Year Ender 2022: ಈ ವರ್ಷ ವೈರಲ್ ಆಗಿರುವ ವಿಚಿತ್ರ ಆಹಾರ ಕಾಂಬಿನೇಷನ್‌ಗಳು ಯಾವುವು ಗೊತ್ತೆ?
ಇನ್ನೇನು 2022ಕ್ಕೆ ಬಾಯ್ ಹೇಳುವ ಸಮಯ ಬಂದಿದೆ. ವರ್ಷವೂ ಮುಗಿದು ಹೊಸ ವರ್ಷಕ್ಕೆ ನಾವು ಸ್ವಾಗತ ಕೋರುವ ಸಮಯ ಬಂದಿದೆ. ಈ ಹಿನ್ನೆಲೆ ಈ ವರ್ಷವನ್ನೂ ಒಮ್ಮೆ ಹಿಂತಿರುಗಿ ನೋಡುವ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅದ ಅನೇಕ ಘಟನೆಗಳ ಬಗ್ಗೆ ಮತ್ತೊಮ್ಮೆ ನೆನಪಿಸಿಕೊಳ್ಳುವ.
ಹಲವು ವಿಭಿನ್ನ, ವಿಶೇಷ ಘಟನೆಗಳು ವೈರಲ್ ಆಗಿ ನಮ್ಮನ್ನು ರಂಜಿಸಿವೆ, ಕೆಲವೊಂದು ತಲೆ ಕೆಡಿಸಿವೆ. ಇವುಗಳ ಜೊತೆ ಜೊತೆಗೆ ವೈರಲ್ ಆಗಿರುವ ತಿನಿಸುಗಳ ಪಟ್ಟಿಯು ಇದೆ. ಇವುಗಳ ಜೊತೆಗೆ ವೈರಲ್ ಆದ ವಿಲಕ್ಷಣವಾದ ಆಹಾರ ಕಾಂಬಿನೇಷನ್‌ಗಳು ಇನ್ನೂ ನಮ್ಮನ್ನು ಕಾಡುತ್ತಿವೆ. ಹಾಗಾದರೇ ಈ ವರ್ಷ ವೈರಲ್ ಆದ ಫುಡ್ ಕಾಂಬೀನೇಷನ್‌ಗಳು ಯಾವುವು ಎಂಬುದನ್ನು ನೋಡೋಣ.
*ಹಣ್ಣಿನ ಚಹಾ*
ಒಂದು ಒಳ್ಳೆ ಬೆಚ್ಚಗಿನ ಚಹಾದೊಂದಿಗೆ ನಮ್ಮ ದಿನವನ್ನು ಪ್ರಾರಂಭಿಸುವುದು ಎಷ್ಟು ಮುಖ್ಯ ಎಂಬುದು ನಮಗೆ ತಿಳಿದಿದೆ. ಕೊಲವೊಬ್ಬರಿಗೆ ಚಹಾ ಇಲ್ಲದೆ ದಿನವೇ ಆರಂಭವಾಗದು. ಚಹಾ ಜೊತೆಗೆ ಕೆಲವು ತಿನಿಸುಗಳನ್ನು ತೆಗೆದುಕೊಳ್ಳುತ್ತೆವೆ. ಚಿಪ್ಸ್, ಚಕ್ಕುಲಿ, ಬಜ್ಜಿ, ಬೊಂಡಾ ತರಹ. ಆದರೆ, ನೀವು ಅದರಲ್ಲಿ ಹಣ್ಣುಗಳ ಚಹಾವನ್ನು ಕುಡಿಯಲು ಬಯಸುತ್ತೀರಾ? ಖಂಡಿತ ಇಲ್ಲ ಅಲ್ಲವೇ..?

ಆದರೆ, ಗುಜರಾತ್‌ನ ಸೂರತ್‌ನಲ್ಲಿರುವ ಟೀ ಸ್ಟಾಲ್‌ನಲ್ಲಿ ಹಣ್ಣುಗಳಿಂದ ಮಾಡಿದ ವಿಲಕ್ಷಣ ಚಹಾವನ್ನು ಮಾರಾಟ ಮಾಡುತ್ತಾರೆ. ಆದರೆ, ಇಕ್ಕೆ ನೆಟ್ಟಿಗರು ಅಷ್ಟೊಂದು ಇಷ್ಟ ಪಡಲಿಲ್ಲ ಬಿಡಿ.
*ಗುಲಾಬ್ ಜಾಮೂನ್ ಪರೋಟಾ*
ತರಕಾರಿಗಳಿಂದ ತಯಾರಿಸಿದ ಪರೋಟಾಗಳು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಳಿಗಾಲದಲ್ಲಿ ಹೇಳಿ ಮಾಡಿಸಿದ ತಿಂಡಿ ಎಂದರೆ ಅದು ಪರೋಟಗಳು. ಇಂತಹ ಪರೋ ಕೂಡ ಈ ಬಾರಿ ಭಾರೀ ವೈರಲ್ ಆಗಿತ್ತು. ಏಕೆಂದರೆ ಇದರಲ್ಲಿ ಬಳಸಿದ್ದು ತರಕಾರಿಯಲ್ಲ ಬದಲಿಗೆ ಜಾಮೂನು!

ಹೌದು, ಈ ವರ್ಷ ಗುಲಾಬ್ ಜಾಮೂನ್‌ನಿಂದ ಮಾಡಿದ ಈ ಪರೋಟ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ತರಕಾರಿಗಳ ಸ್ಟಫಿಂಗ್ ಬದಲಿಗೆ ಗುಲಾಬ್ ಜಾಮೂನ್ ಅನ್ನು ತುಂಬಿ ಪರೋಟ ತಯಾರಿಸಲಾಗಿತ್ತು. ಜೊತೆಗೆ ಗ್ರಾಹಕರಿಗೆ ಬಡಿಸುವ ಮೊದಲು ಸಕ್ಕರೆ ಪಾಕದಲ್ಲಿ ಅದ್ದಿ ನೀಡಲಾಗುತ್ತಿತ್ತು. ಈ ವಿಲಕ್ಷಣ ಕಾಂಬಿನೇಷನ್‌ಗೆ ಜನರಿಂದ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
*ಸ್ಟ್ರಾಬೆರಿ ಸಮೋಸಾ*
ಈ ವರ್ಷ, ದೆಹಲಿಯ ಆಹಾರ ಮಳಿಗೆಯೊಂದರಿಂದ ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿ ಸಮೋಸಾಗಳು ಸಹ ವೈರಲ್ ಆಗಿವೆ. ಇವುಗಳಲ್ಲಿ ಜಾಮ್, ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿಗಳನ್ನು ತುಂಬಲಾಗಿತ್ತು.

ಆಲೂಗೆಡ್ಡೆ, ಈರುಳ್ಳಿ, ಚಿಕನ್ ಸೇರಿದಂತೆ ಹಲವು ರೀತಿಯ ಸಮೋಸಾಗಳನ್ನು ತಿಂದಿದ್ದೇವೆ. ಆದರೆ, ಈ ವರ್ಷ ಸಾಮಾಜಿಕ ಮಾಧ್ಯಮಗಳಲ್ಇ ವೈರಲ್ ಆಗಿದ್ದು ಮಾತ್ರ ಸ್ಟ್ರಾಬೆರಿ ಸಮೋಸಾ. ಇದಕ್ಕೂ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ.
*ಮೊಮೊಸ್ ಐಸ್ ಕ್ರೀಮ್ ರೋಲ್*
ಎಲ್ಲರ ಮೆಚ್ಚಿನ ಮೊಮೊಸ್‌ಗಳು ಕೂಡ ಈ ವರ್ಷ ವಿಚಿತ್ರ ಪ್ರಯೋಗಕ್ಕೆ ಬಲಿಯಾದವು. ಐಸ್ ಕ್ರೀಮ್ ತುಂಬಿದ ಮೊಮೊಗಳನ್ನು ರೋಲ್‌ಗಳಾಗಿ ಮಾಡಲಾಗಿತ್ತು. ಈ ಮೊಮೊಸ್ ಐಸ್ ಕ್ರೀಮ್ ರೋಲ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಟ್ರೋಲ್‌ಗೂ ಒಳಗಾಗಬೇಕಾಯಿತು.

*ಮಸಾಲಾ ದೋಸೆ ಐಸ್ ಕ್ರೀಮ್ ರೋಲ್*
ಇದೇ ರೀತಿಯ ಪ್ರಯೋಗಕ್ಕೆ ಒಳಗಾದ ಮತ್ತೊಂದು ತಿಂಡಿ ಮಸಾಲೆ ದೋಸೆ. ಮಸಾಲೆ ದೋಸೆಗೆ ಐಸ್‌ಕ್ರೀಮ್ ಹಾಕಿ ಅದನ್ನು ಚಟ್ನಿಯೊಂದಿಗೆ ಬಡಿಸಲಾಗುಗಿತ್ತು. ಇದು ಕೂಡ ಅಂತಹ ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲ.
ಈ ವರ್ಷ ಇಂತಹ ಹಲವಾರು ವಿಲಕ್ಷಣ ಫೂಡ್ ಕಾಂಬಿನೇಷನ್‌ಗಳನ್ನು ನೋಡಿದ್ದೇವೆ. 2023 ರಲ್ಲಿ ನಮ್ಮ ನೆಚ್ಚಿನ ತಿಂಡಿ, ತಿನಿಸುಗಳಿಗೆ ಯಾವುದೇ ಹಿಂಸೆಯಾಘುವುದಿಲ್ಲ. ಇಂತಹ ಹುಚ್ಚು ಹುಚ್ಚು ಪ್ರಯತ್ನಕ್ಕೆ ಬಲಿಯಾಗುವುದಿಲ್ಲ ಎಂಬ ಭರವಸೆಯೊಂದಿಗೆ ಹೊಸ ವರ್ಷಕ್ಕೆ ಕಾಲಿಡುವ.












Click it and Unblock the Notifications