Vivo ಕಂಪನಿ ಶೀಘ್ರದಲ್ಲಿ ನಾಲ್ಕು ಫೋನ್ ಲಾಂಚ್: ಬಿಡುಗಡೆ ಯಾವಾಗ ಗೊತ್ತಾ?
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆ ಹಿಡಿತವನ್ನು ಸಾಧಿಸಿರುವ ಚೀನಿ ಕಂಪನಿಗಳು ದಿನಕ್ಕೊಂದು ತಂತ್ರಜ್ಞಾನವನ್ನು ಅಪ್‌ಡೇಟ್ ಮಾಡುತ್ತಿವೆ. ಅಲ್ಲದೆ ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಹೊಸ ಫೋನ್ ಲಾಂಚ್ ಮಾಡುತ್ತಿವೆ. ಈ ಸಾಲಿನಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳು ಸೇರುತ್ತವೆ. ಚೀನಾ ಮೂಲದ ವಿವೋ ಕಂಪನಿ ಇದಕ್ಕೆ ಹೊರತಾಗಿಲ್ಲ.
ವಿವೋ ಈಗಾಗಲೇ ಭಾರತದಲ್ಲಿ ಹಲವು ಬಗೆಯ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿ ಯಶ ಕಂಡಿದೆ. ಈ ಯಶಸ್ಸಿನ ನಾಗಾಲೋಟವನ್ನು ಮುಂದುವರೆಸಲು, ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ಸರಣಿಯ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಪ್ಲ್ಯಾನ್ ಮಾಡಿಕೊಂಡಿವೆ. ವಿವೋ ಈ ಸರಣಿಯ ಫೋನ್‌ಗಳನ್ನು X100 Ultra, X100s ಮತ್ತು X100s Pro ಎಂದು ನೂತನ ಫೋನ್‌ಗಳಿಗೆ ಹೆಸರಿಸಿವೆ.

ಸ್ಮಾರ್ಟ್‌ಫೋನ್ ಬಿಡುಗಡೆ ಯಾವಾಗ?
Vivo X100 ಸರಣಿಯ ಬಿಡುಗಡೆ ದಿನಾಂಕದ ಬಗ್ಗೆ ಕಂಪನಿಯು ಮಾಹಿತಿಯನ್ನು ನೀಡಿದೆ, ಫೋನ್‌ಗಳನ್ನು ಮೇ 13 ರಂದು ಸ್ಥಳೀಯ ಸಮಯ ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಾಗುವುದು. ಪ್ರಸ್ತುತ, ಈ ಮೂರು ಸ್ಮಾರ್ಟ್‌ಫೋನ್‌ಗಳನ್ನು ವಿವೋ ಚೀನಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಿ ಬುಕಿಂಗ್‌ಗಾಗಿ ನೀಡಲಾಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ, ಬಣ್ಣ ಆಯ್ಕೆಗಳು ಮತ್ತು ಕಾನ್ಫಿಗರೇಶನ್‌ಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲಾಗಿದೆ.
ಕ್ಯಾಮೆರಾ ಎಷ್ಟು ಮೆಗಾ ಪಿಕ್ಸಲ್ ಹೊಂದಿದೆ?
Vivo X100 ಅಲ್ಟ್ರಾ ಫೋನ್ 200 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು Zeiss APO ಸೂಪರ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದರೊಂದಿಗೆ, ಸೋನಿ LYT-900 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಕ್ಯಾಮೆರಾ ಸೆಟಪ್‌ನಲ್ಲಿರುವ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಇರುವ ಸುದ್ದಿ ಇದೆ. ಇವುಗಳು ಸುಧಾರಿತ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ AI ವೈಶಿಷ್ಟ್ಯಗಳು ಇರುವ ಸಾಧ್ಯತೆ ಇದೆ.
Vivo X100 Ultra ಏನು ವಿಶೇಷತೆ
Vivo X100 Ultra ಅನ್ನು ಮೂರು ರೂಪಾಂತರಗಳಲ್ಲಿ ಬರಲಿದೆ. 12 GB RAM + 256 GB ಇಂಟರ್ನಲ್ ಸ್ಟೋರೇಜ್, 16 GB RAM + 512 GB ಇಂಟರ್ನಲ್ ಸ್ಟೋರೇಜ್ ಮತ್ತು 16 GB RAM + 1 TB ಇಂಟರ್ನಲ್ ಸ್ಟೋರೇಜ್ ನಿಂದ ಗ್ರಾಹಕರಿಗೆ ಕೈಗೆ ಲಭ್ಯವಾಗುವ ಸಾಧ್ಯತೆ ಇದೆ.
Vivo X100s ನಾಲ್ಕು ರೂಪಾಂತರಗಳಲ್ಲಿ ಹೊರ ಬರಲಿದೆ. ಈ ಸ್ಮಾರ್ಟ್‌ಫೋನ್ 12 GB RAM + 256 GB ಇಂಟರ್ನಲ್ ಸ್ಟೋರೇಜ್, 16 GB RAM + 256 GB ಇಂಟರ್ನಲ್ ಸ್ಟೋರೇಜ್, 16 GB RAM + 512 GB ಇಂಟರ್ನಲ್ ಸ್ಟೋರೇಜ್ ಮತ್ತು 16 GB RAM + 1 TB ಇಂಟರ್ನಲ್ ಸ್ಟೋರೇಜ್ ನಿಂದ ಹೊರ ಬರಲಿದೆ. ಸಿಯಾನ್ (cyan), ಕಪ್ಪು, ಬಿಳಿ ಮತ್ತು ಟೈಟಾನಿಯಂ ಕಲರ್‌ನಲ್ಲಿ ಹೊರ ಬರಲಿದೆ.












Click it and Unblock the Notifications