World Dosa Day: ದೋಸೆಗೊಂದು ದಿನವಿದೆ.. ಒಂದು ವರ್ಷದಲ್ಲಿ ಸ್ವಿಗ್ಗಿಗೆ ಬಂದ ಆರ್ಡರ್ 29 ಮಿಲಿಯನ್!
ದೋಸೆ ಅನ್ನೋದು ಬರಿ ಒಂದು ತಿಂಡಿಯಲ್ಲ ದಕ್ಷಿಣ ಭಾರತೀಯರಿಗೆ ಒಂದು ಎಮೋಷನ್. ವಾರಕ್ಕೆ ಅದೆಷ್ಟೇ ಬಾರಿ ತಿಂಡಿಗೆ ದೋಸೆ ಮಾಡಿದರೂ ಇಷ್ಟಪಟ್ಟು ತಿನ್ನುವವರಿದ್ದಾರೆ. ಅದು ಕೇವಲ ಒಂದು ಉಪಹಾರ ಅಷ್ಟೇ ಅಲ್ಲ. ಮಧ್ಯಾಹ್ನದ ಊಟಕ್ಕೆ, ರಾತ್ರಿ ಡಿನ್ನರ್‌ಗೆ ಕೂಡ ಅನೇಕರು ದೋಸೆ ತಿನ್ನುತ್ತಾರೆ. ಇಂತಹ ನೆಚ್ಚಿನ ದೋಸೆಗೂ ಒಂದು ದಿನವಿದೆ.
ದಕ್ಷಿಣ ಭಾರತದಲ್ಲಿ ದೋಸೆಯನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ - ದೋಸೆ, ದೋಸೆ ದೋಸೈ, ಅಥವಾ ದೋಶ, ಡೋಸಾ ಹೀಗೆ. ಚಿಕ್ಕ ಮಕ್ಕಳಿಗೆ ಪ್ಯಾನ್ ಕೇಕ್ ಎಂದೂ ಸಿಹಿ ದೋಸೆಯನ್ನು ತಿನ್ನಿಸಲಾಗುತ್ತದೆ. ಕಾ ರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಸಮತೋಲನದಿಂದ ತುಂಬಿರುವ ಈ ತಿನಿಸು ಎಲ್ಲರ ಅಚ್ಚುಮೆಚ್ಚು.

ದೋಸೆಯ ಮೂಲ ನಮ್ಮ ಕರ್ನಾಟಕದ ಉಡುಪಿ ಎನ್ನಲಾಗುತ್ತದೆ. ಇಲ್ಲಿಂದಲೇ ದೋಸೆ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ದಂತಕಥೆಗಳ ಪ್ರಕಾರ ಅಕ್ಕಿಯೊಂದ ಮದ್ಯ ತಯಾರಿಸಲು ಪ್ರಯತ್ನಿಸಿದ ಅಡುಗೆಯವರೊಬ್ಬರು ಇದನ್ನು ಕಂಡು ಹಿಡಿದಿದ್ದಾರೆ. ಮದ್ಯ ತಯಾರಾಗದ ಕಾರಣ ಆ ಹಿಟ್ಟನ್ನು ಕಾವಲಿಗೆ ದುರಿದು ದೋಸೆ ಮಾಡಿದ್ದರು ಎಂಬ ನಂಬಿಕೆಯಿದೆ.
ದೋಸೆ ಮೇಲೆ ಭಾರತೀಯರ ಪ್ರೀತಿ
ಮನೆಯಲ್ಲಿ ಮಾಡಿದ ದೋಸೆ ಅಲ್ಲದೇ ಸ್ವಿಗ್ಗಿಯಿಂದ ಆರ್ಡರ್ ಮಾಡಿರುವ ದೋಸೆ ಲೆಕ್ಕ ನೋಡಿದರೇ ಭಾರತೀಯರಿಗೆ ದೋಸೆ ಮೇಲಿರುವ ಪ್ರೀತಿ ತಿಳಿಯುತ್ತದೆ. ಫೆಬ್ರವರಿ 2023 ರಿಂದ ಫೆಬ್ರವರಿ 2024 ರವರೆಗಿನ ಜನರು ಸ್ವಿಗ್ಗಿಯಲ್ಲಿ ಆರ್ಡರ್‌ಗಳ ಮಾಡಿರುವ ದೋಸೆಗಳು 29 ಮಿಲಿಯನ್. ಹೌದು... ಮನೆಯಲ್ಲದೇ ಭಾರತೀಯರು ಓಉಡ್ ಡೆಲಿವರ್ ಆಪ್ ಮೂಲಕ ಬರೋಬ್ಬರಿ 29 ಮಿಲಿಯನ್ ದೋಸೆಗಳನ್ನು ಆರ್ಡರ್ ಮಾಡಿದ್ದಾರೆ.
ಒಂದು ವರ್ಷದಲ್ಲಿ ಸ್ವಿಗ್ಗಿ 29 ಮಿಲಿಯನ್ ದೋಸೆಗಳನ್ನು ವಿತರಿಸಿದೆ. ಬೆಳಗಿನ ಉಪಾಹಾರದ ಸಮಯದಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿ 122 ದೋಸೆಗಳನ್ನು ಡೆಲಿವರಿ ಮಾಡಲಾಗಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾಗೆ ಹೋಲಿಸಿದರೆ ದೋಸೆಯ ರಾಜಧಾನಿ ಬೆಂಗಳೂರಿನಿಂದ ಎರಡು ಪಟ್ಟು ದೋಸೆಗಳನ್ನು ಆರ್ಡರ್ ತೆಗೆದುಕೊಂಡಿದೆ.
ವಿಶೆಷವೆಂದರೆ ಚಂಡೀಗಢವು ಮಸಾಲಾ ದೋಸೆಯನ್ನು ತನ್ನ ನೆಚ್ಚಿನ ತಿಂಡಿ ಮಾಡಿಕೊಂಡಿದೆ. ರಾಂಚಿ, ಕೊಯಮತ್ತೂರು, ಪುಣೆ ಮತ್ತು ಭೋಪಾಲ್‌ನಲ್ಲಿ ಹೆಚ್ಚು ಆರ್ಡರ್ ಮಾಡಿದ ತಿಂಡಿಗಳ ಪಟ್ಟಿಯಲ್ಲಿ ದೋಸೆ ಸೇರಿದೆ. ಕೊಯಮತ್ತೂರಿನ ಒಬ್ಬ ಬಳಕೆದಾರರು ಕಳೆದ ವರ್ಷದಲ್ಲಿ 447 ಪ್ಲೇಟ್ ದೋಸೆಗಳನ್ನು ಆರ್ಡರ್ ಮಾಡಿದ್ದಾರೆ.

ಸ್ವಿಗ್ಗಿ ಪ್ರಕಾರ, "ರಂಜಾನ್, ಕ್ರಿಕೆಟ್ ವಿಶ್ವಕಪ್ ಮತ್ತು ಐಪಿಎಲ್ ಸಮಯದಲ್ಲಿ ದೋಸೆ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ತಿಂಡಿಯಾಗಿದೆ. ನವರಾತ್ರಿ ಋತುವಿನಲ್ಲಿ ಆರ್ಡರ್ ಮಾಡಿದ ಟಾಪ್ ವೆಜ್ ಡಿಶ್‌ನಲ್ಲಿ ಸ್ವಿಗ್ಗಿ ಸ್ಥಾನ ಪಡೆದಿದೆ. ಇನ್ನು, ನಿರೀಕ್ಷಿಸಿದಂತೆ, ದೋಸೆ ಆರ್ಡರ್ ಮಾಡುವ ಪ್ರಮುಖ ಸಮಯವೆಂದರೆ ಬೆಳಗಿನ ಉಪಾಹಾರದ ಸಮಯದಲ್ಲಿ ಮತ್ತು ನಂತರ ರಾತ್ರಿಯ ಊಟಕ್ಕೆ.
ರಾತ್ರಿಯ ಊಟಕ್ಕೆ ದೋಸೆ ಆರ್ಡರ್ ಮಾಡುವ ಪ್ರಮುಖ ನಗರ ಚೆನ್ನೈ. ಉಪಹಾರದ ಸಮಯದಲ್ಲಿ ಹೆಚ್ಚು ದೋಸೆ ಆರ್ಡರ್ ಮಾಡಿರುವ ನಗರ ಹೈದರಾಬಾದ್ .
ಯಾವ ದೋಸೆಗೆ ಭಾರತೀಯರು ಫಿದಾ?
ಮಸಾಲಾ ದೋಸಾ ದೇಶದಲ್ಲಿ ಎಲ್ಲರ ಫೆವರಿಟ್ ದೋಸೆ. ಪ್ಲೈನ್ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ ಮತ್ತು ಬೆಣ್ಣೆ ಮಸಾಲಾ ದೋಸಾ ಸಹ ಹೆಚ್ಚು ಆರ್ಡರ್ ಮಾಡಲಾಗಿದೆ. ಚಾಕೊಲೇಟ್ ದೋಸೆ, ಪಾವ್ ಭಾಜಿ ದೋಸೆ, ನೂಡಲ್ಸ್ ದೋಸೆ, ಪಾಲಕ್ ದೋಸೆ, ಶೆಜ್ವಾನ್ ಚಾಪ್ ಸೂಯ್ ಸ್ಪೆಷಲ್ ದೋಸೆ, ದಿಲ್ಖುಷ್ ದೋಸೆ, ಲೇಸ್ ದೋಸೆ, ಅಮೇರಿಕನ್ ಚಾಪ್ ಸೂಯ್ ದೋಸೆ ಮತ್ತು ಪನೀರ್ ಜೊತೆಗಿನ ದೋಸೆಗಳು ಕೂಡ ಆರ್ಡರ್ ಮಾಡಲಾಗಿದೆ.












Click it and Unblock the Notifications