ಮಾವಿನ ಹಣ್ಣಿನ ಪಾನಿಪುರಿಯಿಂದ ಬಿಸ್ಕೆಟ್ ಪಕೋಡದವರೆಗೆ: 2023 ರಲ್ಲಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ ವಿಚಿತ್ರ ಆಹಾರಗಳು!

ವಿಚಿತ್ರ ಆಹಾರ ಸಂಯೋಜನೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಇದು ಬೇಯಿಸಿದ ಭಕ್ಷ್ಯಗಳಿಗೆ ಕೆಲವು ಬದಲಾವಣೆಗಳನ್ನು ಮಾಡುವುದಾಗಿದೆ. ಇಂಥಹ ಅನೇಕ ಪಾಕವಿಧಾನಗಳನ್ನು ಇಂಟರ್ನೆಟ್ನಲ್ಲಿ ಬ್ರೌಸ್ ಮಾಡುವುದನ್ನು ಕಾಣಬಹುದು. ಉದಾಹರಣೆಗೆ ಚಾಕೊಲೇಟ್ ನೂಡಲ್ಸ್, ಮೇಯನೇಸ್ ಹೊಂದಿರುವ ಬಿರಿಯಾನಿ, ಅನೇಕ ವಿಚಿತ್ರವಾದ ಭಕ್ಷ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಪ್ರತಿ ವರ್ಷ ಕೆಲವು ವಿಚಿತ್ರ ಆಹಾರ ಸಂಯೋಜನೆಗಳು ವೈರಲ್ ಆಗುತ್ತವೆ. ಆದ್ದರಿಂದ 2023ರಲ್ಲಿ ಕೆಲವು ವಿಚಿತ್ರ ಮತ್ತು ಅನಿರೀಕ್ಷಿತ ಆಹಾರ ಸೇರ್ಪಡೆಗಳು ವೈರಲ್ ಆಗಿವೆ. 2023ರಲ್ಲಿ ಅಂತರ್ಜಾಲದಲ್ಲಿ ಯಾವ ವಿಚಿತ್ರ ಆಹಾರಗಳು ವೈರಲ್ ಆಗಿವೆ ಎಂಬುದನ್ನು ಈಗ ನೋಡೋಣ.

Weird Foods That Will Go Viral On The Internet In 2023!

ಟೊಮೆಟೊ ಐಸ್ ಕ್ರೀಮ್

ಜೂನ್ 2023 ರಲ್ಲಿ Instagram ನಲ್ಲಿ ವೀಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ ವ್ಯಾಪಾರಿಯೊಬ್ಬರು ಟೊಮೆಟೊ ಐಸ್ ಕ್ರೀಂ ತಯಾರಿಸಿ ಕೊಡುತ್ತಾರೆ. ವೀಡಿಯೊದಲ್ಲಿ ಗ್ರಾಹಕರು ಮಾರಾಟಗಾರರಿಗೆ ಟೊಮೆಟೊವನ್ನು ನೀಡುತ್ತಾರೆ. ವ್ಯಾಪಾರಿ ಟೊಮೆಟೊವನ್ನು ಕತ್ತರಿಸಿ ಐಸ್ ಟ್ರೇನಲ್ಲಿ ಇರಿಸಿ, ಕ್ಯಾರಮೆಲ್ ಮತ್ತು ಹಾಲು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡುತ್ತಾರೆ. ನಂತರ ಐಸ್ ಕ್ರೀಮ್ ಅನ್ನು ಪ್ಲೇಟ್ನಲ್ಲಿ ಬಡಿಸಲಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ವರ್ಷ ಹೆಚ್ಚು ವೈರಲ್ ಆಗಿದೆ.

ಚಾಕೊಲೇಟ್ ಆಮ್ಲೆಟ್

2023ರಲ್ಲಿ ಜನಪ್ರಿಯವಾದ ಮತ್ತೊಂದು ವಿಚಿತ್ರ ಆಹಾರ ಸಂಯೋಜನೆಯೆಂದರೆ ಚಾಕೊಲೇಟ್ ಆಮ್ಲೆಟ್. ಈ ಜನಪ್ರಿಯ ಚಾಕೊಲೇಟ್ ಆಮ್ಲೆಟ್ ವೀಡಿಯೊದಲ್ಲಿ ಮಾರಾಟಗಾರನು 3-4 ಮೊಟ್ಟೆಗಳನ್ನು ಒಡೆದು ಹಾಕುತ್ತಾನೆ. ಅದರ ಮೇಲೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಚೀಸ್, ಮಸಾಲೆ ಪುಡಿಗಳು, ಕೊತ್ತಂಬರಿ ಸೊಪ್ಪು ಮತ್ತು ತುರಿದ ಚಾಕೊಲೇಟ್, ಚೀಸ್ ಸ್ಲೈಸ್‌ಗಳು ಮತ್ತು ಚಾಕೊಲೇಟ್ ಸಾಸ್‌ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಈ ವಿಚಿತ್ರ ಆಹಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಗುಲಾಬ್ ಜಾಮೂನ್ ಜೊತೆ ಮೊಸರು

ಗುಲಾಬ್ ಜಾಮೂನ್ ಎಂದರೆ ಎಲ್ಲರಿಗೂ ಇಷ್ಟವಾಗುವ ಸಿಹಿ. ಮೊಸರಿನೊಂದಿಗೆ ಈ ಗುಲಾಬ್ ಜಾಮೂನ್ ಅನ್ನು ನೀವು ಎಂದಾದರೂ ಸೇವಿಸಿದ್ದೀರಾ? ಇಲ್ಲ ಅಲ್ವಾ. ಆದರೆ 2023 ರಲ್ಲಿ ವ್ಯಾಪಾರಿಯೊಬ್ಬರು ಬಟ್ಟಲಿಗೆ ಮೊಸರು ಸುರಿದು ಮತ್ತು ಗುಲಾಬ್ ಜಾಮೂನ್ ಅನ್ನು ಮಾರಾಟ ಮಾಡುವ ವೀಡಿಯೊ Instagramನಲ್ಲಿ ವೈರಲ್ ಆಗಿತ್ತು. ಮೊಸರಿನೊಂದಿಗೆ ಗುಲಾಬ್ ಜಾಮೂನ್ ನ ಈ ಒಂದು ಬೌಲ್ ಬೆಲೆ 50 ರೂಪಾಯಿ. ಇಷ್ಟವಾದರೆ ಈ ಕಾಂಬಿನೇಷನ್ ಟ್ರೈ ಮಾಡಿ... ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗಿತ್ತು.

ಬಿಸ್ಕೆಟ್ ಪಕೋಡ

ಪಕೋಡ ಭಾರತದಲ್ಲಿ ಬಹಳ ಜನಪ್ರಿಯವಾದ ತಿಂಡಿಯಾಗಿದೆ. ಈ ಪ್ರಸಿದ್ಧ ಪಕೋಡಾದೊಂದಿಗೆ 2023 ರಲ್ಲಿ ಹೊಸ ಭಕ್ಷ್ಯವನ್ನು ಕಂಡುಹಿಡಿಯಲಾಯಿತು. ಅದು ಓರಿಯೋ ಬಿಸ್ಕೆಟ್ ಪಕೋಡ. ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಓರಿಯೊ ಬಿಸ್ಕೆಟ್‌ನೊಂದಿಗೆ ಪಕೋಡ ತಯಾರಿಸುತ್ತಾರೆ. ಇದು 2023 ಸಾಕಷ್ಟು ವೈರಗ್ ಆಗಿದೆ.

ಚೀಸೀ ಮಾವಿನ ದೋಸೆ

ಈ ಚೀಸೀ ಮಾವಿನ ದೋಸೆ ಮತ್ತೊಂದು ವಿಚಿತ್ರ ಆಹಾರ ಸಂಯೋಜನೆಯಾಗಿದ್ದು ಇದು ಕೂಡ ವೈರಲ್ ಆಗಿತ್ತು. ಇದನ್ನು 2023 ರಲ್ಲಿ ಹೊಸದಾಗಿ ಆವಿಷ್ಕರಿಸಲಾಯಿತು. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಂಚಿನ ಮೇಲೆ ದೋಸೆ ಮಾಡಿ ಮಾವಿನ ಹಣ್ಣನ್ನು ಹಾಕಿ ಅದರ ಮೇಲೆ ಬಾದಾಮಿ, ಗೋಡಂಬಿ ಮತ್ತು ತುರಿದ ಚೀಸ್ ಅನ್ನು ಹಾಕಿ ನಂತರ ರೋಲ್ ಮಾಡಿ ಸಾಂಬಾರ್ ನೊಂದಿಗೆ ಬಡಿಸುತ್ತಾರೆ.

ಮಾವಿನಕಾಯಿ ಪಾನಿಪುರಿ

ಮಾವು ಪಾನಿಪುರಿ ಮಾವು ಪ್ರಿಯರಿಗಾಗಿ 2023 ರಲ್ಲಿ ಕಂಡುಹಿಡಿದ ಮತ್ತೊಂದು ವಿಚಿತ್ರ ಭಕ್ಷ್ಯವಾಗಿದೆ. ಈ ಪಾಕವಿಧಾನ ಈ ವರ್ಷ ಕಂಡುಹಿಡಿದ ಅತ್ಯಂತ ಗಮನ ಸೆಳೆದ ಭಕ್ಷ್ಯವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಾಪಾರಿಗಳು ಮಾವಿನ ಹಣ್ಣಿನ ತಿರುಳನ್ನು ಪಾನಿಪುರಿಗೆ ಸುರಿದು ಬಡಿಸಿದ್ದಾರೆ. ನೀವು ಮಾವು ಪ್ರಿಯರಾಗಿದ್ದರೆ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಮೇಲೆ ನೀಡಲಾದ 2023ರ ವಿಚಿತ್ರ ಆಹಾರ ಸಂಯೋಜನೆಗಳಲ್ಲಿ ನಿಮ್ಮ ನೆಚ್ಚಿನ ಆಹಾರ ಯಾವುದು ಎಂಬುದರ ಕುರಿತು ನಿಮ್ಮ ಆಲೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+