ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಮುಟ್ಟಿನ ನೈರ್ಮಲ್ಯ ದಿನ 2022: ಥೀಮ್, ಇತಿಹಾಸ ಮತ್ತು ಮಹತ್ವ

|
Google Oneindia Kannada News

ವಿಶ್ವ ಮುಟ್ಟಿನ ನೈರ್ಮಲ್ಯ ದಿನ 2022: ಇಂದು ಮೇ 28, ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಋತುಚಕ್ರ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಈ ಮುಟ್ಟಿನ ಅವಧಿಯಲ್ಲಿ ಅನೇಕ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು, ಸ್ವಚ್ಛ ಶೌಚಾಲಯಗಳು ಅಥವಾ ಬಳಸಿದ ಬಟ್ಟೆಯನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ತಿಳಿದಿರುವುದಿಲ್ಲ. ಇದು ಮೂತ್ರದ ಸೋಂಕಿಗೆ ಕಾರಣವಾಗುವುದಲ್ಲದೆ, ಬಂಜೆತನಕ್ಕೆ ಕಾರಣವಾಗಬಹುದು.

ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಲು, ಹೆಣ್ಣುಮಕ್ಕಳಿಗೆ ಸುರಕ್ಷಿತ ಮತ್ತು ನೈರ್ಮಲ್ಯದ ಅಭ್ಯಾಸಗಳನ್ನು ಒದಗಿಸಲು ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ಮೇ 28 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. UNFPA ಪ್ರಕಾರ, ಮೇ 28 ವಿಶ್ವ ಸ್ತ್ರೀಯರ ಋತುಚಕ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಜರ್ಮನ್​ ಮೂಲದ ಎನ್​​ಜಿಒ ವಾಶ್​ ಯುನೈಟೆಡ್​ 2014ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನವನ್ನು ಆಚರಿಸಲು ಆರಂಭಿಸಿತು.

ಈ ಋತುಚಕ್ರದ ಅವಧಿ 28 ದಿನಗಳಿಗೊಮ್ಮೆ ಆರಂಭವಾಗಿ ಸರಾಸರಿ ಐದು ದಿನಗಳವರೆಗೆ ಇರುತ್ತದೆ. ಆದರೆ ಅದೆಷ್ಟೋ ಮಹಿಳೆಯರಿಗೆ ಈ ಅವಧಿಯಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸುವುದಿಲ್ಲ. ಮಾತ್ರವಲ್ಲದೇ ಈ ಬಗ್ಗೆ ಅವರಿಗೆ ಮಾಹಿತಿ ಕೂಡ ಇಲ್ಲ. ಗ್ರಾಮೀಣ ಭಾಗದ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಋತುಚಕ್ರ/ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕವಾಗಿ, ಪ್ರತಿದಿನ 800 ದಶಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಮುಟ್ಟಾಗುತ್ತಾರೆ.ಅದರಲ್ಲಿ ಸುಮಾರು 500 ದಶಲಕ್ಷದಷ್ಟು ಜನರು ಮುಟ್ಟಿನ ನೈರ್ಮಲ್ಯಕ್ಕೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವುದಿಲ್ಲ. ಅಲ್ಲದೆ, ಅವರಲ್ಲಿ ಹಲವರಿಗೆ ಮೂಲ ನೈರ್ಮಲ್ಯ ಮತ್ತು ನೈರ್ಮಲ್ಯ ಕ್ರಮಗಳ ಬಗ್ಗೆ ಸಹ ತಿಳಿದಿಲ್ಲ. ಹೀಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ.

World Menstrual Hygiene Day 2022: Theme, History, Significance and Quotes in Kannada

ಇಂದಿಗೂ ಅದೇಷ್ಟೋ ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಮನೆಯಿಂದ ಅಥವಾ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುತ್ತದೆ. ಈ ಅವಧಿ ಮುಗಿಯುವವರೆಗೂ ಅವರಿಗೆ ಯಾವುದೇ ವಸ್ತುಗಳನ್ನು ಮುಟ್ಟಲು ಅಥವಾ ಮನೆಯಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ. ಮಾತ್ರವಲ್ಲದೇ ಅದೆಷ್ಟೋ ಮಹಿಳೆಯರು ಈ ಅವಧಿಯ ಬಗ್ಗೆ ಹೇಳಿಕೊಳ್ಳಲೂ ಹಿಂಜರಿಯುತ್ತಾರೆ. ಮೂಢನಂಬಿಕೆಗಳಿಗೆ ಗುರಿಯಾಗಿ ಹಲವೆಡೆ ಈ ಸಮಯದಲ್ಲಿ ಮಹಿಳೆಯರನ್ನು ಹಲವಾರು ರೀತಿ ನಡೆಸಿಕೊಳ್ಳುವುದು ರೂಢಿಯಲ್ಲಿದೆ.

ಭಾರತದ ಸುಮಾರು 336 ಮಿಲಿಯನ್ ಮಹಿಳೆಯರಲ್ಲಿ, ಶೇಕಡಾ 36 ಅಂದರೆ, 121 ಮಿಲಿಯನ್ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ ಬಳಸುತ್ತಾರೆ ಎಂದು 2015-2016ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುತ್ತದೆ.

ವಿಶ್ವ ಮುಟ್ಟಿನ ನೈರ್ಮಲ್ಯ ದಿನ: ಥೀಮ್

ಈ ವರ್ಷ ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ವಿಷಯವು '2030 ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದು'. ಈ ಥೀಮ್ ನೊಂದಿಗೆ ಕೇವಲ ಈ ದಿನವನ್ನು ಆಚರಿಸುವುದಲ್ಲ, ಬದಲಿಗೆ 2030 ರ ವೇಳೆಗೆ ಸಾಧಿಸಬೇಕಾದ ಗುರಿಯಾಗಿದೆ. ಸುರಕ್ಷತಾ ಸಾಮಗ್ರಿಗಳು ಮತ್ತು ಮುಟ್ಟಿನ ಉತ್ಪನ್ನಗಳನ್ನು ಮಹಿಳೆಯರು ಸುಲಭವಾಗಿ ಬಳಸುವಂತಾಗಬೇಕು. ಮುಟ್ಟನ್ನು ಸಾಮಾನ್ಯ ವಿಷಯವನ್ನಾಗಿ ಮಾಡುವುದು, ಅದನ್ನು ಸಾಮಾನ್ಯ ಧ್ವನಿಯಲ್ಲಿ ಸಾರ್ವಜನಿಕವಾಗಿ ಚರ್ಚಿಸುವುದು ಈ ದಿನದ ಉದ್ದೇಶವಾಗಿದೆ.

World Menstrual Hygiene Day 2022: Theme, History, Significance and Quotes in Kannada

ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಅದ್ಭುತ ಉಲ್ಲೇಖಗಳನ್ನು ಹಂಚಿಕೊಳ್ಳಿ

"ಹುಟ್ಟಿನ ಬಗ್ಗೆ ಮಾತನಾಡುವುದು ಎಷ್ಟು ಸರಿಯೋ ಮುಟ್ಟಿನ ಬಗ್ಗೆ ಮಾತನಾಡುವುದು ಅಷ್ಟೇ ಸರಿ'' - ಸೈಬಿಲ್ ಶೆಫರ್ಡ್

'ಹೆಣ್ಣಿಗೆ ಪ್ರಾಯದಲ್ಲಿ ಗರ್ಭಾಶಯದಿಂದ ಆಗುವ ರಕ್ತಸ್ರಾವವೇ ಮುಟ್ಟು. ಇದೊಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಗುಟ್ಟಾಗಿಡುವ ಅವಶ್ಯಕತೆ ಇಲ್ಲ'- ಜೂಡಿ ಗ್ರಾಹ್ನ್

"ನನಗೆ ಕೇಳಿದ ಅತ್ಯಂತ ಕಠಿಣ ಪ್ರಶ್ನೆಯೆಂದರೆ, 'ನಿಮಗೆ ಮುಟ್ಟಿನ ಸೆಳೆತ ಇದ್ದರೆ ನೀವು ಸೈನ್ಯವನ್ನು ಹೇಗೆ ನಿರ್ವಹಿಸುತ್ತೀರಿ?' ಅಪರಾಧಿಗಳನ್ನು ಎದುರಿಸಲು ನನಗೆ ಧೈರ್ಯವಿದೆಯೇ ಎಂದು ಕೇಳಲಾಗಿದೆ. ಧೈರ್ಯವು ಲಿಂಗದ ವಿಷಯವಲ್ಲ ಎಂಬುದು ನನ್ನ ಉತ್ತರ. - ಜೋಸೆಫಿನಾ ವಾಜ್ಕ್ವೆಜ್ ಮೋಟಾ

"ಅರ್ಧದಷ್ಟು ಪ್ರಪಂಚ ಒಂದು ಸಮಯದಲ್ಲಿ ಮುಟ್ಟಾಗುತ್ತದೆ, ಆದರೆ ನೀವು ಅದನ್ನು ಎಂದಿಗೂ ತಿಳಿದಿರುವುದಿಲ್ಲ. ಇದು ವಿಚಿತ್ರವಲ್ಲವೇ? " - ಮಾರ್ಗರೇಟ್ ಚೋ

"ನಿಖರವಾಗಿ ಮುಟ್ಟು ಎಂದರೇನು? ಅದೆಷ್ಟೋ ಜನಕ್ಕೆ ಇದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದಿಲ್ಲ" - ಜಿ. ಸ್ಟಾನ್ಲಿ ಹಾಲ್

English summary
World Menstrual Hygiene Day 2022: Theme, History, Significance and Quotes in Kannada know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X