ನವೆಂಬರ್ 1ರಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ
ಬೆಂಗಳೂರು, ಸೆಪ್ಟೆಂಬರ್ 27: ಫೇಸ್ ಬುಕ್ ಸ್ವಾಮ್ಯದ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರುತ್ತದೆ. ಆದರೆ, ನವೆಂಬರ್ 1ರಿಂದ ಹಲವು ಫೋನ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ.
ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಅಪ್ಲಿಕೇಶನ್. ಎಲ್ಲಾ ವಯಸ್ಸಿನವರು ವಾಟ್ಸಾಪ್ ಅಪ್ಲಿಕೇಶನ್‌ಗೆ ಮಾರು ಹೋಗಿದ್ದಾರೆ. ಹೊಸ ಹೊಸ ಅಪ್‌ಡೇಟ್‌ಗಳನ್ನು ಮಾಡುವ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗುತ್ತಿದೆ. ಆದರೆ 2011ಕ್ಕೂ ಹಳೆ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಇದು ಆಂಡ್ರಾಯ್ಡ್ ಹಾಗೂ ಐಒಎಸ್ ಆಧಾರಿತ ಸ್ಮಾರ್ಟ್ ಫೋನ್ ಗಳೆರಡಕ್ಕೂ ಅನ್ವಯವಾಗಲಿದೆ.
ನೀವು ಹಳೆಯ ಆಂಡ್ರಾಯ್ಡ್, ಐಒಎಸ್ ಫೋನ್‌ಗಳನ್ನು ಬಳಸುತ್ತಿದ್ದರೆ ಒಎಸ್ ಅಪ್ಡೇಟ್ ಜೊತೆಗೆ ವಾಟ್ಸಾಪ್ ಅಪ್ಡೇಟ್ ಮಾಡಿಕೊಳ್ಳುವುದು ಮುಖ್ಯ. ಪ್ರಸ್ತುತ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೊಂದಿಕೆಯಾಗುವ ಕೆಲವು ಹಳೆಯ ಸಾಧನಗಳಿಗೆ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ವಾಟ್ಸಾಪ್ ಮತ್ತೊಮ್ಮೆ ಘೋಷಿಸಿದೆ. ಹೀಗಾಗಿ ಇಂತಹ ಮೊಬೈಲ್‌ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ.
ಹಳೆಯ ಆಂಡ್ರಾಯ್ಡ್ ಮೊಬೈಲ್ ಮೂಲಕ ಕೆಲವು ಬಳಕೆದಾರರು ಇತ್ತೀಚಿನ ಸಾಫ್ಟ್‌ವೇರ್‌ಗೆ ನವೀಕರಿಸುವ ಮೂಲಕ ವಾಟ್ಸಾಪ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಆದರೆ, ಕೆಲವು ಮೊಬೈಲ್‌ಗಳಿಗೆ ನವೆಂಬರ್ 1, 2021 ರಿಂದ ವಾಟ್ಸಾಪ್ ಶಾಶ್ವತವಾಗಿ ಪ್ರವೇಶಿಸಲಾಗುವುದಿಲ್ಲ.

ಐಒಎಸ್ 10 ಗಿಂತ ಹಳೆಯ ಐಫೋನ್
ಐಒಎಸ್ 10 ಗಿಂತ ಹಳೆಯ ಆಪರೇಟಿಂಗ್ ಸಿಸ್ಟಮ್ ಸಾಫ್ಟ್‌ವೇರ್‌ನಲ್ಲಿ ಚಾಲನೆಯಲ್ಲಿರುವ ಯಾವುದೇ ಐಫೋನ್‌ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈ ಫೋನ್‌ಗಳನ್ನು ಹೊಂದಿರುವ ಬಳಕೆದಾರರು ನವೆಂಬರ್ 1, 2021 ರಿಂದ ವಾಟ್ಸಾಪ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.
ಮುಂದಿನ ವರ್ಷದ ಆರಂಭದಿಂದ ಐಫೋನ್ 4 ಮಾಡೆಲ್‌ಗಳಿಗೆ ಮೆಸೇಜಿಂಗ್ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಐಫೋನ್ 4 ಎಸ್, 5, 5 ಎಸ್, 5 ಸಿ, 6 ಮತ್ತು 6 ಎಸ್ ಎಲ್ಲವನ್ನೂ ಐಒಎಸ್ 10ಕ್ಕೆ ನವೀಕರಿಸಬಹುದು, ಆದ್ದರಿಂದ ಒಮ್ಮೆ ನವೀಕರಿಸಿದ ನಂತರ ಅವರು ವಾಟ್ಸಾಪ್ ಅನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2021 ರ ನವೆಂಬರ್ 1 ರ ಮೊದಲು ಬ್ಯಾಕಪ್
ಇದರ ಜೊತೆಗೆ ಆಂಡ್ರಾಯ್ಡ್ 4.1 ಅಥವಾ ಆಪರೇಟಿಂಗ್ ಸಿಸ್ಟಂನ ಹಳೆಯ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಸಾಧನಗಳಲ್ಲಿ ವಾಟ್ಸಾಪ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಬಳಕೆದಾರರು ವಾಟ್ಸಾಪ್‌ಗೆ ಹೊಂದಿಕೆಯಾಗದಂತಹ ಫೋನ್‌ಗಳನ್ನು ಹೊಂದಿದ್ದರೆ, ಅವರು ತಮ್ಮ ಚಾಟ್‌ಗಳನ್ನು 2021 ರ ನವೆಂಬರ್ 1 ರ ಮೊದಲು ಬ್ಯಾಕಪ್ ಮಾಡಬೇಕು.
ವಾಟ್ಸಾಪ್ ಸೆಟ್ಟಿಂಗ್‌ಗಳಲ್ಲಿನ ಚಾಟ್ಸ್ ವಿಭಾಗದ ಅಡಿಯಲ್ಲಿ 'ಚಾಟ್ ಬ್ಯಾಕಪ್' ಆಯ್ಕೆಗೆ ಹೋಗುವ ಮೂಲಕ ಅವರು ಬ್ಯಾಕಪ್ ಮಾಡಬಹುದು. ಜೊತೆಗೆ 2011ಕ್ಕಿಂತ ಹಿಂದಿನ ಫೋನ್ ಬಳಸುವವರು ಕೂಡಾ ತಮ್ಮ ವಾಟ್ಸಾಪ್ ನವೆಂಬರ್ 1ರೊಳಗೆ ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಫೋನ್ ಸೆಟ್ಟಿಂಗ್ ನಲ್ಲಿ ಮಾಹಿತಿ ಇರಲಿದೆ.

ಯಾವ ಯಾವ ಫೋನ್ ಗಳಲ್ಲಿ ವಾಟ್ಸಾಪ್ ಬಂದ್ ಆಗಲಿದೆ?
ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್, ಆಪಲ್ ಐಫೋನ್ ಎಸ್ಇ.. ಫಸ್ಟ್ ಜನರೇಷನ್ ಐಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ.
ಸ್ಯಾಮ್ ಸಂಗ್: ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಎಸ್II, ಗ್ಯಾಲಕ್ಸಿ ಎಸ್ 3 ಮಿನಿ, ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಕ್ಸ್ ಕವರ್ 2, ಗ್ಯಾಲಕ್ಸಿ ಏಸ್ 2.
ಎಲ್ ಜಿ: ಎಲ್ ಜಿ ಲ್ಯೂಸಿಡ್ 2, ಆಪ್ಟಿಮಸ್ ಎಲ್ 5 ಡುಯಲ್, ಆಪ್ಟಿಮಸ್ ಎಲ್ 4 II ಡುಯಲ್, ಆಪ್ಟಿಮಸ್ ಎಫ್ 3ಕ್ಯೂ, ಆಪ್ಟಿಮಸ್ ಎಫ್7, ಆಪ್ಟಿಮಸ್ ಎಫ್ 5, ಆಪ್ಟಿಮಸ್ ಎಲ್3 II ಡುಯಲ್, ಆಪ್ಟಿಮಸ್ ಎಲ್ 5, ಆಪ್ಟಿಮಸ್ ಎಲ್5 II, ಆಪ್ಟಿಮಸ್ ಎಲ್3 II, ಆಪ್ಟಿಮಸ್ ಎಲ್3 7, ಆಪ್ಟಿಮಸ್ ಎಲ್7 ಡುಯಲ್, ಆಪ್ಟಿಮಸ್ ಎಲ್7 II, ಆಪ್ಟಿಮಸ್ ಎಲ್6, ಎನಾಕ್ಟ್, ಆಪ್ಟಿಮಸ್ ಎಫ್ 3, ಆಪ್ಟಿಮಸ್ ಎಲ್4 II, ಆಪ್ಟಿಮಸ್ ಎಲ್2 II, ಆಪ್ಟಿಮಸ್ ನೈಟ್ರೋ ಎಚ್ ಡಿ ಹಾಗೂ 4ಎಕ್ಸ್ ಎಚ್ ಡಿ.
ZTE
ZTE ಗ್ರ್ಯಾಂಡ್ ಎಸ್ ಫ್ಲೆಕ್ಸ್, ಗ್ರ್ಯಾಂಡ್ ಎಕ್ಸ್ ಕ್ವೃ ವಿ 987, ZTE ವ್956, ಗ್ರ್ಯಾಂಡ್ ಮೆಮೊ
ಹ್ಯುವೈ
ಹ್ಯುವೈ ಅಸೆಂಡ್ ಜಿ 740, ಅಸೆಂಡ್ ಡಿ ಕ್ವಾಡ್ ಎಕ್ಸ್ ಎಲ್, ಅಸೆಂಡ್ ಮೇಟ್, ಅಸೆಂಡ್ ಪಿ1 ಎಸ್, ಅಸೆಂಡ್ ಡಿ 2, ಅಸೆಂಡ್ ಡಿ1 ಕ್ವಾಡ್ ಎಕ್ಸ್ ಎಲ್.

ಯಾವುದರಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ?
ನೋಕಿಯಾ S40 ಫೋನ್
2.3.3 ಅಂಡ್ರಾಯ್ಡ್ ವರ್ಶನ್ ಮತ್ತು ಅದಕ್ಕಿಂತ ಹಳೆಯದು
ವಿಂಡೋಸ್ ಫೋನ್ 7 ಐಫೋನ್ 3GS/iOS 6 ನೋಕಿಯಾ ಸಿಂಬಿಯನ್ S60
ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ವಾಟ್ಸಾಪ್ ಕಾನೂನು ಸಮರ ನಡೆಸಿದ್ದನ್ನು ಮರೆಯುವಂತಿಲ್ಲ, ತಂತ್ರಾಂಶ ಅಪ್ಡೇಟ್ ಇಲ್ಲದಿದ್ದರೆ ವಾಟ್ಸಾಪ್ ಬಳಕೆ ಸುರಕ್ಷಿತವಾಗಿರಲ್ಲ. ವಾಟ್ಸಾಪ್ ಈಗ ಬಳಕೆದಾರರ ಗೌಪ್ಯ ಮಾಹಿತಿ, ಚಾಟ್ ಹಿಸ್ಟರಿಯನ್ನು ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಹಂಚಿಕೊಳ್ಳಲು ಮುಂದಾಗಿದೆ. ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗೆ ಹಲವು ಹೊಸ ಸೌಲಭ್ಯಗಳು, ಕಠಿಣ ಭದ್ರತಾ ನಿಯಮಗಳನ್ನು ಹೊರ ತಂದಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications