Redmi A3 Mobile: ಫೆ.14ರಂದು ಪ್ರೇಮಿಗಳಿಗಾಗಿ 'ರೆಡ್‌ಮಿ ಎ3' ಮೊಬೈಲ್ ಫೋನ್ ಗಿಫ್ಟ್ : ವೈಶಿಷ್ಟ್ಯಗಳೇನು?
ಬೆಂಗಳೂರು, ಫೆಬ್ರವರಿ 07: ಜಾಗತಿಕವಾಗಿ ಮೊಬೈಲ್ ಯುಗವೇ ಆರಂಭವಾಗಿದೆ ಎನ್ನಬಹುದು. ಏಕೆಂದರೆ ಎಲ್ಲಿ ನೋಡಿದರೂ, ಎಲ್ಲ ಕೈಯಲ್ಲೂ ಮೊಬೈಲ್ ಇದ್ದೆ ಇರುತ್ತದೆ. ಇದಕ್ಕೆ ಪೂರಕವಾಗಿ ಹೊಸ ಫೀಚರ್ಸ್‌ಗಳ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಇದೀಗ ಫೆ.14 ಪ್ರೇಮಿಗಳ ದಿನಾಚರಣೆ (Valentine Day) ದಿನದಂದು ಪ್ರತಿಷ್ಠಿತ ಕ್ಷಿಯೊಮಿ ( Xiaomi Redmi A3) ಕಂಪನಿ 'ರೆಡ್‌ಮಿಎ3' ಗಿಫ್ಟ್ ನೀಡಲಿದೆ.
ಹೌದು, Redmi A3 ಈಗ ಫೆಬ್ರವರಿ 14 ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ದಿನಗಣನೆ ಆರಂಭವಾಗಿದೆ. ಅಂದು ಹೊಸ ಮೊಬೈಲ್ ಖರೀದಿಸಬೇಕು. ಇಲ್ಲವೇ ಹೊಸ ಮೊಬೈಲ್ ಖರೀದಿಸಿ ತಮ್ಮ ಪ್ರೇಮಿಗೆ ಕೊಡಬಯಸುವವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು. ಹಾಗಾದರೆ ಈ ಹೊಸ Redmi A3 ವೈಶಿಷ್ಟ್ಯಗಳು, ಬೆಲೆ, ಬಣ್ಣ ಎಲ್ಲ ಮಾಹಿತಿ ಇಲ್ಲಿದೆ.

ನೂತನ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳ ವಿವರ
ಕಂಪನಿಯು ಸ್ಮಾರ್ಟ್‌ಫೋನ್‌ಗಾಗಿ ಬಿಡುಗಡೆ ಮಾಡುವ ಮುನ್ನ ಅದರ ಬಗೆಗಿನ ಹಲ ಇಂಟ್ರೆಸ್ಟಿಂಗ್ ಅಂಶಗಳನ್ನು ಹಂಚಿಕೊಂಡಿದೆ. ಈ ರೆಡ್‌ಮಿ ಎ3 ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹೊಂದಿದೆ. 6ಜಿಬಿ ವರ್ಚುವಲ್ ರ್ಯಾಮ್ ಸಹಿತ 5,000mAH ಬ್ಯಾಟರಿ ಪ್ರೋವೈಡರ್ ಸಾಮರ್ಥ್ಯ ಹೊಂದಿದೆ.
ಈ ಹೊಸ ಮೊಬೈಲ್‌ನಲ್ಲಿ ಕಂಪನಿಯು ಹ್ಯಾಲೋ ವಿನ್ಯಾಸ ಅಳವಡಿಸಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, ನೀವು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೈಲೈಟ್ ಇರುವುದನ್ನು ಗಮನಿಸಬಹುದಾಗಿದೆ.

ರೌಂಡ್ ಕ್ಯಾಮೆರಾ ಮಾಡ್ಯೂಲ್
ನೂತನ ಈ ಹ್ಯಾಂಡ್‌ಸೆಟ್ ಹಸಿರು ಬಣ್ಣದಲ್ಲಿ ಲಭ್ಯವಿರುತ್ತದೆ. ವಿನ್ಯಾಸದ ವಿಷಯದಲ್ಲಿ, ಸ್ಮಾರ್ಟ್‌ಫೋನ್ ಅದರ ಹಿಂದಿನಂತೆಯೇ ಚರ್ಮದ ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್ ಮತ್ತು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಒಳಗೊಂಡಿದೆ. ಇದನ್ನು ಚೀನೀ ಸ್ಮಾರ್ಟ್‌ಫೋನ್ ತಯಾರಕರು ಹ್ಯಾಲೋ ವಿನ್ಯಾಸ ಅಂತಲೂ ಕರೆಯುತ್ತಾರೆ.
ಮೊಬೈಲ್ ಕೆಳಭಾಗದಲ್ಲಿ ಕಂಪನಿಯ ಬ್ರ್ಯಾಂಡಿಂಗ್ ನೇಮ್ ಕಾಣಬಹುದಾಗಿದೆ. ಅಲ್ಲದೇ USB ಟೈಪ್-C ಚಾರ್ಜಿಂಗ್ ಪೋರ್ಟ್ ಇರುವ ರೆಡ್ ಸ್ಮಾರ್ಟ್ ಫೋನ್ ಇದಾಗಿದೆ. Redmi A3 90Hz ರಿಫ್ರೆಶ್ ಸಹಿತ ಡಿಸ್‌ಪ್ಲೈ ಇದ್ದು, ಇದು ಈ ಹಿಂದಿನ Redmi A2 ನಲ್ಲಿ 60Hz ಪರದೆಯಿಂದ ಉತ್ತಮ ಕ್ವಾಲಿಟಿಗೆ ಜಂಪ್ ಆಗಿದೆ ಎಂಬದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದು ಸಹ ಈ ಮೊಬೈಲ್‌ನ ಮತ್ತೊಂದು ಹೈಲೇಟ್ ಎನ್ನಬಹುದು.
ಕ್ಯಾಮೆರಾ, ಸ್ಟೋರೇಜ್, ಬಣ್ಣದ ಮಾಹಿತಿ
ಈ Redmi A3 ಸ್ಮಾರ್ಟ್‌ಫೋನ್ ಚಾಲ್ತಿಯಲ್ಲಿರುವ ಮೀಡಿಯಾ ಟೆಕ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 13 ಮೂಲಕ ಕಾರ್ಯ ನಿರ್ವಹಿಸಲಿದೆ. 4GB RAM ಮತ್ತು 64GB ಇಂಟರ್ನಲ್ ಸಾಮರ್ಥ್ಯ ಹೊಂದಿದೆ. 13-ಮೆಗಾಪಿಕ್ಸೆಲ್ ರೇರ್ ಕ್ಯಾಮೆರಾ ಮತ್ತು ಮುಂದೆ 8 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. ಬ್ಯಾಟರಿ 10W ವೈರ್ಡ್ ಚಾರ್ಜಿಂಗ್ ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ. ಬ್ಯಾಟರಿ ಬಗ್ಗೆ ಇನ್ನಷ್ಟು ನಿಖರ ಮಾಹಿತಿ ಲಭ್ಯವಾಗಬೇಕಿದೆ.
6.52 ಇಂಚಿನ ಈ ಹ್ಯಾಂಡ್ ಸೆಟ್ ಗಾತ್ರದಲ್ಲಿ ತುಸು ದೊಡ್ಡದೆನಿಸಿದರೂ ಗ್ರಾಹಕಸ್ನೇಹಿ ಫಿನಿಶಿಂಗ್ ಹೊಂದಿದ್ದು, ನೋಡಲು ಆಕರ್ಷಕವಾಗಿದೆ. 32GB ಮತ್ತು 128GB ಇಂಟರ್ನಲ್ (ಆಂತರಿಕೆ ಶೇಖರಣಾ) ಸ್ಟೋರೆಜ್ ಹೊಂದಿದೆ. ಹಸಿರು ಬಣ್ಣದ ಜತೆಗೆ ಕಪ್ಪು, ನೀಲಿ ಬಣ್ಣಗಳಲ್ಲೂ ಮಾರುಕಟ್ಟೆಗೆ ಬರಬಹದು ಎಂದು ನಿರೀಕ್ಷೆಗಳು ಇವೆ.
ಸದ್ಯ ಈ ಹೊಸ ಹ್ಯಾಂಡ್‌ಸೆಟ್ ಪ್ರೇಮಿಗಳ ದಿನಾಚರಣೆಗೆ ಪ್ರೇಮಿಗಳಿಗೆ ಕೊಡುಗೆಯಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪ್ರೇಮಿಗಳಿಗೆ ಗಿಫ್ಟ್ ಕೊಡುವವರು ಈ ಮೊಬೈಲ್ ಖರೀದಿಸಿ ಕೊಡಬಹುದಾಗಿದೆ.











Click it and Unblock the Notifications