World Asthma Day 2022: ವಿಶ್ವ ಅಸ್ತಮಾ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಅಸ್ತಮಾದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 3 ರಂದು ಪ್ರಪಂಚದಾದ್ಯಂತ ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚಿನ ಕಲುಷಿತ ವಾತಾವರಣದಲ್ಲಿ ಹಲವಾರು ಮಂದಿಗೆ ಸಾಮಾನ್ಯ ಮತ್ತು ದೀರ್ಘಾವಧಿಯ ಖಾಯಿಲೆಯಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಅಸ್ತಮಾ ಕೂಡ ಒಂದು.

ಉಸಿರಾಟದ ಗಾಳಿಯಲ್ಲಿ ಮನುಷ್ಯನ ದೇಹ ಸೇರುವ ಅತ್ಯಂತ ಸಣ್ಣ ಕಣಗಳು ಶ್ವಾಸನಾಳದ ಒಳ ಪದರಗಳನ್ನು ಊದಿಕೊಳ್ಳುವಂತೆ ಮಾಡಿ ಮೂಗಿನಲ್ಲಿ ನೆಗಡಿ ಸೋರಿಕೆ ಆಗುವಂತೆ ಮಾಡುತ್ತವೆ. ಇದರಿಂದ ಉಸಿರಾಡಲು ತೊಂದರೆಯಾಗಿ ಕೆಮ್ಮು, ದಮ್ಮು ಸಾಮಾನ್ಯವಾಗಿ ಗೋಚರಿಸುತ್ತದೆ. ಕೆಲವರಿಗೆ ಇದು ಆರೋಗ್ಯದ ವಿಷಯದಲ್ಲಿ ಅಷ್ಟೇನೂ ಘಾಸಿ ಕೊಡದಿದ್ದರೂ ಇನ್ನೂ ಕೆಲವರಿಗೆ ಕೆಲವು ಅಸ್ತಮಾ ಪ್ರಕಾರಗಳು ತಮ್ಮ ಆರೋಗ್ಯದ ವಿಚಾರದಲ್ಲಿ ಯೋಚನೆ ಮಾಡುವಂತೆ ಮಾಡುತ್ತವೆ.

ಇದರ ಸಂಭವಿಸುವಿಕೆ ಕಾಲಾನಂತರದಲ್ಲಿ ಬದಲಾಗುತ್ತದೆ ಮತ್ತು ರಾತ್ರಿಯಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಅಸ್ತಮಾವನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ, ಅದನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ (WHO) 2021 ರ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 15 ರಿಂದ 20 ಮಿಲಿಯನ್ ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ, ಇದರಲ್ಲಿ ಪ್ರತಿ ವಯಸ್ಸಿನ ರೋಗಿಗಳೂ ಸೇರಿದ್ದಾರೆ.

World Asthma Day 2022: Date, history, significance and theme

ಇತಿಹಾಸ

1993 ರಲ್ಲಿ ಸ್ಥಾಪಿಸಲಾದ ವೈದ್ಯಕೀಯ ಮಾರ್ಗದರ್ಶಿ ಸಂಸ್ಥೆಯಾದ ಗ್ಲೋಬಲ್ ಇನಿಶಿಯೇಟಿವ್ ಫಾರ್ ವಿಶ್ವ ಅಸ್ತಮಾ ದಿನವನ್ನು ಆಚರಿಸಲು ಮೊದಲು ಪ್ರಾರಂಭಿಸಲಾಯಿತು. ಈ ಸಂಸ್ಥೆಯು ಆಸ್ತಮಾದ ಹರಡುವಿಕೆಯನ್ನು ಕಡಿಮೆ ಮಾಡಲು ವಿವಿಧ ಆರೋಗ್ಯ ವೃತ್ತಿಪರರೊಂದಿಗೆ ಕೆಲಸ ಮಾಡುತ್ತದೆ. ಸ್ಪೇನ್‌ನಲ್ಲಿ ನಡೆದ ವಿಶ್ವ ಅಸ್ತಮಾ ಸಭೆಯಲ್ಲಿ ಮೊದಲ ವಿಶ್ವ ಆಸ್ತಮಾ ದಿನ ಆಚರಿಸಲಾಯಿತು. ಬಳಿಕ ಇದು 35 ದೇಶಗಳಲ್ಲಿ ಆಚರಣೆ ಬಂದಿದೆ. ಅಂದಿನಿಂದ ಮೇ ತಿಂಗಳ ಮೊದಲ ಮಂಗಳವಾರದಂದು ಅಸ್ತಮಾ ದಿನವನ್ನು ಆಚರಿಸಲಾಗುತ್ತಿದೆ.

ಥೀಮ್

2022 ರ ವಿಶ್ವ ಆಸ್ತಮಾ ದಿನಕ್ಕಾಗಿ, ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ (GINA) 'ಆಸ್ತಮಾ ಆರೈಕೆಯಲ್ಲಿನ ಅಂತರವನ್ನು ಕಡಿಮೆ' ಅನ್ನು ಥೀಮ್ ಆಗಿ ಆಯ್ಕೆ ಮಾಡಿದೆ.

World Asthma Day 2022: Date, history, significance and theme

ಮಹತ್ವ

ವಿಶ್ವ ಆಸ್ತಮಾ ದಿನ ಆಸ್ತಮಾ ಆರೈಕೆಯಲ್ಲಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆಸ್ತಮಾ ರೋಗಿಗಳು ಎದುರಿಸುವ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗನಿರ್ಣಯ ಮತ್ತು ಚಿಕಿತ್ಸೆಗೆ (ಔಷಧಿ) ಸಮಾನ ಪ್ರವೇಶವನ್ನು ಪ್ರೋತ್ಸಾಹಿಸಲು ದಿನವನ್ನು ಮೀಸಲಿಡಲಾಗಿದೆ. ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ ಪ್ರಕಾರ, ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಆಸ್ತಮಾ ಆರೈಕೆ ಪರಿಹಾರಗಳನ್ನು ಕಾರ್ಯಗತಗೊಳಿಸಲು ಅಂತರರಾಷ್ಟ್ರೀಯ ಉಸಿರಾಟದ ಸಮುದಾಯಗಳು ರೋಗಿಗಳು ಮತ್ತು ಆರೋಗ್ಯ ರಕ್ಷಣೆ ನೀಡುಗರೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+