ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

|
Google Oneindia Kannada News

Recommended Video

ಜಗತ್ತಿನ ಮೊಟ್ಟಮೊದಲ ಜಲಜನಕ ರೈಲಿನ ಯಶಸ್ವಿ ಸಂಚಾರ | Oneindia Kannada

ಬ್ರೋಮೆರ್ವೊರ್ಡೆ(ಜರ್ಮನಿ), ಸೆಪ್ಟೆಂಬರ್ 18: ಜಗತ್ತಿನ ಮೊಟ್ಟ ಮೊದಲ ಜಲಜನಕ ರೈಲು (Hydrogen train) ಯಶಸ್ವಿಯಾಗಿ ಸಂಚರಿಸಿದೆ. ಈ ಮೂಲಕ ಡೀಸೆಲ್ ಇಂಜಿನ್‌ನಿಂದ ಉಂಟಾಗುವ ಮಾಲಿನ್ಯ ನಿವಾರಣೆಗೆ ಹಾಗೂ ಪರಿಸರ ಸ್ನೇಹಿ ಸಂಚಾರಕ್ಕೆ ಹೊಸ ಮುನ್ನುಡಿ ಬರೆಯಲಾಗಿದೆ.

ಫ್ರಾನ್ಸಿನ ಟಿಜಿವಿ ನಿರ್ಮಾತೃ ಅಲ್ ಸ್ಟೋಮ್ (Alstom) ಕಂಪನಿ ರೂಪಿಸಿರುವ ಎರಡು ನೀಲಿ ಬಣ್ಣದ ಕೊರಾಡಿಯಾ ಐಲಿಂಟ್(Coradia iLint) ರೈಲುಗಳು ಕುಕ್ಸ್ ಹಾವೆನ್ (Cuchaven) ಹಾಗೂ ಬ್ರೆಮೆರ್ಹೆನ್(Bremerhaven), ಬ್ರೆಮೆರ್ವೊರ್ಡೆ, ಬುಕ್ಸ್ ಹೆಹುಡೆ ನಡುವಿನ 100 ಕಿ.ಮೀ ಮಾರ್ಗವನ್ನು ಕ್ರಮಿಸಿವೆ.

 ಆಂಧ್ರಕ್ಕೆ ಒಲಿದ ಬುಲೆಟ್ ರೈಲಿಗಿಂತ ವೇಗವಾದ ಸಂಚಾರ ಆಂಧ್ರಕ್ಕೆ ಒಲಿದ ಬುಲೆಟ್ ರೈಲಿಗಿಂತ ವೇಗವಾದ ಸಂಚಾರ

ಸಾಮಾನ್ಯವಾಗಿ ಡೀಸೆಲ್ ಇಂಜಿನ್ ರೈಲುಗಳು ಸಂಚರಿಸುವ ಮಾರ್ಗದಲ್ಲೇ ಈ ರೈಲುಗಳು ಕೂಡಾ ಚಲಿಸಲಿದ್ದು, ಸದ್ಯಕ್ಕೆ ಉತ್ತರ ಜರ್ಮನಿಯ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲಿವೆ. 'ವಿಶ್ವದ ಪ್ರಥಮ ಹೈಡ್ರೋಜನ್ ರೈಲುಗಳು ವಾಣಿಜ್ಯ ಸೇವೆ ಆರಂಭಿಸಿವೆ. ಇಂಥ ರೈಲುಗಳನ್ನು ಸರಣಿಯಲ್ಲಿ ಉತ್ಪಾದಿಸಲು ನಾವು ಸಿದ್ಧವಾಗಿದ್ದೇವೆ ಎಂದು ಅಲ್ ಸ್ಟೋಮ್ ಸಂಥೆ ಸಿಇಒ ಹೆನ್ರಿ
ಪೊಪಾರ್ಟ್ - ಲಫಾರ್ಗೆ ಘೋಷಿಸಿದ್ದಾರೆ.

ಎಲ್ಲಿಂದ ಎಲ್ಲಿಗೆ ಮೊದಲ ಜಲಜನಕ ರೈಲು ಸಂಚಾರ

ಎಲ್ಲಿಂದ ಎಲ್ಲಿಗೆ ಮೊದಲ ಜಲಜನಕ ರೈಲು ಸಂಚಾರ

ಬರ್ಮರ್ವೊರ್ಡೆ ನಗರದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಹಸಿರು ನಿಶಾನೆ ತೋರಲಾಯಿತು. ಇದೇ ನಿಲ್ದಾಣದಲ್ಲಿ ರೈಲು ಹೈಡ್ರೋಜನ್ ಇಂಧನ ತುಂಬಿಕೊಂಡಿತು. ಕುಕ್ಸ್ ಹಾವೆನ್ (Cuchaven) ಹಾಗೂ ಬ್ರೆಮೆರ್ಹೆನ್(Bremerhaven), ಬ್ರೆಮೆರ್ವೊರ್ಡೆ, ಬುಕ್ಸ್ ಹೆಹುಡೆ ನಡುವಿನ 100 ಕಿ.ಮೀ ಮಾರ್ಗವನ್ನು ಯಶಸ್ವಿಯಾಗಿ ಕ್ರಮಿಸಿತು.

'ಇನ್ನೂ 14 ಶೂನ್ಯ ತ್ಯಾಜ್ಯ ಉಗುಳುವ ರೈಲುಗಳನ್ನು 2021ರ ವೇಳೆಗೆ ಲೋವರ್ ಸ್ಯಾಕ್ಸೊನಿ ರಾಜ್ಯಕ್ಕೆ ನೀಡಲಾಗುವುದು. ಜರ್ಮನಿಯ ಇತರೆ ನಗರಗಳು ಈ ಬಗ್ಗೆ ಆಸಕ್ತಿ ತೋರಿವೆ' ಎಂದು ಅಲ್ಸ್ಟೋಮ್ ಕಂಪನಿ ತಿಳಿಸಿದೆ.

ಹೈಡ್ರೋಜನ್ ಟ್ರೈನ್ ಹೇಗೆ ಕಾರ್ಯ ನಿರ್ವಹಣೆ

ಈ ರೈಲುಗಳಲ್ಲಿ ಹೈಡ್ರೋಜನ್(ಜಲಜನಕ) ಹಾಗೂ ಆಕ್ಸಿಜನ್(ಆಮ್ಲಜನಕ) ಬೆರೆಸುವ ಮೂಲಕ ವಿದ್ಯುತ್ ಉತ್ಪಾದಿಸಿ ಅದನ್ನು ರೈಲು ಚಾಲನೆಗೆ ಬಳಸಲಾಗುತ್ತದೆ. ಈ ಪ್ರತಿಕ್ರಿಯೆಯಲ್ಲಿ ಹಬೆ ಹಾಗೂ ನೀರಷ್ಟೇ ತ್ಯಾಜ್ಯವಾಗಿ ಹೊರಹಾಕಲ್ಪಡುತ್ತದೆ. ಹೆಚ್ಚುವರಿ ಇಂಧನವನ್ನು ರೈಲಿನಲ್ಲಿರುವ ಇಯಾನ್ ಲಿಥಿಯಂ ಬ್ಯಾಟರಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಲದೇ ರೈಲುಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಸಹ ಡೀಸೆಲ್ ರೈಲುಗಳಿಗಿಂತ ಕಡಿಮೆ.

ಇಂಧನ ಭರ್ತಿ ಹಾಗೂ ಮೈಲೇಜ್

ಒಂದು ಬಾರಿ ಇಂಧನ ಭರ್ತಿಯಾದ ನಂತರ ಈ ರೈಲುಗಳು ಸುಮಾರು 1,000 ಕಿ.ಮೀ.ಗಳವರೆಗೆ ಚಲಿಸಬಲ್ಲವು. ಎಲ್ಲಾ ಡೀಸೆಲ್ ರೈಲುಗಳೂ ಸಹ ಸಾಮಾನ್ಯವಾಗಿ ಒಂದು ಭರ್ತಿಯಲ್ಲಿ ಇಷ್ಟೇ ದೂರವನ್ನು ಕ್ರಮಿಸುತ್ತವೆ. ಈ ತಂತ್ರಜ್ಞಾನ ಪರಿಸರ ಸ್ನೇಹಿಯಾಗಿದೆ. ಹೀಗಾಗಿ ಮಾಲಿನ್ಯನಿಯಂತ್ರಣಕ್ಕೆ ಹೋರಾಟ ನಡೆಸುತ್ತಿರುವ ಜರ್ಮನಿಯ ಇತರೆ ನಗರಗಳು ಈ ತಂತ್ರಜ್ಞಾನಕ್ಕೆ ಸ್ಪಂದಿಸಲಿವೆ ಎಂದು ಅಲ್ಸ್ಟೋಮ್ ಹೇಳಿದೆ.

ಹೈಡ್ರೋಜನ್ ರೈಲುಗಳು ದುಬಾರಿ

ಹೈಡ್ರೋಜನ್ ರೈಲುಗಳು ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗಿಂತ ದುಬಾರಿ. ಆದರೆ, ಈ ರೈಲುಗಳನ್ನು ನಿರ್ವಹಿಸುವ ವೆಚ್ಚ ಕಡಿಮೆ ಎಂದು ಯೋಜನೆಯ ವ್ಯವಸ್ಥಾಪಕ ಸ್ಟೆಫಾನ್ ಸ್ಕ್ರಾಂಕ್ ತಿಳಿಸಿದ್ದಾರೆ. ಆದರೆ, ಬ್ರಿಟನ್, ನೆದರ್ಲ್ಯಾಂಡ್ಸ್, ಡೆನ್ಮಾರ್ಕ್, ನಾರ್ವೆ, ಇಟಲಿ ಹಾಗೂ ಕೆನಡಾ ಸೇರಿದಂತೆ ಹಲವು ದೇಶಗಳು ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿವೆ. 2022ರ ವೇಳೆಗೆ ಮೊದಲ ಹೈಡ್ರೋಜನ್ ರೈಲು ಓಡಿಸುವುದಾಗಿ ಫ್ರಾನ್ಸ್ ಸರ್ಕಾರ ಈಗಾಗಲೇ ಪ್ರಕಟಿಸಿದೆ.

ವಾರಣಾಸಿಯಲ್ಲಿ ಮೊದಲ ರೈಲು ಓಡಬೇಕಿತ್ತು

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಪ್ರಪಂಚದಲ್ಲೇ ಮೊಟ್ಟ ಮೊದಲ ಜಲಜನಕ(ಹೈಡ್ರೋಜನ್) ರೈಲ್ವೆ ಇಂಜಿನ್ ನಿರ್ಮಾಣ ಮಾಡಲು 2015ರಲ್ಲಿ ರೈಲ್ವೆ ಇಲಾಖೆ ಮುಂದಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ರೈಲ್ವೆ ಇಲಾಖೆ ಅಧಿಕಾರಿಗಳು, ಯಂತ್ರದ ಮಾದರಿಯನ್ನು ಈಗಾಗಲೇ ತಯಾರಿಸಿ ಪರೀಕ್ಷಿಸಲಾಗಿದೆ. ಇದರ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು ಪರಿಸರ ಸ್ನೇಹಿಯಾಗಿರಲಿದೆ ಎಂದಿದ್ದರು. ಆದರೆ, ಯೋಜನೆಗೆ ಪೂರಕವಾದ ಬೆಂಬಲ ಸಿಗದ ಕಾರಣ, ಯೋಜನೆ ಪೂರ್ಣಗೊಳ್ಳಲಿಲ್ಲ.

English summary
Germany on Monday rolled out the world's first hydrogen-powered train, signalling the start of a push to challenge the might of polluting diesel trains with costlier but more eco-friendly technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X