Year Ender 2024: ಈ ವರ್ಷ ಅತಿ ಹೆಚ್ಚು ಮಾರಾಟವಾದ ಮಾರುತಿ ಸುಜುಕಿ ಬಲೆನೊದ ಹೊಸ ಮಾದರಿ ಕಾರು
Year Ender 2025: 2025ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಹಾಗೆಯೇ 2024ರಲ್ಲಿ ನಡೆದಿರುವ ಕೆಲವು ಸಾಧನೆ, ಮೈಲಿಗಲ್ಲುಗಳನ್ನು ಮೆಲುಕು ಹಾಕಲೇಬೇಕಾಗುತ್ತದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಬಂದರೆ ಈ ವರ್ಷದ ನೆವಂಬರ್‌ನಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಯಾವುದು ಹಾಗೂ ಅದನ್ನೇ ಯಾಕೆ ಹೆಚ್ಚು ಖರೀದಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನೀವು ತಿಳಿಯಲೇಬೇಕು.
ಪ್ರತಿ ವರ್ಷವೂ ಕೂಡ ಇಷ್ಟು ವಾಹನಗಳು ಮಾರಾಟವಾಗಿವೆ ಎಂದು ದಾಖಲಿಸಲಾಗುತ್ತದೆ. ಅದರಲ್ಲೂ ಅತೀ ಹೆಚ್ಚು ಮಾರಾಟವಾದ ವಾಹನದ ದಾಖಲೆಯನ್ನು ಕೂಡ ಸಂಪೂರ್ಣವಾಗಿ ನೀಡಲಾಗುತ್ತದೆ. ಹಾಗೆಯೇ ಇದೀಗ ಭಾರತದಲ್ಲಿ ಕಾರುಗಳ ವಿಭಾಗದಲ್ಲಿ ಮೂಲಗಳ ಪ್ರಕಾರ ನವೆಂಬರ್‌ನಲ್ಲಿ ಹೆಚ್ಚು ಮಾರಾಟ ಆಗಿರುವ ಕಾರೆಂದರೆ, ಅದು ಮಾರುತಿ ಸುಜುಕಿ ಕಂಪನಿಯ ಬಲೆನೋ ಆಗಿದೆ. ಹಾಗಾದರೆ ಇದರ ದರ, ವಿಶೇಷತೆಗಳನ್ನು ಇಲ್ಲಿ ನೋಡೋಣ ಬನ್ನಿ.

ನವೆಂಬರ್ 2024ರಲ್ಲಿ ಈ ಕಂಪನಿಯ 16,293 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 12,961 ಕಾರುಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 3,332 ಹೆಚ್ಚು ಕಾರುಗಳು ಮಾರಾಟ ವಾಗಿವೆ. ಈ ಮೂಲಕ ಇದು ಮಾರಾಟದಲ್ಲಿ ಹ್ಯುಂಡೈ ಕ್ರೆಟಾ, ಟಾಟಾ ಪಂಚ್ ಮತ್ತು ನೆಕ್ಸಾನ್, ಮಹೀಂದ್ರ ಸ್ಕಾರ್ಪಿಯೊ ಸೇರಿದಂತೆ ಅನೇಕ ಜನಪ್ರಿಯ ಕಾರುಗಳನ್ನು ಹಿಂದಿಕ್ಕಿದೆ.
ಇದೀಗ ಈ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯ ಇರುವುದರಿಂದ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ನೀವು ಸಹ ಈ ಕಾರು ಖರೀದಿ ಮಾಡುವ ಪ್ಲ್ಯಾನ್‌ನಲ್ಲಿದ್ದರೆ ಲೋನ್ ಮೂಲಕ ಖರೀದಿ ಮಾಡುವುದೇಗೆ ತಿಂಗಳ ಇಎಮ್ಐ ಎಷ್ಟು ಎಂಬ ಕುರಿತ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದಲ್ಲಿ ಹೆಚ್ಚು ಮಾರಾಟ ಆಗುತ್ತಿರುವ ಕಾರು ಮಾರುತಿ ಸುಜುಕಿ ಬಲೆನೊ ಎರಡು ಸಿಎನ್‌ಜಿ ರೂಪಾಂತರಗಳನ್ನು ಹೊಂದಿದೆ. ಇದರಲ್ಲಿ ಡೆಲ್ಟಾ ಸಿಎನ್‌ಜಿಯ ಎಕ್ಸ್ ಶೋ ರೂಂ ದರ 8.40 ಲಕ್ಷ ರೂಪಾಯಿ ಆಗಿದ್ದು, ಝೀಟಾ ಸಿಎನ್‌ಜಿ ಎಕ್ಸ್ ಶೋ ರೂಂ ಬೆಲೆ 9.33 ಲಕ್ಷ ರೂಪಾಯಿನಿಂದ ಪ್ರಾರಂಭವಾಗಲುದೆ. ಈ ಕಾರು 1,197 cc ಪೆಟ್ರೋಲ್ ಎಂಜಿನ್ ಮತ್ತು CNG ಕಿಟ್ ಅನ್ನು ಒಳಗೊಂಡಿದೆ. ಅಲ್ಲದೆ, ಜಂಟಿಯಾಗಿ 76.43 bhp ಮತ್ತು 98.5 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಕಾರು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಒಳಗೊಂಡಿದೆ. ಮೈಲೇಜ್ ವಿಚಾರಕ್ಕೆ ಬಂದರೆ, ಪ್ರತಿ ಕಿಲೋ ಗ್ರಾಂಗೆ 30.61 ಕಿಲೋ ಮೀಟರ್ ವರೆಗೆ ಮೈಲೇಜ್ ನೀಡಲುದೆ. ನೋಡಲು ಸ್ಟೈಲಿಶ್ ಆಗಿ ಕಾಣುವ ಈ ಕಾರಿನ ವೈಶಿಷ್ಟ್ಯಗಳು ಸಹ ಅಷ್ಟೇ ಅದ್ಭುತ ಆಗಿವೆ. ದೊಡ್ಡ ಡಿಸ್ಪ್ಲೇ ಮತ್ತು 6 ಏರ್ ಬ್ಯಾಗ್‌ಗಳೊಂದಿಗೆ ತುಂಬಾ ವೈಶಿಷ್ಟತೆಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಬಲೆನೊ ಡೆಲ್ಟಾ ಸಿಎನ್‌ಜಿ: ಮಾರುತಿ ಸುಜುಕಿಯ ಟಾಪ್ ಸೆಲ್ಲಿಂಗ್ ಕಾರ್ ಬಲೆನೊದ ಸಿಎನ್‌ಜಿ ಮಾದರಿಗಳಲ್ಲಿ ಹೆಚ್ಚು ಮಾರಾಟ ಆಗುವ ಬಲೆನೊ ಡೆಲ್ಟಾ ಸಿಎನ್‌ಜಿಯ ಆನ್-ರೋಡ್ ಬೆಲೆ 9.44 ಲಕ್ಷ ರೂಪಾಯಿ ಆಗಿದೆ. ಕೇವಲ 1,00,000 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ.
1,00,000 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಿದ ಬಳಿಕ ನೀವು 8.44 ಲಕ್ಷ ರೂಪಾಯಿಗಳ ಕಾರು ಸಾಲವನ್ನು ಪಡೆಯಬೇಕಾಗುತ್ತದೆ. 5 ವರ್ಷಗಳವರೆಗೆ ಶೇಕಡ 10ರಷ್ಟು ಬಡ್ಡಿ ದರದಲ್ಲಿ ಕಾರು ಸಾಲವನ್ನು ಪಡೆದರೆ, ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು 17,933 ರೂಪಾಯಿಗಳನ್ನು EMI ಆಗಿ ಪಾವತಿ ಮಾಡಬೇಕಾಗುತ್ತದೆ. ಬಡ್ಡಿ ಸುಮಾರು 2.32 ಲಕ್ಷ ರೂಪಾಯಿ ಆಗಲಿದೆ.
ಬಲೆನೊ ಝೀಟಾ ಸಿಎನ್‌ಜಿ: ಬಲೆನೊದ ಝೀಟಾ CNG ಮಾದರಿಯ ಆನ್-ರೋಡ್ ಬೆಲೆ 10.45 ಲಕ್ಷ ರೂಪಾಯಿ ಆಗಿದೆ. ಈ ಕಾರಿಗೆ 1 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿದರೆ, 9.45 ಲಕ್ಷ ರೂಪಾಯಿ ಕಾರ್ ಲೋನ್ ತೆಗೆದುಕೊಳ್ಳಬೇಕಾಗುತ್ತದೆ. 5 ವರ್ಷಗಳವರೆಗೆ ಕಾರ್ ಸಾಲ ತೆಗೆದುಕೊಂಡು ಬಡ್ಡಿ ದರವು ಶೇಕಡ 10ರಷ್ಟು ಎಂದು ಭಾವಿಸಿದರೆ, ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು 20,078 ರೂಪಾಯಿಗಳನ್ನು EMI ಆಗಿ ಪಾವತಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ನಿಮ್ಮ ಹತ್ತಿರದ ಕಾರ್ ಶೋ ರೂಂಗೆ ಹೋಗಿ ಪಡೆದುಕೊಳ್ಳಬಹುದಾಗಿದೆ.












Click it and Unblock the Notifications