ಭಾರತೀಯ ಮಾರುಕಟ್ಟೆಗೆ 10 ವರ್ಷ ಪೂರೈಸಿದ Xiaomi; ಹೊಸ ಉತ್ಪನಗಳು ಬಿಡುಗಡೆ
ಭಾರತದ ಮೊಬೈಲ್ ಮಾರುಕಟ್ಟೆ ಈಗ ದೊಡ್ಡದಾಗಿದೆ. 10 ವರ್ಷಗಳ ಹಿಂದೆ ಈ ಮಾರುಕಟ್ಟೆ ಇಷ್ಟೊಂದು ದೊಡ್ಡದಾಗಿರಲಿಲ್ಲ. ಆಗಲೇ ಭಾರತದ ಮಾರುಕಟ್ಟೆಗೆ Xiaomi ಪದಾರ್ಪಣೆ ಮಾಡಿತು. ಈಗ ಚೀನಾ ಮೂಲದ ಈ ಕಂಪನಿ ಭಾರತಕ್ಕೆ ಬಂದು 10 ವರ್ಷಗಳು ಸಂದಿವೆ. ಈ ಹಿನ್ನೆಲ್ಲೆಯ ಜಿಯೋಮಿ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಕಂಪನಿಯ ಉತ್ಪನಗಳ ಬೇಡಿಕೆ ಕಾಯ್ದುಕೊಂಡಿದ್ದರಿಂದ ದಶಕದ ನಗೆ ಬೀರಿದೆ.
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿರುವ ಜಿಯೋಮಿ ಕಂಪನಿ, 10 ವರ್ಷಗಳ ಹಿಂದೆ ಗ್ರಾಹಕರಿಗಾಗಿ ಹುಡಕಾಟ ನಡೆಸಿತ್ತು. ಆದರೆ ಈಗ ಗ್ರಾಹಕ ಈ ಕಂಪನಿಯ ಮೊಬೈಲ್‌ಗಾಗಿ ಕಾಯುವಂತಹ ಪರಿಸ್ಥಿತಿ ಬಂದೊಗಿದೆ. Xiaomi ತನ್ನ ಅಭಿಮಾನಿಗಳಿಗೆ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಇಯರ್‌ಬಡ್ಸ್, ರೋಬೋಟ್ ವ್ಯಾಕ್ಯೂಮ್ ಮತ್ತು ಇನ್ನೂ ಅನೇಕ ಉತ್ಪನ್ನಗಳನ್ನು ಒದಗಿಸುತ್ತದೆ. Xiaomi ಯಾವಾಗಲೂ ಕಡಿಮೆ ಬೆಲೆಯಲ್ಲಿ ಬಳಕೆದಾರರಿಗೆ ಉತ್ತಮ ವೈಶಿಷ್ಟ್ಯಗಳೊಂದಿಗೆ ಗ್ಯಾಜೆಟ್‌ಗಳನ್ನು ಒದಗಿಸುತ್ತದೆ.

ಪವರ್ ಬ್ಯಾಂಕ್
Xiaomi ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೊಸ ಪವರ್ ಬ್ಯಾಂಕ್‌ಗಳನ್ನು ಲಾಂಚ್ ಮಾಡಿದೆ. Xiaomi ಯ ಮೊದಲ ಪವರ್ ಬ್ಯಾಂಕ್ Xiaomi ಪಾಕೆಟ್ ಪವರ್ ಬ್ಯಾಂಕ್ ಆಗಿದೆ. ಇದರಲ್ಲಿ Xiaomi 10,000mAh ನ ದೊಡ್ಡ ಬ್ಯಾಟರಿಯನ್ನು ನೀಡಿದ್ದು, ಇದರ ಬೆಲೆ 1,699 ರೂ. . ಎರಡನೇ ಪವರ್ ಬ್ಯಾಂಕ್‌ನ ಹೆಸರು Xiaomi ಪವರ್ ಬ್ಯಾಂಕ್ 4i. ಇದರಲ್ಲಿ ಕಂಪನಿಯು 10000mAh ಬ್ಯಾಟರಿಯನ್ನು ನೀಡಿದೆ. ಈ ಪವರ್ ಬ್ಯಾಂಕ್ ಅನ್ನು ಲಿಥಿಯಂ ಐಯಾನ್ ಬ್ಯಾಟರಿಯೊಂದಿಗೆ ನೀಡಲಾಗಿದ್ದು, ಇದರ ಬೆಲೆ 1299 ರೂ. ಆಗಿದೆ.

Redmi Buds 5C
ಸಂಗೀತ ಪ್ರಿಯರಿಗೆ Redmi Buds 5C ಗ್ರಾಹಕರನ್ನು ಸೆಳೆಯುತ್ತದೆ. ಈ ರೆಡ್‌ಮಿ ಬಡ್ಸ್‌ನ್ನು ನೀವು 1999 ರೂ. ಖರೀದಿಸಿಬಹುದು. ಈ ಇಯರ್‌ಬಡ್‌ಗಳಲ್ಲಿ 12.4mm ಡೈನಾಮಿಕ್ ಟೈಟಾನಿಯಂ ಡ್ರೈವರ್ ಅನ್ನು ಬಳಸಿದೆ. ಈ ಸಾಧನವು ಬ್ಲೂಟೂತ್ 5.3 ಅನ್ನು ಬೆಂಬಲಿಸುತ್ತದೆ.

ರೆಡ್‌ಮಿ 13
ರೆಡ್‌ಮಿ ಕಂಪನಿಯ 13 5ಜಿಯನ್ನು ಕಂಪನಿಯನ್ನು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಸ್ನ್ಯಾಪ್‌ಡ್ರ್ಯಾಗನ್ 4 Gen 2 AE ಪ್ರೊಸೆಸರ್ ಹೊಂದಿದ್ದು, 6.79 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದೆ. ಈ ಮೊಬೈಲ್‌ನಲ್ಲಿ 5030mAh ಬ್ಯಾಟರಿ ಹಾಗೂ 33 ವ್ಯಾಟ್ ಚಾರ್ಜರ್ ಸಿಗಲಿದೆ. ಈ ಮೊಬೈಲ್ ಬೆಲೆ 12,999 ರೂಪಾಯಿಗೆ ಬಿಡುಗಡೆ ಮಾಡಿದೆ.
ದಶಕ ಪೂರೈಸಿದ ಸಂದರ್ಭದಲ್ಲಿ, Xiaomi ರೋಬೋಟ್ ವ್ಯಾಕ್ಯೂಮ್ ಕ್ಲೀನರ್ X10 ಅನ್ನು ಸಹ ಬಿಡುಗಡೆ ಮಾಡಿದೆ. ಈ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಸಾಕಷ್ಟು ಮುಂದುವರಿದಿದೆ. ಇದು LDS ಲೇಸರ್ ನ್ಯಾವಿಗೇಷನ್ ವೈಶಿಷ್ಟ್ಯವನ್ನು ಹೊಂದಿದೆ. ಜಿಯೋಮಿ ಇದರಲ್ಲಿ 5200mAh ನ ದೊಡ್ಡ ಬ್ಯಾಟರಿಯನ್ನು ನೀಡಿದೆ. ಈ ಸಾಧನದ ಬೆಲೆ 29,999 ರೂಪಾಯಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.












Click it and Unblock the Notifications