ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮಳೆ ಅನಾಹುತ ತಡೆಗೆ ಭವಿಷ್ಯದ ಪ್ಲಾನ್ ಏನು? ತಜ್ಞರು ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ತೊಂದರೆಯನ್ನು ತಂದೊಡ್ಡಿದೆ. ಬೆಂಗಳೂರು ಅಡ್ಡಾದಿಡ್ಡಿಯಾಗಿ ಸಿಕ್ಕ ಸಿಕ್ಕ ಜಾಗವನ್ನು ಆಪೋಶನವನ್ನು ತೆಗೆದುಕೊಂಡು ಬೆಳೆದು ನಿಂತಿದೆ. ಪ್ಲಾನ್ ಸಿಟಿಯಾಗಬೇಕಿದ್ದ ಬೆಂಗಳೂರು ಮಳೆಯ ಅವಾಂತರಕ್ಕೆ ಸಿಲುಕಿ ತತ್ತರಿಸಿದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಮಾಡಲು ಯಾವ ಕ್ರಮವನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ತಜ್ಞರು ಹೇಳುವುದೇನು ಅನ್ನೋದರ ರಿಪೋರ್ಟ್‌ ಇಲ್ಲಿದೆ.

ಬೆಂಗಳೂರಿನ ಅಭಿವೃದ್ದಿಗೆ ಮಹತ್ತರ ಪಾತ್ರವನ್ನು ವಹಿಸುವುದು ಬಿಡಿಎ, ಬಿಬಿಎಂಪಿ, ಬಿಡ್ಬ್ಯೂಎಸ್‌ಎಸ್‌ಬಿ, ಬೆಸ್ಕಾಂ, ಸೇರಿದಂತೆ ಹಲವಾರು ಏಜೆನ್ಸಿಗಳು ಕಾರ್ಯೋನ್ಮುಖವಾಗಿ ಕೆಲಸವನ್ನು ನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಯಾವುದೇ ಲೇಔಟ್ ನಿರ್ಮಾಣವನ್ನು ಮಾಡಬೇಕಾದರು. ಆ ಲೇಔಟ್‌ಗೆ ಮೂಲಭೂತ ಸೌಕರ್ಯವನ್ನು ಒದಿಗಿಸಲು ಸಹ ಇಂಥ ಏಜೆನ್ಸಿಗಳ ಅನುಮತಿ ಮತ್ತು ನೆರವು ಬೇಕೇಬೇಕಾಗಿರುತ್ತದೆ.

Recommended Video

ಭವ್ಯ ನರಸಿಂಹಮೂರ್ತಿ ಅವರ ಪ್ರಕಾರ ಈ ಪರಿಸ್ಥಿತಿಗೆ ಸರ್ಕಾರವೇ ಕಾರಣ | Oneindia Kannada

ಬೆಂಗಳೂರಿನಲ್ಲಿರುವ ಬೇರೆಬೇರೆ ಏಜಿನ್ಸಿಗಳು ಒಟ್ಟಾಗಿ ಕೆಲಸವನ್ನು ಮಾಡಿದಾಗ ಮಾತ್ರವೇ ಅಕ್ರಮವನ್ನು ತಡೆಯಲು ಸಾಧ್ಯವಾಗುತ್ತದೆ. ಲಂಚ , ಭ್ರಷ್ಟಾಚಾರದ ಕೂಪಕ್ಕೆ ಬಲಿಯಾಗಿ ಬೆಂಗಳೂರನ್ನು ಬೆಳೆಯಲು ಬಿಟ್ಟು, ಕೆರೆಗಳನ್ನು ಆಪೋಷನ ತೆಗೆದುಕೊಂಡು ಯೋಗ್ಯವಲ್ಲದ ಜಾಗದಲ್ಲಿ ಮನೆಗಳನ್ನು ಕಚೇರಿಗಳನ್ನು ನಿರ್ಮಾಣವನ್ನು ಮಾಡಿ ಮಳೆಯ ಅನಾಹುತ ಉಂಟಾದಗ ಮಾತ್ರ ಮಳೆಗೆ ಹಿಡಿಶಾಪ ಹಾಕುವ ಬದಲು ಫ್ಯೂಚರ್ ಬೆಂಗಳೂರಿನ ಕಡೆಗೆ ಗಮನ ಕೇಂದ್ರೀಕರಿಸಬೇಕಿದೆ.

 ನಿಮ್ಮ ಏರಿಯಾದಲ್ಲಿ ಏಕೆ ಸಮಸ್ಯೆ ಎಂಬುದನ್ನು ಅರಿಯಿರಿ

ನಿಮ್ಮ ಏರಿಯಾದಲ್ಲಿ ಏಕೆ ಸಮಸ್ಯೆ ಎಂಬುದನ್ನು ಅರಿಯಿರಿ

ಜನರೇ ಜನಪ್ರತಿಗಳನ್ನು ಎಚ್ಚರಿಸಬೇಕು. ಅಧಿಕಾರಿಗಳನ್ನು ಕ್ಲಾಸ್ ತೆಗೆದುಕೊಳ್ಳಬೇಕು. ಅಂದರೇ ಸರ್ಕಾದ ಏಜೆನ್ಸಿಗಳಾದ ಬಿಬಿಎಂಪಿ, ಜಲಮಂಡಲಿ, ಬೆಸ್ಕಾಂ ಸೇರಿದಂತೆ ಇತರೆ ಸಂಸ್ಥೆಗಳು ಬೇರೆ ಬೇರೆ ವಿಧಾನದ್ಲಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತದೆ. "ಸಾರ್ವಜನಿಕರು ತಮ್ಮ ಕರ್ತವ್ಯಪ್ರಜ್ಞೆಯನ್ನು ಮೆರೆಯಬೇಕು. ತಮ್ಮ ಮನೆಯ ಬಳಿಯಲ್ಲಿ ಏರಿಯಾದಲ್ಲಿ ಎಲ್ಲೆಲ್ಲೆ ಮಳೆ ಸಮಸ್ಯೆಯಾಗುತ್ತಿದೆ. ಯಾವುದರಿಂದ ಸಮಸ್ಯೆಯಾಗುತ್ತಿದೆ. ರಸ್ತೆಗಳ ಸಮಸ್ಯೆ ಏನು? ಮೂಲಭೂತ ಸೌಕರ್ಯದ ಕೊರತೆ ಏನು ಅನ್ನೊದನ್ನು ಜನರೇ ಪಟ್ಟಿಯನ್ನು ಮಾಡಬೇಕು. ಬಿಬಿಎಂಪಿ, ಮತ್ತು ಜನಪ್ರತಿನಿಧಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಬೇಕು. ನಾವು ಟ್ಯಾಕ್ಸ್ ಕಟ್ಟುತ್ತೇವೆ ನಮಗೆ ನಮ್ಮದಿಯ ಸೌಕರ್ಯ ಒದಗಿಸಿ ಎಂದು ಹಕ್ಕೊತ್ತಾಯವನ್ನು ಮಾಡಿದಾಗ ಮಾತ್ರವೇ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ" ಎಂದು ರವಿಚಂದ್ರನ್ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

 ಬರುವ ದಿನಗಳಲ್ಲಿ ಸಮಸ್ಯೆಗೆ ಮಹತ್ವದ ಯೋಜನೆ ಅನಿವಾರ್ಯ

ಬರುವ ದಿನಗಳಲ್ಲಿ ಸಮಸ್ಯೆಗೆ ಮಹತ್ವದ ಯೋಜನೆ ಅನಿವಾರ್ಯ

ಬಿಬಿಎಂಪಿ ಮಳೆಯ ಆರಂಭಕ್ಕೂ ಮುನ್ನವೇ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕು. ಬೆಂಕಿಬಿದ್ದಾಗ ಬಾವಿ ತೋಡಲು ಹೋದರೇ ಸಮಸ್ಯೆಯಾದಂತೆ ಮಳೆ ಬಂದಾಗ ಬಿಬಿಎಂಪಿ ಆರ್ಭಟಿಸಿ ಮಳೆ ನಿಂತಾಗ ಸುಮ್ಮನಾಗುವ ಜಯಾಯಮಾನವನ್ನು ಬೆಳೆಸಿಕೊಂಡಿದೆ. ಸರ್ಕಾರ , ಬಿಬಿಎಂಪಿ, ಬೆಸ್ಕಾಂ, ಜಲಮಂಡಲಿ, ಬಿಡಿಎ, ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ದಿ ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ದಪಡಿಸಬೇಕಿದೆ.

"ಪ್ಲಾನ್ 2031 ಹೆಸರಿನಲ್ಲಿ ಯೋಜನೆಯ ರೂಪುರೇಷಗಳನ್ನು ಸಿದ್ದಪಡಿಸಬೇಕು. ಬೆಂಗಳೂರಿನಲ್ಲಿ ಯಾವೆಲ್ಲಾ ಸಮಸ್ಯೆಯಾಗುತ್ತಿದೆ. ಸಮಸ್ಯೆಗೆ ಕಾರಣವೇನು. ಇನ್ನು ಕೆಲವು ವರ್ಷಗಳಲ್ಲಿ ಸುಂದರ ತೊಂದರೆ ರಹಿತ ಬೆಂಗಳೂರು ನಿರ್ಮಾಣಕ್ಕೆ ಯಾವ ಕ್ರಮವನ್ನು ಕೈಗೊಳ್ಳಬೇಕು ಅನ್ನೋದರ ಯೋಜನೆ ಸಿದ್ದಪಡಿಸಿ ಅನುಷ್ಠಾನವನ್ನು ಮಾಡಬೇಕು. ಅದಿಕಾರಿಗಳು ಸ್ವಾತಂತ್ರ್ಯವಾಗಿ ಕೆಲಸವನ್ನು ಮಾಡಬೇಕು. ಅದಿಕಾರಿಗಳು ಕಾನೂನಿನ ಭಯವಿಲ್ಲದಂತೆ ವರ್ತಿಸುತ್ತಾರೆ. ಅಧಿಕಾರಿಗಳ ತಪ್ಪು ಕರ್ತವ್ಯ ಲೋಪವಾದರೆ ಕೆಲಸದಿಂದ ತಲೆದಂಡದಂತಹ ಶಿಕ್ಷೆಯಾದರೆ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ. 2031 ಪ್ಲಾನ್ ಮಾಡಿ, 20 ವರ್ಷದ ಯೋಜನೆ ಸಿದ್ದಪಡಿಸಿ, ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಗಳ ಸಲಹೆಯನ್ನು ಪಡೆಯಿರಿ, ಟೆಕ್ನಾಲಜಿ ಉಪಯೋಗಿಸಿ, ಕೆರೆಗಳನ್ನು ಇಂಟರ್ ಲಿಂಕ್ ಮಾಡಿ, ಕಾಂಕ್ರಿಟ್ ರಸ್ತೆಯ ಪರಿಣಾಮ ಮಳೆ ನೀರು ಇಂಗುತ್ತಿಲ್ಲ, ಭ್ರಷ್ಟಾಚಾರದ ಕಡಿವಾಣ ಹಾಕಬೇಕಿದೆ" ಎಂದು ಬೆಂಗಳೂರು ಪ್ರಜಾ ವೇದಿಕೆಯ ಅಧ್ಯಕ್ಷರಾದ ಡಿಎಸ್ ರಾಜಶೇಖರ್ ತಿಳಿಸಿದ್ದಾರೆ.

 ರಾಜಕೀಯ ಇಚ್ಛಾ ಶಕ್ತಿಯ ಕೊರತೆ

ರಾಜಕೀಯ ಇಚ್ಛಾ ಶಕ್ತಿಯ ಕೊರತೆ

ಬೆಂಗಳೂರು ಸಿಟಿ ಸಾಕಷ್ಟು ಬೆಳೆದಿರುವ ನಗರ ಬೆಂಗಳೂರಿನಲ್ಲಿ ಭ್ರಷ್ಟಾಚಾರದಿಂದಲೇ ಮಳೆಯ ಅನಾಹುತಗಳು ಹೆಚ್ಚಾಗುತ್ತಿವೆ. ಟೌನ್ ಪ್ಲಾನಿಂಗ್ ಸರಿಯಾಗಿ ಮಾಡಿಲ್ಲ. ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ. ಕಮೀಷನ್ ದಂಧೆ ನಿಂತಾಗ ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ರಾಜಕೀಯ ನಾಯಕರ ಇಚ್ಛಾಶಕ್ತಿ, ಅಕ್ರಮ ಸಕ್ರಮ ಮಾಡುವಾಗ ಕೈಗೊಳ್ಳಬೇಕಾದ ಕ್ರಮಗಳು ಇವೆಲ್ಲವನ್ನು ಮಾಡಬೇಕಿದೆ. ಬೆಂಗಳೂರು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದ ನಗರಲಾಗಿದ್ದು ಯೋಜನೆಯನ್ನು ಹಾಕಿಕೊಂಡು ಭ್ರಷ್ಟಚಾರರಹಿತವಾಗಿ ಕೆಲಸವನ್ನು ಮಾಡಿದಾಗ ಮಾತ್ರವೇ ಮುಂದಿನ ದಿನಗಳಲ್ಲಿ ಅನಾಹುತಗಳನ್ನು ತಪ್ಪಿಸಹುದಾಗಿದೆ. ಇದಕ್ಕಾಗಿಯೇ ಎಎಪಿ ಯೋಜನೆಯನ್ನು ರೂಪಿಸುತ್ತಿದೆ ಎನ್ನುತ್ತಾರೆ ಎಎಪಿಯ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ದಾಮ್ಲೆ.

 ಚರಂಡಿ ಸರಿಪಡಿಸದಿದ್ದರೇ ಸಿಗಲ್ಲ ಮುಕ್ತಿ

ಚರಂಡಿ ಸರಿಪಡಿಸದಿದ್ದರೇ ಸಿಗಲ್ಲ ಮುಕ್ತಿ

"ಬೆಂಗಳೂರಿನಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಚರಂಡಿಗಲ್ಲಿ ನೀರು ಸರಾಗವಾಗಿ ಹರಿದುಹೋಗವ ವ್ಯವಸ್ಥೆಯನ್ನು ಮಾಡಬೇಕು. ಭ್ರಷ್ಟಾಚಾರದಿಂದ ಸರಿಯಾದ ಕಾಮಗಾರಿಯಾಗುತ್ತಿಲ್ಲ. ಬಿಬಿಎಂಪಿ ಕಳೆದ ವರ್ಷ ಚರಂಡಿಗಳ ನಿರ್ಮಾನ, ರಾಜಕಾಲುವೆಗಳಿಗಾಗಿ 3200 ಕೋಟಿ ಹಣವನ್ನು ವ್ಯಯ ಮಾಡಿದೆ. ಕಂದಾಯ ಸಚಿವರು ಮತ್ತೆ ಚರಂಡಿಗಳ ದುರಸ್ಥಿಗೆ 1100 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ 3200 ಕೋಟಿ ಹಣ ಯಾವುದಕ್ಕೆ ಖರ್ಚಾಗಿದೆ ತಿಳಿಯಬೇಕಿದೆ. ಚರಂಡಿಗಳನ್ನು ದುರಸ್ಥಿ ಮತ್ತು ನಿರ್ವಹಣೆ ಮಾಡಿದರೇ ಮಾತ್ರವೇ ಮಳೆ ಸಮಸ್ಯೆಗೆ ಶೇ 80 ಪರಿಹಾರ ಪಡೆಯಯಲು ಸಾಧ್ಯವಾಗಲಿದೆ. ಇದೇ ನಮ್ಮ ಪಕ್ಷದ ಉದ್ದೇಶ ಕೂಡ ಆಗಿದೆ," ಎಂದು ಬೆಂಗಳೂರು ನವ ನಿರ್ಮಾಣ ಪಕ್ಷದ ಸಂಸ್ಥಾಪಕರಾದ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.

English summary
Heavy rains in Bengaluru have caused a lot of trouble. Bengaluru has grown up by taking advantage of the available space. Bengaluru, which was supposed to be a planned city, is reeling under the rain. What steps can be taken to avoid trouble in the coming days for Bengaluru? Here is a report of what experts say about this. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X