Urinary Tract Infection: ಮಹಿಳೆಯರಲ್ಲಿ ಹೆಚ್ಚಿದ ಮೂತ್ರ ನಾಳದ ಸೋಂಕು:ಕಾರಣವೇನು?

ಇತ್ತೀಚಿಗೆ ಕನ್ನಡದ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿರುವ ಫೋಟೋ ಹಂಚಿಕೊಂಡಿದ್ದ ಅಮೃತಾ ರಾಮಮೂರ್ತಿ ಒಂದು ಮುಖ್ಯವಾದ ವಿಚಾರವನ್ನು ಹೇಳಿಕೊಂಡಿದ್ದು, ಹೆಣ್ಣು ಮಕ್ಕಳಿಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಕಾರಣ ಕೂಡ ಯಾಕೆಂದರೆ ನಟಿ ಅಮೃತಾ ರಾಮಮೂರ್ತಿ ಯುಟಿಐ ಅಂದರೆ ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್‌ನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು.

'ನಮಸ್ಕಾರ ಎಲ್ಲರಿಗೂ. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ. ಏನಾಗಿದೆ ಏನಾಯ್ತು ಅಂತ. ನಂಗೆ ಸೀವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ. ಎಕ್ಸ್​ಟ್ರೀಮ್ ಲೆವೆಲ್​ಗೆ ಹೋಗಿದೆ ಇನ್ಫೆಕ್ಷನ್. ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಣು ಮಕ್ಕಳೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮಗೆ ವಿಧಿಯಿಲ್ಲ. ಶೂಟಿಂಗ್ ಸೆಟ್​​ನಲ್ಲಿ ರೆಸ್ಟ್​ರೂಮ್ ಯೂಸ್ ಮಾಡಬೇಕಾಗುತ್ತದೆ. ಹೈಜೀನ್ ನೋಡಿಕೊಳ್ಳಬೇಕಾದ್ದು ತುಂಬಾ ಮುಖ್ಯ ಎಂದು ತಿಳಿಸಿದ್ದರು.

What Are The Symptoms Of Urinary Tract Infection

ಹಾಗಾದರೆ ಯೂರಿನರಿ ಟ್ರ್ಯಾಕ್ ಇನ್ಫೆಕ್ಷನ್ ಅಷ್ಟೊಂದು ಅಪಾಯಕಾರಿನಾ? ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಎಂದರೇನು? ಈ ಬಗ್ಗೆ ಮಾಹಿತಿ ಇಲ್ಲಿದೆ. ಹೌದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮೂತ್ರದ ಸೋಂಕು ಹೆಚ್ಚಾಗುತ್ತಿದೆ. ನೋವು, ಉರಿ ಮಹಿಳೆಯರನ್ನು ಬೆನ್ನುಬಿಡದೇ ಕಾಡುತ್ತಿದೆ. ಹೇಳಲು ಆಗದೇ ಮುಜುಗರದಿಂದ ಅನೇಕರು ನೋವನ್ನು ತಡೆದುಕೊಳ್ಳುತ್ತಾರೆ. ಆದರೆ ಇದು ಮುಂದಿನ ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ.

ಯಾವುದೇ ಕಾರಣಕ್ಕೂ ಈ ವಿಚಾರಕ್ಕೆ ಮುಚ್ಚುಮರೆ ಮಾಡದೇ ಕೂಡಲೇ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ ಇದರಿಂದ ಮುಂದೆ ಮೂತ್ರ ನಾಳ ಸಂಬಂಧ ಇತರ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ಮೂತ್ರ ನಾಳದ ಸೋಂಕಿಗೆ ಕಾರಣಗಳೇನು?

ಮೂತ್ರದ ನಾಳದ ಸೋಂಕಿಗೆ ಪ್ರಮುಖ ಕಾರಣ ಶುಚಿತ್ವ ಕಾಪಾಡಿಕೊಳ್ಳದಿರುವುದು. ನೀರು ಕುಡಿಯದೇ ಇರುವುದು, ಮೂತ್ರ ಮಾಡಿದ ಬಳಿಕ ಸ್ವಚ್ಛ ಮಾಡಿಕೊಳ್ಳದಿರುವುದು, ಸಾರ್ವಜನಿಕ ಶೌಚಾಲಯ ಬಳಸುವುದು, ಲೈಂಗಿಕ ಕ್ರಿಯೆ ಬಳಿಕ ಸ್ವಚ್ಛ ಮಾಡಿಕೊಳ್ಳದಿರುವುದರಿಂದ ಮೂತ್ರ ನಾಳದ ಸೋಂಕು ಕಾಣಿಸಿಕೊಳ್ಳುತ್ತದೆ.

What Are The Symptoms Of Urinary Tract Infection

ಮೂತ್ರ ನಾಳದ ಸೋಂಕಿನ ಲಕ್ಷಣಗಳೇನು?

ನೋವು, ಉರಿ ಮಾತ್ರವಲ್ಲದೇ ಮೂತ್ರ ನಾಳದ ಸೋಂಕಿನ ಇತರ ಲಕ್ಷಣಗಳನ್ನು ನೀವು ಕಾಣಬಹುದು. ಪದೇ ಪದೇ ಮೂತ್ರ ವಿಸರ್ಜನ ಮಾಡಿಸುವುದು

ಮೂತ್ರ ವಿಸರ್ಜನ ಸಮಯದಲ್ಲಿ ತೀವ್ರವಾದ ನೋವು, ಸಹಿಸಲಾಗದ ನೋವು, ಮೂತ್ರದಲ್ಲಿ ರಕ್ತ ಬೀಳುವುದು, ಮೂತ್ರದ ಬಣ್ಣ ಬದಲು ಹೀಗೆ ಕೆಲವು ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಮೂತ್ರ ನಾಳದ ಸೋಂಕಿನಿಂದ ಪಾರಾಗುವುದು ಹೇಗೆ?

*ಅತಿ ಹೆಚ್ಚು ನೀರು ಕುಡಿಯುವುದು

*ಹಣ್ಣ-ತರಕಾರಿಯನ್ನು ಸೇವಿಸುವುದು

*ಕೊತ್ತಂಬರಿ ಬೀಜ ಹಾಗೂ ಜೀರಿಗೆ ಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದು

* ಬಾರ್ಲಿ ಬೀಜಗಳನ್ನು ಕುದಿಸಿ ಕುಡಿಯುವುದು

* ಹೆಚ್ಚೆಚ್ಚು ಎಳನೀರು ಕುಡಿಯುವುದು

* ಮಾಂಸ-ಮೀನು ಮಸಾಲೆ ಪದಾರ್ಥಗಳಿಂದ ದೂರ ಇರುವುದು

*ಶುಚಿತ್ವ ಕಾಪಾಡಿಕೊಳ್ಳುವುದು

*ಸಾರ್ವಜನಿಕ ಶೌಚಾಲಯ ಬಳಸುವಾಗ ಎಚ್ಚರಿಕೆ

*ಕೆಲಸದ ಸ್ಥಳಗಳಲ್ಲಿ ಶೌಚಾಲಯಗಳನ್ನು ಶುಚಿತ್ವ ಕಾಪಾಡಿಕೊಳ್ಳುವುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+