Bengaluru: ದುಡಿಯುವ ವರ್ಗಕ್ಕೆ ಬೆಂಗಳೂರು ಯಾಕೆ ಅಚ್ಚುಮೆಚ್ಚು? ದುಡ್ಡಿಮೆ ಹೆಚ್ಚಿಸಿಕೊಳ್ಳುವುದು ಹೇಗೆ?

ಉದ್ಯಾನನಗರಿ, ಐಟಿ-ಬಿಟಿ ನಗರಿ ಸೇರಿದಂತೆ ಹಲವಾರು ಬಿರುದುಗಳನ್ನು ಹೊಂದಿರುವ ಬೆಂಗಳೂರನ್ನು ಇವತ್ತು ಉದ್ಯೋಗ ನಗರಿಯೆಂದು ಕರೆಯುವುದರಲ್ಲಿ ಯಾವುದೇ ಅತಿಶಯೋಕ್ತಿ ಆಗಲಾರದು.

ಉದ್ಯೋಗವನರಿಸಿ ಬೆಂಗಳೂರಿಗೆ ಪ್ರತಿದಿನ ಲಕ್ಷಾಂತರ ಮಂದಿ ಬರುತ್ತಾರೆ. ಕೇವಲ ಕರ್ನಾಟಕದ ಮೂಲೆ ಮೂಲೆಗಳಿಂದ, ಪಕ್ಕದ ರಾಜ್ಯಗಳಿಂದ ಮಾತ್ರವಲ್ಲದೆ, ಒಡಿಸ್ಸಾ, ಬಿಹಾರ, ಬಂಗಾಳ, ಅಸ್ಸಾಂ, ತ್ರಿಪುರ ಸೇರಿದಂತೆ ಉತ್ತರ ಭಾರತದ ಯುವಕ, ಯುವತಿಯರ ದಂಡೇ ಬೆಂಗಳೂರಿಗೆ ಬಂದು ಇಳಿಯುತ್ತಿದೆ. ಹಾಗೂ ಬದುಕನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

 Why is Bengaluru the best for working individuals? How can one earn easily?

ಅನ್ಯಭಾಷಿಕರಿಗೆ ಬೆಂಗಳೂರು ಯಾಕೆ ಸಲೀಸು?

ಕರ್ನಾಟಕದ ರಾಜಧಾನಿ ಬೆಂಗಳೂರು ಭಾಷೆ, ಪ್ರದೇಶ, ಬಣ್ಣ, ಲಿಂಗ ಎಲ್ಲ ಸೇರಿ ಎಲ್ಲ ಚೌಕಟ್ಟನ್ನು ಮೀರಿ ಬೆಳೆದಿದೆ. ಇಲ್ಲಿ ಯಾವುದೇ ಪ್ರದೇಶದ, ಭಾಷೆಯ ಮಂದಿ ಆರಾಮವಾಗಿ ಜೀವನ ನಡೆಸುವಂತಹ ವಾತಾವರಣ ನಿರ್ಮಾಣವಾಗಿದೆ. ಯಾವುದೇ ರಾಜ್ಯದ ಉದ್ಯೋಗಿಗಳಿಗೆ ಬೆಂಗಳೂರಿನಲ್ಲಿ ಭಾಷೆಯ ಸಮಸ್ಯೆ ತಲೆ ದೂರುವುದಿಲ್ಲ. ಕನ್ನಡ ಮುಖ್ಯಭಾಷೆಯಾಗುವ ಜೊತೆಗೆ ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲಗು ಹಾಗೂ ಉತ್ತರ ಭಾರತದ ಸಾಮಾನ್ಯ ಭಾಷೆಯಾದ ಹಿಂದಿ ಭಾಷೆ ಬೆಂಗಳೂರಿನಲ್ಲಿ ಸಂವಹನ ಭಾಷೆಯಾಗಿದೆ. ಹೀಗಾಗಿ ಅನ್ಯ ಭಾಷೆಯ ಉದ್ಯೋಗಿಗಳು ಬೆಂಗಳೂರಿನಲ್ಲಿ ಬಹುಬೇಗನೆ ಹೊಂದಿಕೊಳ್ಳುವಂತವ ವಾತಾವರಣ ಇದೆ.

ಎಲ್ಲ ರೀತಿಯ ಉದ್ಯೋಗವೂ ಲಭ್ಯ!

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಂಬರ್ ಒನ್ ಆಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿನ ವ್ಯಾಪ್ತಿ ವಿಸ್ತರಣೆಯಾಗುತ್ತಲೇ ಹೋಗುತ್ತಿದೆ. ಕೈಗಾರಿಕಾ ಪ್ರದೇಶಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ದೇಶ, ವಿದೇಶಿ ಕಂಪೆನಿಗಳು ಸ್ಥಾಪನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆ ಅಗತ್ಯವಾದ ಕಟ್ಟಡ ನಿರ್ಮಾಣ ಸೇರಿದಂತೆ ಮತ್ತಿತರ ಕಾಮಗಾರಿಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿವೆ. ಇನ್ನು ಕಂಪೆನಿಗಳಲ್ಲಿ ಸೆಕ್ಯುರಿಟಿ ಕೆಲಸದಿಂದ ಪ್ರಾರಂಭಗೊಂಡು ಕ್ಲಾಸ್ ಒನ್, ಕ್ಲಾಸ್ ಟು ಹುದ್ದೆಗಳ ಅವಕಾಶಗಳ ವೃದ್ಧಿಸುತ್ತಿವೆ.

ಓದಿನ ಜೊತೆಗೆ ಕೌಶಲ್ಯವಿರಲಿ

ಇವತ್ತಿನ ತಂತ್ರಜ್ಞಾನ ಹಾಗೂ ಆಧುನಿಕ ಯುಗದಲ್ಲಿ ಕಂಪ್ಯೂಟರ್‌, ಇಂಗ್ಲಿಷನ್ನು ಸರಳವಾಗಿ ಮಾತನಾಡಲು ಬಂದರೂ ಕೈಗಾರಿಕೆಗಳು, ಐಟಿ ಬಿಟಿ ಕಂಪೆನಿಗಳಲ್ಲಿ ಉತ್ತಮ ವೇತನವುಳ್ಳ ಕೆಲಸವನ್ನು ತಮ್ಮದಾಗಿಸಿಕೊಳ್ಳಬಹುದು‌‌. ಇದಕ್ಕೆ ಪೂರಕವಾಗಿ ಪ್ರತಿ ಕೈಗಾರಿಕಾ ಪ್ರದೇಶಗಳಲ್ಲಿ ಕಂಪ್ಯೂಟರ್, ಟೈಪಿಂಗ್ ಹಾಗೂ ಇಂಗ್ಲಿಷ್ ಕಲಿಸಿಕೊಡುವಂತಹ ಸೆಂಟರ್ ತಲೆ ಎತ್ತಿವೆ. ಮನಸು ಮಾಡಿದರೆ ಆರು ತಿಂಗಳಲ್ಲಿ ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಂಡು ಉತ್ತಮ ವೇತನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ‌.

20 ರಿಂದ 30 ಸಾವಿರ ವೇತನ

ಬೆಂಗಳೂರಿನಲ್ಲಿ ಯಾವುದೇ ಕೆಲಸಕ್ಕೆ ಹೋದರು ಕನಿಷ್ಟ 20 ಸಾವಿರ ವೇತನವನ್ನು ನಿಗಧಿ ಪಡಿಸಲಾಗಿದೆ‌. ಇದರ ಜೊತೆಗೆ ಒಂದಷ್ಟು ಕಂಪ್ಯೂಟರ್ ಜ್ಞಾನ ಹೊಂದಿದ್ದರೆ 30 ಸಾವಿರದವರೆಗೆ ವೇತನವನ್ನು ಪಡೆಯಬಹುದಾಗಿದೆ.

ಸ್ಥಳೀಯರಿಗೆ ಉತ್ತಮ ಅವಕಾಶ?

ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದ ಉದ್ಯೋಗಿಗಳು ತಮ್ಮ ಮನೆಗಳ ಕೂಗಳೆತೆಯ ದೂರದಲ್ಲೇ ಕಂಪೆನಿಗಳು ಇರುವುದರಿಂದ ಕೆಲಸಕ್ಕೆ ದೂರ ಹೋಗುವ ಅಗತ್ಯ ಇರುವುದಿಲ್ಲ‌. ಸರಿಯಾದ ಒಂದು ಕಂಪೆನಿಯನ್ನು ಅಯ್ಕೆ ಮಾಡಿಕೊಂಡು ಕನಿಷ್ಟ ಹತ್ತು ವರ್ಷಕ್ಕೂ ಹೆಚ್ಚು ಕಾಲ ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿದರೆ ಪ್ರತಿ ವರ್ಷವು ವೇತನ ಹೆಚ್ಚಳ, ಪಿಎಫ್, ಬೋನಸ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ‌.

ಒಟ್ಟಾರೆ ಹೇಳುವುದಾದರೆ ದುಡಿಯಬೇಕು, ಸಾಧಿಸಬೇಕು, ಹಂತ ಹಂತವಾಗಿ ತಮ್ಮ ಉದ್ಯೋಗದಲ್ಲಿ ಉನ್ನತ ಹಂತಕ್ಕೆ ತಲುಪಬೇಕೆಂದು ಮೈಚಳಿ ಬಿಟ್ಟು ಶ್ರಮಿಸುವವರಿಗೆ ಬೆಂಗಳೂರಿನಂತಹ ಉತ್ತಮವಾದ ಕೆಲಸದ ಸ್ಥಳ ಮತ್ತೊಂದು ಸಿಗಲಾರದು ಎಂಬುದು ಹಲವಾರು ಉದ್ಯೋಗಿಗಳ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+