ್ದರು. ನೇಹಾ ಪತಿ ಚಂದನ್ ಗೌಡ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಇನ್ನು ರಾಜ-ರಾಣಿ ಸೀಜನ್‌-೧ ಶೋನಲ್ಲಿ ಭಾಗವಹಿಸಿದ್ದ ಈ ದಂಪತಿ ವಿನ್ನರ್‌ ಆಗಿ ಹೊರಹೊಮ್ಮಿದ್ದರು. 2024ರ ಅಕ್ಟೋಬರ್‌ ತಿಂಗಳಲ್ಲಿ ನೇಹಾ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Year-Ender 2024 Notable Kannada Actresses Who Welcomed Newborns This Year

ಕವಿತಾ ಗೌಡ

ಕನ್ನಡ ಕಿರುತೆರೆಯ ಮತ್ತೊಂದು ಜನಪ್ರಿಯ ಜೋಡಿ ನಟ ಚಂದನ್‌ ಹಾಗೂ ನಟಿ ಕವಿತಾ ಗೌಡ ತಮ್ಮ ಈ ವರ್ಷ 2024ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರಾದ ನಟ ವಿಷ್ಣುವರ್ಧನ್, ನಟ ಉಪೇಂದ್ರ, ನಟಿ ಶ್ರುತಿ ಅವರ ಜನ್ಮ ದಿನ ಸೆಪ್ಟೆಂಬರ್ 18ರಂದೇ ನಟ ಚಂದನ್‌ ಹಾಗೂ ನಟಿ ಕವಿತಾ ಗೌಡ ಮಗ ಜನಿಸಿದ್ದಾನೆ. ಈಗಾಗಲೇ ಮಗುವಿನ ಫೋಟೋ ಶೇರ್‌ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+