Virat Kohli's Instagram Post: ದೇಶದಲ್ಲಿ ಅತಿ ಹೆಚ್ಚು ಲೈಕ್ ಸಿಕ್ಕ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೆ ನೋಡಿ!

ಟಿ 20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ತಂಡ ಭಾರತೀಯರ ಮನಸನ್ನು ಗೆದ್ದಿದೆ. ಗೆಲುವಿನ ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿವೆ. ಇದರ ನಡುವೆ ಕಿಂಗ್ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದ್ದು, ಮತ್ತೊಂದು ದಾಖಲೆ ಬರೆದಿದೆ.

ಟಿ 20 ವಿಶ್ವಕಪ್ ಗೆಲುವಿನ ನಂತರ ಕ್ರಿಕೆಟಿಗೆ ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಚಿತ್ರವಾಗಿ ದಾಖಲೆ ಬರೆದಿದೆ. ಈ ಹಿಂದೆ ಬಾಲಿವುಡ್ ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆ ಫೋಟೋ ಅತಿ ಹೆಚ್ಚು ಲೈಕ್ ಪಡೆದ ಚಿತ್ರವಾಗಿ ದಾಖಲೆ ಹೊಂದಿತ್ತು. ಈ ದಾಖಲೆಯನ್ನು ವಿರಾಟ್ ಮುರಿದಿದ್ದಾರೆ.

Virat Kohli s Instagram Post About T20 World Cup Win Becomes Most Liked Pic In India

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸೋಲಿಸಿದ ಕಿಂಗ್ ಕೊಹ್ಲಿ!

ಬಾಲಿವುಡ್‌ನ ಸೂಪರ್ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ರಾಜಸ್ಥಾನದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಒಂದು ವರ್ಷದವರೆಗೆ ಹೆಚ್ಚು ಇಷ್ಟಪಟ್ಟ ಇನ್‌ಸ್ಟಾಗ್ರಾಮ್ ಪೋಸ್ಟ್ ಅವರ ಮದುವೆಯ ಫೋಟೋವೆ. ಆದರೆ, ಭಾರತವು ಟಿ 20 ವಿಶ್ವಕಪ್ ಟ್ರೋಫಿಯನ್ನು ಗೆದ್ದ ನಂತರ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ತಮ್ಮ ಪೋಸ್ಟ್‌ನೊಂದಿಗೆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಗೆಲುವಿನೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಟೀಂ ಇಂಡಿಯಾ ಜೂನ್ 29 ರಂದು ಟ್ರೋಫಿಯನ್ನು ಗೆದ್ದದ್ದು ಮಾತ್ರವಲ್ಲ, ವಿಜಯವನ್ನು ಆಚರಿಸುವ ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಚಿತ್ರವಾಗಿದೆ. ಫೋಟೋ ಹಂಚಿಕೊಂಡ ಒಂದು ದಿನದಲ್ಲಿ ಈ ಸುದ್ದಿಯನ್ನು ಬರೆಯುವ ವೇಳೆ ಬರೋಬ್ಬರಿ 19. 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.

Virat Kohli s Instagram Post About T20 World Cup Win Becomes Most Liked Pic In India

ಇದಕ್ಕೂ ಮುನ್ನ ಈ ದಾಖಲೆ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹೆಸರಿನಲ್ಲಿತ್ತು. ಈ ಜೋಡಿ ಹಂಚಿಕೊಂಡಿದ್ದ ಮದುವೆಯ ಫೋಟೋಗೆ 16.2 ಮಿಲಿಯನ್ ಲೈಕ್ ಬಂದಿತ್ತು. ಬರೋಬ್ಬರಿ 2 ಲಕ್ಷದ 12 ಸಾವಿರ ಮಂದಿ ಕಾಮೆಂಟ್ ಮಾಡಿದ್ದರು. ವಿರಾಟ್ ಕೊಹ್ಲಿ ಫೋಟೋಗೆ 19. 1 ಮಿಲಿಯನ್ ಲೈಕ್‌, 6 ಲಕ್ಷದ 87 ಸಾವಿರ ಕಾಮೆಂಟ್‌ಗಳು ಬಂದಿವೆ.

ವಿರಾಟ್ ಫೋಟೋ ವೈರಲ್

ಟಿ20 ವಿಶ್ವಕಪ್‌ ಗೆಲುವಿನ ಬಗ್ಗೆ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, T20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ಮತ್ತು ಅವರ ತಂಡದ ಸದಸ್ಯರು ಟ್ರೋಫಿಯೊಂದಿಗೆ ಸಂಭ್ರಮಿಸುತ್ತಿರುಚ ಫೋಟೋಗಳನ್ನು ಹಂಚಿಕೊಂಡಿರುವ ಅವರ ಫೋಟೋಗಳಿಗೆ ಜನ ಪ್ರೀತಿ ಹರಿಸಿದ್ದಾರೆ.

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿರುವ ಚಿತ್ರಗಳು ಮತ್ತು ಲಾಕರ್ ರೂಂನಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ಚಿತ್ರಗಳನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ಇದಕ್ಕಿಂತ ಉತ್ತಮ ದಿನವನ್ನು ಕನಸು ಕಾಣಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆಬಾಗುತ್ತೇನೆ. ನಾವು ಕೊನೆಗೂ ಸಾಧಿಸಿದ್ದೇವೆ. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.

ಫೆಬ್ರವರಿ 7, 2023 ರಂದು ಪೋಸ್ಟ್ ಮಾಡಿದ ಕಿಯಾರಾ ಅಡ್ವಾನಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಫೋಟೋ ಲಕ್ಷಾಂತರ ಲೈಕ್‌ಗಳೊಂದಿಗೆ ದಾಖಲೆಯನ್ನು ಹೊಂದಿತ್ತು. ಅವರಿಗಿಂತ ಮೊದಲು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆ ಫೋಟೋ ಸದ್ದು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+