ಪತಿಯನ್ನು Sweetheart ಎಂದ ರೆಸ್ಟೋರೆಂಟ್ ಮಹಿಳಾ ವೈಟರ್: ಅಸೂಯೆ ಪಟ್ಟ ಪತ್ನಿ ಕೊಟ್ಟ ಟಿಪ್ಸ್ ಏನು ಗೊತ್ತಾ?
ರೆಸ್ಟೋರೆಂಟ್‌ಗಳಿಗೆ ಹೋದಾಗ ವೈಟರ್‌ಗೆ ಟಿಪ್ಸ್ ಕೊಡುವುದು ಟ್ರೆಂಡ್. ಕೆಲವೆಡೆ ರೆಸ್ಟೋರೆಂಟ್‌ನ ಸರ್ವಿಸ್ ಬಗ್ಗೆ ಗ್ರಾಹಕರು ತಮ್ಮ ಅನಿಸಿಕೆಯನ್ನು ಬರೆಯಬೇಕಾಗುತ್ತದೆ. ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ ಗ್ರಾಹಕರೊಬ್ಬರು ಟಿಪ್ಸ್ ಕೊಡುವ ಬದಲಿಗೆ ಮನವಿಯೊಂದನ್ನು ಮಾಡಿದ್ದಾರೆ. ಅದೇನೆಂದು ತಿಳಿದಿರೆ ನಿಮಗೆ ಆಶ್ಚರ್ಯ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಪತಿ-ಪತ್ನಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಅದೆಷ್ಟೋ ದಂಪತಿಗಳ ನಡುವಿನ ಜಗಳಗಳು ರಾತ್ರಿಹೊತ್ತೇ ಆರಂಭವಾಗುತ್ತವೆ. ಆದರೆ ಅವರು ಅದೆಷ್ಟೇ ಜಗಳವಾಡಿದರೂ ಅವರಿಬ್ಬರ ನಡುವೆ ಮತ್ತೊಬ್ಬರ ಆಗಮನವನ್ನು ಬಯಸುವುದಿಲ್ಲ. ಹಾಗೊಂದು ವೇಳೆ ಅದ್ಯಾರಾದರೂ ಬಂದಿದ್ದೇ ಆದರೆ ಜಗಳ ಬೇರೆ ರೂಪವನ್ನೇ ಪಡೆದುಕೊಳ್ಳುತ್ತದೆ. ಹೀಗೆ ರೆಸ್ಟೋರೆಂಟ್‌ಗೆ ಬಂದ ಗ್ರಾಹಕಳು ತನ್ನ ಪತಿಗೆ ಪ್ರಿಯತಮ (Sweetheart) ಎಂದು ಕರೆಯದಂತೆ ಮಹಿಳಾ ವೈಟರ್‌ಗೆ ತಿಳಿಸಿದ್ದಾರೆ.

ಹೌದು... 'ನನ್ನ ಪತಿಯನ್ನು ಪ್ರಿಯತಮ ಎಂದು ಕರೆಯಬೇಡಿ' ಎಂದು ಗ್ರಾಹಕಳು ಬಿಲ್‌ನಲ್ಲಿ ಬರೆದಿದ್ದಾಳೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಹೋಟೆಲಿನಲ್ಲಿ ಊಟ ಮಾಡಿದ ನಂತರ ವೈಟರ್‌ಗೆ ಟಿಪ್ಸ್ ಬಿಡುವ ಟ್ರೆಂಡ್ ಇದೆ. ಗ್ರಾಹಕರು ತಮಗೆ ಬೇಕಾದಷ್ಟು ಟಿಪ್ಸ್ ಕೊಡಬಹುದು. ಹೋಟೆಲ್‌ನಲ್ಲಿ ಬಿಲ್ ಪಾವತಿಸಿದ ನಂತರ ಟಿಪ್ ಮಾಡುವ ಅಗತ್ಯವಿದೆಯೇ ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ? ಕೆಲವರು ಇದು ಅಗತ್ಯ ಎಂದು ಹೇಳುತ್ತಾರೆ ಮತ್ತು ಕೆಲವರ ಪ್ರಕಾರ ಇದು ಅಗತ್ಯವಿಲ್ಲ. ಇತ್ತೀಚೆಗೆ ವೈಟರ್ ಒಬ್ಬರು ತಮಗಾದ ಟಿಪ್ಸ್ ಅನುಭವವನ್ನು ಹಂಚಿಕೊಂಡಿದ್ದಾರೆ.
'ನನ್ನ ಪತಿಯನ್ನು ಪ್ರಿಯತಮ (Sweetheart) ಎಂದು ಕರೆಯಬೇಡಿ'
ವೈರಲ್ ಆಗುತ್ತಿರುವ ಈ ಸುದ್ದಿಯನ್ನು ರೆಸ್ಟೋರೆಂಟ್ ಮಹಿಳಾ ವೈಟರ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ದಂಪತಿಗಳು ತನಗಾಗಿ ಟಿಪ್ಸ್ ಏನನ್ನು ಕೊಟ್ಟಿದ್ದಾರೆಂದು ಆಕೆ ಬಿಲ್ ಫೋಟೋವನ್ನು ಹಂಚಿಕೊಂಡಿದ್ದಾಳೆ. ಆ ಟಿಪ್ಸ್ ಅನ್ನು ಓದಿದ ನಂತರ ಕೆಲವರು ನಕ್ಕರೆ ಇನ್ನೂ ಕೆಲವರು ಕೋಪಗೊಂಡಿದ್ದಾರೆ.

ದಂಪತಿ ರೆಸ್ಟೋರೆಂಟ್‌ವೊಂದಕ್ಕೆ ಊಟಕ್ಕಾಗಿ ಬಂದಿದ್ದಾರೆ. ಆಗ ಮಹಿಳಾ ವೈಟರ್ ಪ್ರೀತಿಯಿಂದ ಗ್ರಾಹಕರನ್ನು ಬರಮಾಡಿಕೊಂಡಿದ್ದಾಳೆ. ಊಟದ ಬಳಿಕ 2700 ರೂಪಾಯಿ ಬಿಲ್ ದಂಪತಿ ಪಾವತಿಸಿದ್ದಾರೆ. ವೈಟರ್ ಬಿಲ್ ತೆಗೆದುಕೊಂಡಾಗ ಅದರಲ್ಲಿ ಬರೆದಿರುವ ವಿಷಯ ಕಂಡು ಆಶ್ಚರ್ಯಗೊಂಡಿದ್ದಾರೆ. ಬಿಲ್‌ನ ಟಿಪ್ಸ್ ಎಂಬ ಕಾಲಮ್‌ನಲ್ಲಿ ಗ್ರಾಹಕಳು 'ನನ್ನ ಪತಿಯನ್ನು ಪ್ರಿಯತಮ ಎಂದು ಕರೆಯಬೇಡಿ' ಎಂದು ಬರೆದು ತಿಳಿಸಿದ್ದಾರೆ. ಈ ಬಿಲ್ ಸದ್ಯ ಸಾಕಷ್ಟು ವೈರಲ್ ಆಗಿದೆ.
ಹೊರದೇಶಗಳಲ್ಲಿ ಸ್ವೀಟ್‌ಹಾರ್ಟ್, ಸ್ವೀಟಿ, ಡಿಯರ್ ಎಂಬ ಪದಗಳ ಬಳಕೆ ರೆಸ್ಟೋರೆಮಟ್‌ನಲ್ಲಿ ಸರ್ವೇಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಗ್ರಾಹಳು ಅದ್ಯಾವ ಮೂಡ್‌ನಲ್ಲಿ ಇದ್ದಳೋ ಏನೋ ಪತಿಗೆ ಮಹಿಳಾ ವೈಟರ್ ಪ್ರೀತಿಯಿಂದ ಮಾತನಾಡಿಸುತ್ತಿದ್ದಂತೆ ಅಸೂಯೆಗೊಂಡಿದ್ದಾಳೆ. ಅದನ್ನು ಬಿಲ್‌ನಲ್ಲಿ ಬರೆಯುವ ಮೂಲಕ ವ್ಯಕ್ತಪಡಿಸಿದ್ದಾಳೆ.
ಜನರಿಂದ ಮಿಶ್ರ ಪ್ರತಿಕ್ರಿಯೆ
ಮಹಿಳಾ ವೈಟರ್ ಈ ಬಿಲ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹೆಂಡತಿ ಬಿಲ್ ತನ್ನ ಪತಿಯನ್ನು ಪ್ರಿಯತಮ ಎಂದು ಕರೆಯಬಾರದು ಎಂದು ಸಂದೇಶದೊಂದಿಗೆ ಹಣ ಪಾವತಿಸಿದ್ದಾರೆ. ಹೀಗೆಂದು ಬರೆದು ಒಂದು ರೂಪಾಯಿ ಟಿಪ್ ಅನ್ನು ಕೊಟ್ಟಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜನ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ರೆಸ್ಟೋರೆಂಟ್‌ಗಳಲ್ಲಿ ಟಿಪ್ಪಿಂಗ್ ವ್ಯವಸ್ಥೆಯನ್ನು ನಿಲ್ಲಿಸುವಂತೆ ಕೆಲವರು ಮನವಿ ಮಾಡಿದ್ದಾರೆ. ಅನೇಕರು ಅವನ ಹೆಂಡತಿಯನ್ನು ತುಂಬಾ ಅಸುರಕ್ಷಿತ ಎಂದು ಕರೆದಿದ್ದಾರೆ. ಮತ್ತೊಬ್ಬರು ದಕ್ಷಿಣ ಅಮೆರಿಕಾದಲ್ಲಿ ಜನರು ಒಬ್ಬರನ್ನೊಬ್ಬರು ಹನಿ, ಸ್ವೀಟ್‌ಹಾರ್ಟ್, ಸ್ವೀಟಿ ಎಂದು ಕರೆಯುವುದು ಸಾಮಾನ್ಯ ಎಂದು ಬರೆದಿದ್ದಾರೆ. ಇದು ದೊಡ್ಡ ವಿಷಯವಲ್ಲ. ಆದರೆ ಯಾರೂ ಕೂಡ ಈ ರೀತಿಯ ಟಿಪ್ಸ್ ಅನ್ನು ನಿರೀಕ್ಷೆ ಮಾಡಿಯೇ ಇರಲಿಲ್ಲ. ಇದು ನೋಡುಗರನ್ನು ಆಶ್ಚರ್ಯಪಡಿಸುವುದು ಮಾತ್ರವಲ್ಲದೆ ನಗಿಸಿದೆ.












Click it and Unblock the Notifications