ಕೊರೊನಾ ವೈರಸ್ ಹುಟ್ಟು ಮತ್ತು ಸಾವಿನ ಸರಣಿ ಸುತ್ತ ಒಂದು ವರದಿ

ಬೀಜಿಂಗ್, ಫೆಬ್ರವರಿ.02: ಕೊರೊನಾ ವೈರಸ್.. ಚೀನಾದಲ್ಲಿ ಹುಟ್ಟಿಕೊಂಡ ಈ ಮಾರಕ ವೈರಸ್ ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಸೇರಿದಂತೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಶನಿವಾರದ ಅಂಕಿ-ಅಂಶಗಳ ಪ್ರಕಾರ ಚೀನಾ ದೇಶ ಒಂದರಲ್ಲೇ ಕೊರೊನಾ ವೈರಸ್ ಗೆ 304 ಜನರು ಪ್ರಾಣ ಬಿಟ್ಟಿದ್ದಾರೆ. 14 ಸಾವಿರ ಜನರಿಗೆ ಸೋಂಕು ತಗುಲಿದ್ದು, 1 ಕೋಟಿ 10 ಲಕ್ಷ ಜನರಲ್ಲಿ ವೈರಸ್ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ವೈರಸ್ ಹುಟ್ಟಿಕೊಂಡಿದ್ದು ಹೇಗೆ, ಕೊರೊನಾ ವೈರಸ್ ಎಂದರೆ ಏನು, ಈ ರೋಗದ ಲಕ್ಷಣಗಳು ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿದೆ. ಅದೆಲ್ಲಕ್ಕೂ ಮೊದಲು ಕೊರೊನಾ ವೈರಸ್ ಹುಟ್ಟಿಕೊಂಡ ದಿನದಿಂದ ಈವರೆಗೆ ಎಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡೋಣ.

ಕೊರೊನಾ ವೈರಸ್ ಪತ್ತೆಯಾಗಿದ್ದೇ ಇಲ್ಲಿ

ಕೊರೊನಾ ವೈರಸ್ ಪತ್ತೆಯಾಗಿದ್ದೇ ಇಲ್ಲಿ

ಜನವರಿ.01: ವಿಶ್ವವೇ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಇದ್ದರೆ ಅಂದೇ ಹುಟ್ಟಿಕೊಂಡಿದ್ದು, ಈ ಮಾರಕ ಕೊರೊನಾ ವೈರಸ್. ಚೀನಾದ ಹ್ಯೂನಾನ್ ಸೀಫುಡ್ ಹೋಲ್ ಸೇಲ್ ಮಾರ್ಕೇಟ್ ನಲ್ಲಿ ಹಲವರಿಗೆ ಈ ವೈರಸ್ ಹರಡಿತು ಎಂದು ಹೇಳಲಾಗುತ್ತಿದೆ. 40 ಜನರಲ್ಲಿ ಒಂದೇ ರೀತಿಯ ಅನಾರೋಗ್ಯ ಕಾಣಿಸಿಕೊಂಡ ನಂತರ ತಜ್ಞವೈದ್ಯರು ಶಂಕಿತ ವೈರಸ್ ಬಗ್ಗೆ ಪತ್ತೆ ಹಚ್ಚಿದ್ದು, ಎಚ್ಚರಿಕೆ ನೀಡಿದ್ದಾರೆ.

ಜನವರಿ.05: ಅನಾರೋಗ್ಯಕ್ಕೆ ತುತ್ತಾದ ರೋಗಿಗಳನ್ನು ಪರೀಕ್ಷಿಸಿದಾಗ ಅವರಲ್ಲಿ ಶಂಕಿತ ಸೆವರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್(SARS) ವೈರಸ್ ಪತ್ತೆಯಾಯಿತು. ಕಳೆದ 2002-2003ರಲ್ಲಿ ಇದೇ ಉಸಿರಾಟ ಸಂಬಂಧ ವೈರಸ್ ಗೆ ಚೀನಾದಲ್ಲಿ 770ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದರು ಎನ್ನಲಾಗಿದೆ.

ಜನವರಿ.07: ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಚೀನಾದಲ್ಲಿ ಹೊಸದಾದ ಮಾರಕ ವೈರಸ್ ಪತ್ತೆಯಾಗಿರುವ ಬಗ್ಗೆ ಸ್ಪಷ್ಟವಾಗುತ್ತದೆ. SARS ಲಕ್ಷಣಗಳನ್ನೇ ಹೊಂದಿರುವ ಕೊರೊನಾ ವೈರಸ್ ಪತ್ತೆಯಾಗಿರುವ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ.

ಮಾರಕ ಕೊರೊನಾ ವೈರಸ್ ಹೇಗೆ ಹರಡುತ್ತದೆ?

ಮಾರಕ ಕೊರೊನಾ ವೈರಸ್ ಹೇಗೆ ಹರಡುತ್ತದೆ?

ಚೀನಾದಲ್ಲಿ ಪತ್ತೆಯಾದ ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕು ಆಗಿದೆ. SARS ಲಕ್ಷಣಗಳನ್ನೇ ಹೊಂದಿರುವ ಕೊರೊನಾ ವೈರಸ್ ಕೆಮ್ಮು, ಸೀನು ಹಾಗೂ ಕೈ ಕುಲುಕುವುದರಿಂದಲೂ ಬರುತ್ತದೆ ಎಂದು ತಜ್ಞವೈದ್ಯರು ತಿಳಿಸುತ್ತಾರೆ. ಇನ್ನು, ಸೋಂಕು ಪತ್ತೆಯಾದವರಿಗೆ ಉಸಿರಾಟ ತೊಂದರೆ, ಶೀತ, ಕಫ ಗಟ್ಟುವ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಜನವರಿ.11: ಚೀನಾದಲ್ಲಿ ಕೊರೊನಾ ವೈರಸ್ ಗೆ ಮೊದಲ ಬಾರಿಗೆ 61 ವರ್ಷದ ವ್ಯಕ್ತಿಯೊಬ್ಬ ಬಲಿಯಾಗಿರುವುದಾಗಿ ಸರ್ಕಾರ ಘೋಷಿಸುತ್ತದೆ. ಈ ವ್ಯಕ್ತಿಯು ಚೀನಾದ ಹ್ಯೂನಾನ್ ಸೀಫುಡ್ ಹೋಲ್ ಸೇಲ್ ಮಾರ್ಕೇಟ್ ನಿಂದ ಸರಕುಗಳನ್ನು ಖರೀದಿಸಿದ್ದನು. ಸೋಂಕಿನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಆರೋಗ್ಯದಲ್ಲಿ ಯಾವುದೇ ರೀತಿ ಚೇತರಿಕೆ ಕಂಡು ಬರಲಿಲ್ಲ. ಹೀಗಾಗಿ ಜನವರಿ.09ರಂದೇ ವ್ಯಕ್ತಿಯು ಪ್ರಾಣ ಬಿಟ್ಟಿದ್ದಾನೆ ಎಂದು ಚೀನಾ ಸರ್ಕಾರವು ಘೋಷಿಸಿತು.

ಥೈಲ್ಯಾಂಡ್, ಜಪಾನ್ ನಲ್ಲೂ ಕೊರೊನಾ ವೈರಸ್

ಥೈಲ್ಯಾಂಡ್, ಜಪಾನ್ ನಲ್ಲೂ ಕೊರೊನಾ ವೈರಸ್

ಜನವರಿ.13: ಚೀನಾ ಅಷ್ಟೇ ಅಲ್ಲದೇ ಹೊರದೇಶದಲ್ಲಿ ಮಾರಕ ಕೊರೊನಾ ವೈರಸ್ ಪತ್ತೆಯಾಯಿತು. ಚೀನಾದ ವುಹಾನ್ ನಗರದಿಂದ ಥೈಲ್ಯಾಂಡ್ ಗೆ ತೆರಳಿದ್ದ ಮಹಿಳೆಯಲ್ಲಿ ಶಂಕಿತ ಸೋಂಕು ಪತ್ತೆಯಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಜನವರಿ.16: ವುಹಾನ್ ನಗರಕ್ಕೆ ಭೇಟಿ ನೀಡಿದ ಜಪಾನ್ ಮೂಲದ ವ್ಯಕ್ತಿಯಲ್ಲೂ ಕೊರೊನಾ ವೈರಸ್ ಪತ್ತೆಯಾಗಿರುವ ಬಗ್ಗೆ ಜಪಾನ್ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿತು.

ಚೀನಾದಲ್ಲಿ ಸಾವಿನ ಸರಣಿ ಮುಂದುವರಿಕೆ

ಚೀನಾದಲ್ಲಿ ಸಾವಿನ ಸರಣಿ ಮುಂದುವರಿಕೆ

ಜನವರಿ.17: ಚೀನಾದ ವುಹಾನ್ ನಗರದಲ್ಲಿ ಮಾರಕ ಕೊರೊನಾ ವೈರಸ್ ಗೆ ಎರಡನೇ ಸಾವಿನ ಬಗ್ಗೆ ವರದಿಯಾಯಿತು. ವುಹಾನ್ ನಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಅಮೆರಿಕಾದ ಮೂರು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೊಳಪಡಿಸುವಂತೆ ಅಮೆರಿಕಾದ ಆರೋಗ್ಯ ಪ್ರಾಧಿಕಾರ ಘೋಷಿಸಿತು. ಇದರ ಬೆನ್ನಲ್ಲೇ ಅಮೆರಿಕಾ, ನೇಪಾಳ, ಫ್ರಾನ್ಸ್, ಆಸ್ಟ್ರೇಲಿಯಾ, ಮಲೇಶಿಯಾ, ಸಿಂಗಾಪುರ್, ದಕ್ಷಿಣ ಕೊರಿಯಾ, ವಿಯಟ್ನಾ ಮತ್ತು ತೈವಾನ್ ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಯಿತು.

ಜನವರಿ.20: ಚೀನಾದಲ್ಲಿ ಕೊರೊನಾ ವೈರಸ್ ಗೆ ಮೂರನೇ ವ್ಯಕ್ತಿ ಬಲಿಯಾಗಿದ್ದು, 200ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಯಿತು. ಚೀನಾ ರಾಜಧಾನಿ ಬೀಜಿಂಗ್, ಶಾಂಘೈ, ಶೇಂಜೇನ್ ನಗರಗಳಲ್ಲೂ ಸೋಂಕು ಪತ್ತೆಯಾಯಿತು.

ಜನರಿಂದ ಜನರಿಗೆ ಮಾರಕ ರೋಗ ಹರಡುತ್ತಿರುವ ಬಗ್ಗೆ ಚೀನಾದ ತಜ್ಞವೈದ್ಯರು ಸ್ಪಷ್ಟಪಡಿಸಿದ್ದು, ಚೀನಾದ ಪ್ರತಿಷ್ಠಿತ ಏರ್ ಪೋರ್ಟ್ ಗಳಲ್ಲಿ ವೈದ್ಯಕೀಯ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಯಿತು. ಎಲ್ಲ ಪ್ರಯಾಣಿಕರನ್ನು ಈ ಕೇಂದ್ರಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ವ್ಯವಸ್ಥೆ ಕಲ್ಪಿಸಲಾಯಿತು.

ಕೊರೊನಾ ವೈರಸ್ ಗೆ 17 ಮಂದಿ ಸಾವು

ಕೊರೊನಾ ವೈರಸ್ ಗೆ 17 ಮಂದಿ ಸಾವು

ಜನವರಿ.22: ಚೀನಾದಲ್ಲಿ ಕೊರೊನಾ ವೈರಸ್ ನಿಂದ ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆಯಾಯಿತು. ದೇಶದಲ್ಲಿ 17 ಮಂದಿ ಮಾರಕ ರೋಗಕ್ಕೆ ಮೃತಪಟ್ಟಿದ್ದು, 550ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಯಿತು. ಯುರೋಪಿಯನ್ ಭಾಗದ ಬಹುತೇಕ ರಾಷ್ಟ್ರಗಳಲ್ಲಿ ವುಹಾನ್ ನಗರದಿಂದ ಆಗಮಿಸುವ ಎಲ್ಲ ವಿಮಾನಗಳನ್ನು ಮತ್ತು ಪ್ರಯಾಣಿಕರನ್ನು ಪರಿಶೀಲನೆ ನಡೆಸಲು ಆರಂಭಿಸಲಾಯಿತು.

ಜನವರಿ.23: ಚೀನಾದ ವುಹಾನ್ ನಿಂದ ವಿಮಾನ ಮತ್ತು ರೈಲ್ವೆ ಸಂಚಾರವನ್ನು ತಡೆ ಹಿಡಿಯಲಾಯಿತು. ಇದರ ಜೊತೆಗೆ ಚೀನಾದ ಮತ್ತೆರೆಡು ನಗರಗಳಾದ ಕ್ಸಿಯಾಂಟೋ ಮತ್ತು ಚಿಬೆಯಿಂದ ಸಂಚರಿಸುವ ವಿಮಾನ ಮತ್ತು ರೈಲ್ವೆ ಸಂಚಾರಕ್ಕೆ ಬ್ರೇಕ್ ಹಾಕಲಾಯಿತು. ಹ್ಯೂಬೈ ನಗರದಿಂದ ಹೊರ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜನವರಿ.23ರಂದು ಬೀಜಿಂಗ್ ನಲ್ಲಿ ನಡೆಯಬೇಕಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

ಕೊರೊನಾ ವೈರಸ್ ಗೆ 26 ಮಂದಿ ಬಲಿ

ಕೊರೊನಾ ವೈರಸ್ ಗೆ 26 ಮಂದಿ ಬಲಿ

ಜನವರಿ.24: ಕೊನೊರಾ ವೈರಸ್ ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 26ಕ್ಕೆ ಏರಿಕೆಯಾಯಿತು. 830ಕ್ಕೂ ಹೆಚ್ಚು ಜನರಲ್ಲಿ ಶಂಕಿತ ವೈರಸ್ ಪತ್ತೆಯಾಗಿರುವ ಬಗ್ಗೆ ಸರ್ಕಾರವೇ ಸ್ಪಷ್ಟಪಡಿಸಿತು. ಹ್ಯೂಬೈ ನಗರದಲ್ಲೇ 13 ಮಂದಿ ಪ್ರಾಣ ಬಿಟ್ಟಿದ್ದು, 4 ಲಕ್ಷ ಜನರಲ್ಲಿ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿತ್ತು. ಶಾಂಘೈ ನಗರದ ಡಿಸ್ನೈ ಲ್ಯಾಂಡ್ ನ್ನು ಬಂದ್ ಮಾಡಲಾಗಿತು. ಇದರ ಜೊತೆಗೆ ಚೀನಾದಲ್ಲಿ ಆಯೋಜಿಸಿದ್ದ ಮನರಂಜನಾ ಶಿಬಿರ ಮತ್ತು ಕೇಂದ್ರಗಳನ್ನೆಲ್ಲ ಬಂದ್ ಮಾಡಲಾಯಿತು.

5 ನಗರಗಳಿಗೆ ಸಂಚಾರ ನಿರ್ಬಂಧಿಸಿದ ಚೀನಾ

5 ನಗರಗಳಿಗೆ ಸಂಚಾರ ನಿರ್ಬಂಧಿಸಿದ ಚೀನಾ

ಜನವರಿ.25: ಚೀನಾದ ಹ್ಯೂಬೈ ವ್ಯಾಪ್ತಿಯ ಐದು ನಗರಗಳಿಗೆ ಸಂಚಾರ ನಿರ್ಬಂಧಿಸಲಾಯಿತು. ಹಾಂಗ್ ಕಾಂಗ್ ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದು, ಚೀನಾದಲ್ಲಿ ನಡೆಯುವ ಹೊಸ ವರ್ಷಾಚರಣೆಗೆ ತೆರಳದಂತೆ ಪ್ರಜೆಗಳಿಗೆ ಸೂಚನೆ ನೀಡಲಾಯಿತು.

ಕೊರೊನಾ ವೈರಸ್ ಗೆ 56 ಮಂದಿ ಬಲಿ

ಕೊರೊನಾ ವೈರಸ್ ಗೆ 56 ಮಂದಿ ಬಲಿ

ಜನವರಿ.26: ಕೊರೊನಾ ವೈರಸ್ ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 56ಕ್ಕೆ ಏರಿಕೆ ಆಯಿತು. 2 ಸಾವಿರ ಜನರಿಗೆ ಕೊರಾನಾ ವೈರಸ್ ಪತ್ತೆಯಾಗಿರುವ ಬಗ್ಗೆ ಸ್ಪಷ್ಟವಾಯಿತು. ಹಾಂಗ್ ಕಾಂಗ್ ನಲ್ಲೂ ಮನರಂಜನಾ ಶಿಬಿರಗಳನ್ನು ಬಂದ್ ಮಾಡಲಾಗಿತು. ಡಿಸ್ನೈ ಲ್ಯಾಂಡ್ ಮತ್ತು ಓಶಿಯನ್ ಪಾರ್ಕ್ ಗಳಿಗೆ ಬೀಗ ಜಡಿಯಲಾಯಿತು. ಚೀನಾ ಅಷ್ಟಲ್ಲದೇ ಅಮೆರಿಕಾ, ತೈವಾನ್, ಥೈಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಮಾರಕ ವೈರಸ್ ಪತ್ತೆಯಾಯಿತು.

ಚೀನಾದಲ್ಲಿ ಕೊರೊನಾ ವೈರಸ್ ಗೆ 106 ಬಲಿ

ಚೀನಾದಲ್ಲಿ ಕೊರೊನಾ ವೈರಸ್ ಗೆ 106 ಬಲಿ

ಜನವರಿ.27: ಚೀನಾದ ಹ್ಯೂಬೈ ವ್ಯಾಪ್ತಿಯಲ್ಲೇ ಕೊರೊನಾ ವೈರಸ್ ಗೆ 101 ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿತು. ದೇಶದಲ್ಲಿ ಈವರೆಗೆ 106 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದು, 4,515 ಜನರಲ್ಲಿ ಸೋಂಕು ತಗಲಿದ್ದು, ಹ್ಯೂಬೈ ವ್ಯಾಪ್ತಿಯಲ್ಲೇ 2,714 ಪ್ರಕರಣಗಳು ಪತ್ತೆಯಾದವು.

ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಜನವರಿ.30: ಕೊರೊನಾ ವೈರಸ್ ಸಾವಿನ ಸರಣಿ ಬಗ್ಗೆ ಎಚ್ಚೆತ್ತುಕೊಂಡ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಚೀನಾದಲ್ಲಿ ಇಷ್ಟೊತ್ತಿಗೆ 170 ಮಂದಿ ಮಾರಕ ವೈರಸ್ ಗೆ ಪ್ರಾಣ ಬಿಟ್ಟಿದ್ದು, 7,711 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಅಲ್ಲದೇ, ದೇಶದ 31 ಪ್ರದೇಶಗಳಲ್ಲಿ ಕೊರೊನಾ ವೈರಸ್ ಹರಡಿರುವ ಬಗ್ಗೆ ಸ್ಪಷ್ಟವಾಗಿತ್ತು.

ಕೇರಳದಲ್ಲಿ ಮೊದಲ ಪ್ರಕರಣ ಪತ್ತೆ ಬಗ್ಗೆ ವರದಿ

ಕೇರಳದಲ್ಲಿ ಮೊದಲ ಪ್ರಕರಣ ಪತ್ತೆ ಬಗ್ಗೆ ವರದಿ

ಜನವರಿ.30: ಚೀನಾದಲ್ಲಿ ಮರಣ ಮೃದಂಗ ಬಾರಿಸಿದ ಮಾರಕ ರೋಗ ಕೊರೊನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿತು. ಕೇರಳದಲ್ಲಿ ಮೊದಲ ವ್ಯಕ್ತಿಗೆ ಕೊರೊನಾ ವೈರಸ್ ಪತ್ತೆಯಾಗಿರುವ ಬಗ್ಗೆ ವರದಿಯಾಯಿತು. ಇದೇ ದಿನ ಫಿಲಿಫೈನ್ಸ್ ನಲ್ಲೂ ಒಬ್ಬ ವ್ಯಕ್ತಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಯಿತು.

ಜನವರಿ.31: ಚೀನಾದಲ್ಲಿ ಕೊರೊನಾ ವೈರಸ್ 9,809 ಜನರಲ್ಲಿ ಪತ್ತೆಯಾಗಿರುವ ಬಗ್ಗೆ ಸ್ಪಷ್ಟವಾಯಿತು. ಇದರ ಜೊತೆಗೆ ರಷ್ಯಾ, ಸ್ಪೇನ್, ಸ್ವೀಡನ್, ಮತ್ತು ಇಂಗ್ಲೆಂಡ್ ನಲ್ಲೂ ಒಂದೊಂದು ಪ್ರಕರಣಗಳು ಪತ್ತೆಯಾದವು.

ಚೀನಾದಲ್ಲಿ 300 ಗಡಿ ದಾಟಿದ ಸಾವಿಂನ ಸಂಖ್ಯೆ

ಚೀನಾದಲ್ಲಿ 300 ಗಡಿ ದಾಟಿದ ಸಾವಿಂನ ಸಂಖ್ಯೆ

ಫೆಬ್ರವರಿ.01: ಚೀನಾದಲ್ಲಿ 259 ಮಂದಿ ಕೊರೊನಾ ವೈರಸ್ ಗೆ ಪ್ರಾಣ ಬಿಟ್ಟಿದ್ದು, 11,791 ಜನರಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಯಿತು. ಚೀನಾ ಆರೋಗ್ಯ ಪ್ರಾಧಿಕಾರವೇ ಈ ಅಂಕಿ-ಅಂಶವನ್ನು ಬಿಡುಗಡೆಗೊಳಿಸಿತು. ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಸಿಂಗಾಪುರ್, ಅಮೆರಿಕಾ, ವಿಯಟ್ನಾ ಮತ್ತು ಅರಬ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹರಡಿರುವ ಬಗ್ಗೆ ವರದಿ ಸ್ಪಷ್ಟವಾಯಿತು.

ಫೆಬ್ರವರಿ.02: ಇನ್ನು, ಬಾನುವಾರದ ಅಂಕಿ-ಅಂಶಗಳ ಪ್ರಕಾರ 304 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದು, ಹೊಸದಾಗಿ 2,590 ಜನರಲ್ಲಿ ಸೋಂಕು ತಗಲಿರುವ ಬಗ್ಗೆ ವರದಿಯಾಯಿತು. ಆ ಮೂಲಕ ಚೀನಾದಲ್ಲಿ 14,380 ಪ್ರಕರಣಗಳು ದಾಖಲಾದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+