Smartphone: ಮಾರುಕಟ್ಟೆಯಲ್ಲಿ ಧಮಾಕಾ ಮಾಡಲು ಸಿದ್ಧವಾಗಿ Vivo T3x 5G
ಚೀನಾ ಮೂಲದ ವಿವೋ ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ Vivo T3x 5G ಅನ್ನು ಬಿಡುಗಡೆ ಮಾಡಿದೆ. ಮೂರು RAM ಆಯ್ಕೆಗಳಲ್ಲಿ ಫೋನ್ ಅನ್ನು ಗ್ರಾಹಕರನ್ನು ಸೆಳೆಯಲಿದೆ. ಎಂದಿನಂತೆ ಈ ಫೋನ್ ಸಹ ಸ್ಟೈಲಿಷ್ ಲುಕ್ ಹೊಂದಿರಲಿದೆ. ಬಜೆಟ್ ಫ್ರೆಂಡ್ಲಿ ಆಗಿದ್ದು ಈ ಫೋನ್ ಮಾರುಕಟ್ಟೆಯಲ್ಲಿರುವ ಬೇರೆ ಫೋನ್‌ಗಳಿಗೆ ಪೈಪೋಟಿ ನೀಡಲಿದೆ.
ಫೋನ್‌ನ ಮಾರಾಟವು ಭಾರತದಲ್ಲಿ ಏಪ್ರಿಲ್ 24 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿರಲಿ. ಇದಲ್ಲದೆ, ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 1 ನಂತಹ ಶಕ್ತಿಯುತ ಚಿಪ್‌ಸೆಟ್ ಅನ್ನು ಒಳಗೊಂಡಿದೆ.

ಡಿಸ್‌ಪ್ಲೇ ಹೇಗಿದೆ?
ಈ ಫೋನ್ 6.72 ಇಂಚಿನ ಡಿಸ್‌ಪ್ಲೇ ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ಹೊಂದಿರಲಿದೆ. ಅಲ್ಲದೆ ಫುಲ್ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಒಳಗೊಂಡಿದೆ. 1000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಇದೆ.
ಯಾವ ಬಣ್ಣಗಳಲ್ಲಿ ಲಭ್ಯ?
ಕಂಪನಿಯು ಈ ಫೋನ್ ಅನ್ನು ಕ್ರಿಮ್ಸನ್ ಬ್ಲಿಸ್ ಮತ್ತು ಸೆಲೆಸ್ಟಿಯಲ್ ಗ್ರೀನ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಿದೆ.
ಓಎಸ್ ಯಾವುದು?
ಹೊಸ Vivo ಫೋನ್ Android 14 ಆಧಾರಿತ Funtouch OS 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಹೇಗಿದೆ?
ಈ ಫೋನಿನ ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಪ್ರೈಮರಿ ಕ್ಯಾಮೆರಾ, 2 ಮೆಗಾ ಪಿಕ್ಸಲ್ ಡೆಪ್ತ್ ಕ್ಯಾಮೆರಾ ಮತ್ತು LED ಫ್ಲ್ಯಾಶ್ ಲೈಟ್ ನೀಡಲಾಗಿದೆ. ಈ ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್ 6000 ಎಂಎಎಚ್ ಬ್ಯಾಟರಿ ಹಾಗೂ 44 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಸ್ಟಿರಿಯೊ ಸ್ಪೀಕರ್, 3.5 ಎಂಎಂ ಆಡಿಯೊ ಜ್ಯಾಕ್, IP64 ರೇಟೆಡ್ ಹೊಂದಿದೆ. ಈ ಫೋನ್‌ನ ತೂಕ 199 ಗ್ರಾಂ ಮತ್ತು ಇದು ತುಂಬಾ ತೆಳುವಾದ ಸ್ಮಾರ್ಟ್‌ಫೋನ್ ಆಗಿದೆ.
ರ್ಯಾಮ್ ಹಾಗೂ ಇಂಟರ್ನಲ್ ಕ್ಯಾಪಿಸಿಟಿ ಏನು?
ಕಂಪನಿಯು ಈ ಫೋನ್ ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಮೊದಲನೇಯದಾಗಿ 4GB RAM ಮತ್ತು 128GB ಇಂಟರ್ನಲ್ ಸ್ಟೋರೆಜ್ ಹೊಂದಿರಲಿದೆ. ಇದರ ಬೆಲೆ 13,999 ರೂ. ಆಗಿರಲಿದೆ. ಇನ್ನೊಂದು ಮೊಡೆಲ್ 6ಜಿಬಿ ರ್ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿರಲಿದ್ದು, 14,999 ರೂ. ಗೆ ಗ್ರಾಹಕರಿಗೆ ಸಿಗಲಿದೆ. ಈ ಫೋನ್‌ನ ಮೂರನೇ ಮಾಡೆಲ್ 8ಜಿಬಿ ರ್ಯಾಮ್ ಮತ್ತು 128ಜಿಬಿ ಇಂರ್ಟನಲ್ ಸ್ಟೋರೆಜ್ ಹೊಂದಿರಲಿದ್ದು, ಇದರ ಬೆಲೆ 16,999 ರೂ. ಆಗಿದ್ದು, ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ವಿವೋದ ಇ-ಸ್ಟೋರ್‌ನಲ್ಲಿ ಏಪ್ರಿಲ್ 24 ರಿಂದ ಮಾರಾಟ ಮಾಡಲಾಗುತ್ತದೆ.












Click it and Unblock the Notifications