1..2..3.. ಹೆಂಡತಿಯರು ಎಷ್ಟೇ ಇದ್ದರೂ ಪ್ರತಿ ಮನೆಯಲ್ಲೂ ಫೋಟೋ ಕಡ್ಡಾಯ
ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ. ಗಂಡು-ಹೆಣ್ಣು ಪರಸ್ಪರ ಒಪ್ಪಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಹೀಗೆ ಮದುವೆಯಾದ ಶುಭ ಗಳಿಯನ್ನು ನೆನಪು ಮಾಡುವಂತ ಫೋಟೋಗಳನ್ನು ಮನೆಯ ಗೋಡೆಗೆ ಹಾಕುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತದೆ. ಮದುವೆಯ ಫೋಟೋ ಇಲ್ಲವಾದರೂ ಪತಿ-ಪತ್ನಿಯರು ತಾವು ಅನ್ಯೋನ್ಯವಾಗಿರುವ ಯಾವುದಾದರು ಒಂದೆರೆಡು ಫೋಟೋಗಳನ್ನು ಮನೆಯಲ್ಲಿ ಇಟ್ಟಿರುತ್ತಾರೆ. ಈ ಫೋಟೋಗಳನ್ನು ಹಾಕಲೇಬೇಕು ಎನ್ನುವ ಕಡ್ಡಾಯವಿಲ್ಲ. ಆದರೆ ಪ್ರತಿಯೊಬ್ಬರ ಮನೆಯಲ್ಲೂ ಹೆಂಡತಿ ಫೋಟೋ ಹಾಕುವುದು ಅವಶ್ಯಕವಾಗಿದೆ ಅಂದರೆ ಹೇಗಿರುತ್ತೆ? ಥಟ್ ಅಂತ ನೀವು ಯಾಕೆ ಅಂತ ಪ್ರಶ್ನೆ ಮಾಡಬಹುದು. ಇಂಥದೊಂದು ನಿಯಮವನ್ನು ಪಾಲಿಸುವ ಜಗತ್ತಿನಲ್ಲಿ ದೇಶವೊಂದಿದೆ.
ಈ ದೇಶದಲ್ಲಿ ಪ್ರತಿಯೊಂದು ಮನೆಯಲ್ಲಿ ಹೆಂಡತಿಯ ಫೋಟೋವನ್ನು ಹಾಕಲೇಬೇಕು. ಹೆಂಡತಿಯರ ಸಂಖ್ಯೆ ಎಷ್ಟೇ ಇರಲಿ ಅವರ ಫೋಟೋಗಳನ್ನು ಹಾಕುವುದನ್ನು ಪಾಲಿಸಲಾಗುತ್ತದೆ. ಬ್ರೂನಿ ಮುಸ್ಲಿಂ ದೇಶ. ಇಲ್ಲಿ ಪ್ರತಿಯೊಬ್ಬ ಪತಿಯೂ ತನ್ನ ಪತ್ನಿಯ ಚಿತ್ರವನ್ನು ಮನೆಯ ಗೋಡೆಯ ಮೇಲೆ ಹಾಕುತ್ತಾರೆ. ಆದರೆ ಫೋಟೋಗಳನ್ನು ಹಾಕಲೇಬೇಕು ಎನ್ನುವ ಬಗ್ಗೆ ಯಾವುದೇ ಕಾನೂನು ಇಲ್ಲ. ಇದರ ಹೊರತಾಗಿಯೂ, ಪ್ರತಿಯೊಬ್ಬ ಪತಿ ಇದನ್ನು ಪಾಲಿಸುತ್ತಾನೆ.
ಬ್ರೂನೈ ದೇಶದಲ್ಲಿ ಇಂದಿಗೂ ರಾಜಪ್ರಭುತ್ವ ನಡೆಯುತ್ತಿದೆ. ಇಲ್ಲಿ ಮಹಿಳೆಯರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವುಗಳಲ್ಲಿ ಒಂದು ಮತದಾನ. ಬ್ರೂನಿ ಒಮ್ಮೆ ಭಾರತದಂತೆಯೇ ಬ್ರಿಟಿಷರ ಕೈವಶದಲ್ಲಿತ್ತು. ಆದರೆ ಇದು 1 ಜನವರಿ 1984 ರಂದು ಸ್ವಾತಂತ್ರ್ಯ ಪಡೆಯಿತು. ಅಂದಿನಿಂದ ಸುಲ್ತಾನ ಈ ದೇಶವನ್ನು ನಡೆಸುತ್ತಾನೆ. ಆದಾಗ್ಯೂ, ಈ ದೇಶವು ಅದರ ಅನೇಕ ವಿಶಿಷ್ಟ ಪದ್ಧತಿಗಳಿಂದ ಚರ್ಚೆಯಲ್ಲಿ ಉಳಿದಿದೆ. ಇವುಗಳಲ್ಲಿ ಒಂದಾದ ಇಲ್ಲಿನವರು ತಮ್ಮ ಪತ್ನಿಯ ಚಿತ್ರವನ್ನು ಗೋಡೆಯ ಮೇಲೆ ಹಾಕಬೇಕು.

ಹೆಂಡತಿಯರ ಫೋಟೋ ಕಡ್ಡಾಯ
ಈ ದೇಶದ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು. ಈ ದೇಶದ ಸುಲ್ತಾನನೇ 6 ಮದುವೆ ಮಾಡಿಕೊಂಡಿದ್ದಾನೆ. ಆದರೆ ಯಾರಾದರೂ ಒಬ್ಬರಿಗಿಂತ ಹೆಚ್ಚು ಹೆಂಡತಿಯರನ್ನು ಹೊಂದಿದ್ದರೂ ಸಹ, ಮನೆಯ ಗೋಡೆಯ ಮೇಲೆ ಪ್ರತಿಯೊಬ್ಬರ ಚಿತ್ರವನ್ನು ಹಾಕುವುದು ಅವಶ್ಯಕ. ಪತ್ನಿಯ ಹೊರತಾಗಿ ದೇಶದ ಸುಲ್ತಾನನ ಫೋಟೋವನ್ನೂ ಗೋಡೆಗೆ ನೇತು ಹಾಕಲಾಗುತ್ತದೆ. ಇದರ ಹಿಂದೆ ಯಾವುದೇ ಕಾನೂನಿನ ಒತ್ತಾಯವಿಲ್ಲ. ಆದರೆ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಿಂದಾಗಿ ಇಂದಿಗೂ ಪ್ರತಿಯೊಬ್ಬರು ತಮ್ಮ ಪತ್ನಿಯ ಚಿತ್ರವನ್ನು ಗೋಡೆಗೆ ನೇತು ಹಾಕುತ್ತಾರೆ.
ಮನೆಗಳಿಗಿಂತ ಕಾರುಗಳು ಅಧಿಕ
ಬ್ರೂನೈನ ಸುಲ್ತಾನ ವಿಶ್ವದ ಶ್ರೀಮಂತ ರಾಜರಲ್ಲಿ ಒಬ್ಬರಾಗಿದ್ದಾರೆ. ಶತಕೋಟಿ ಕೋಟಿಗಳ ಒಡೆಯ ಇಲ್ಲಿನ ಸುಲ್ತಾನನಿಗೆ ಅಧಿಕ ಆಸ್ತಿ ಇರುತ್ತದೆ. ಅವರ ಬಳಿ ಸುಮಾರು ಏಳು ಸಾವಿರ ವಾಹನಗಳಿವೆ. ಬ್ರೂನಿ ಇನ್ನೊಂದು ಕಾರಣಕ್ಕಾಗಿ ಚರ್ಚೆಯಲ್ಲಿದೆ. ಈ ದೇಶದಲ್ಲಿ ಮನೆಗಳಿಗಿಂತ ಹೆಚ್ಚು ಕಾರುಗಳು ರಸ್ತೆಗಳಲ್ಲಿವೆ. ಜನರಿಗೆ ಸ್ವಂತ ಮನೆ ಇಲ್ಲದಿರಬಹುದು ಆದರೆ ಅವರ ಬಳಿ ಕಾರು ಇರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್‌ನ ಅಗ್ಗದ ಬೆಲೆಯಿಂದಾಗಿ ಜನರು ಇಲ್ಲಿ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ.












Click it and Unblock the Notifications