Viral Video: ಮೆಟ್ರೋ ರೈಲಿನಲ್ಲಿ ಅಶ್ಲೀಲ ನೃತ್ಯ ಮಾಡಿದ ಮಹಿಳೆ: ವ್ಯಾಪಕ ಆಕ್ರೋಶ

ಮೆಟ್ರೋ ರೈಲುಗಳು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಿಸಿತ ಸೇವೆಯಾಗಿದೆ. ಅನೇಕ ಮಹಾನಗರಗಳ ಜೀವನಾಡಿ ಈ ಮೆಟ್ರೋ ಆಗಿದೆ. ಇಂತಹ ಮೆಟ್ರೋ ರೈಲುಗಳು ಆಗಾಗ ವಿಲಕ್ಷಣ ಘಟನೆಗಳಿಂದ ಸುದ್ದಿಯಾಗಿತ್ತಿವೆ. ಇದೀಗ ಅಂತದ್ದೇ ಒಂದು ಘಟನೆ ನಡೆದಿದೆ.

ಮೆಟ್ರೋ ರೈಲಿನಲ್ಲಿ ಮಹಿಳೆಯೊಬ್ಬರು ಮೈಚಳಿ ಬಿಟ್ಟು ಅಶ್ಲೀಲವಾಗಿ ಡಾನ್ಸ್ ಮಾಡುವ ಮೂಲಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮೆಟ್ರೋದಲ್ಲಿ ಮಹಿಳೆಯ ಈ ಅಶೀಸ್ತಿನ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video of Woman Obscene Dance in Delhi Metro Rail Outrage by Netizens

ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಇಲ್ಲಿ ಮೆಟ್ರೋಗೆ 20 ವರ್ಷಗಳ ಇತಿಹಾಸವಿದೆ. ಸಾರಿಗೆಯ ಅತ್ಯಂತ ಅನುಕೂಲಕರ ಸಾಧನಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಪ್ರೇಮಿಗಳು ರೋಮ್ಯಾನ್ಸ್ ಮಾಡಿ, ರೀಲ್ಸ್ ವಿಡಿಯೋಗಳ ವಿಚಾರವಾಗಿ ಮೂಲಕ ದೆಹಲಿ ಮೆಟ್ರೋ ಸುದ್ದಿಯಾಗಿತ್ತು.

ರೀಲ್ಸ್ ಹುಚ್ಚಿಗಾಗಿ ಮೆಟ್ರೋದಲ್ಲಿ ನೃತ್ಯ

ಇದೀಗ ಮಹಿಳೆಯೊಬ್ಬರು ಪ್ರಯಾಣಿಕರ ಮುಂದೆಯೇ ಡಾನ್ಸ್ ಮಾಡಿದ್ದಾರೆ. ಮೈ ಕಾಣಿಸುವಂತೆ ಬಟ್ಟೆ ತೊಟ್ಟಿದ್ದ ಯುವತಿಯೊಬ್ಬರು ಮೆಟ್ರೋದಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ರೀಲ್ಸ್ ಹುಚ್ಚಿಗಾಗಿ ಇವರು ವಿಲಕ್ಷಣವಾಗಿ ಸಾರ್ವಜನಿಕ ಸ್ಥಳದಲ್ಲಿ ಡಾನ್ಸ್ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಡಾನ್ಸ್ ರೀಲ್ಸ್‌ಗಳು, ವಿಲಕ್ಷಣವಾದ ಡ್ರೆಸ್ಸಿಂಗ್‌ನ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಇದೀಗ ಅದೇ ಮಹಿಳೆಯೇ ದೆಹಲಿ ಮೆಟ್ರೋದಲ್ಲಿ ನೃತ್ಯ ಮಾಡಿರುವ ವಿಡಿಯೋಗಳನ್ನು ನೋಡಿರುವ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video of Woman Obscene Dance in Delhi Metro Rail Outrage by Netizens

ವಿಡಿಯೋದಲ್ಲಿ ಏನಿದೆ? ಯಾಕೆ ಆಕ್ರೋಶ?

ಮಹಿಳೆಯು ಟ್ವಿರ್ಕಿಂಗ್, ಹೊಟ್ಟೆ ನೃತ್ಯ ಮತ್ತು ಇಂದ್ರಿಯ ನೃತ್ಯವನ್ನು ಪ್ರಯಾಣಿಕರ ಮುಂದೆ ಮಾಡಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಕ್ಲಿಪ್ ಒಂದರಲ್ಲಿ, ಈ ಮಹಿಳೆಯ ಮೆಟ್ರೋ ರೈಲಿನಲ್ಲಿ ಮಂಡಿಯೂರಿ ಕುಳಿತು ವಿವಿಧ ರೀತಿಯಲ್ಲಿ ಡಾನ್ಸ್ ಮಾಡಿದ್ದಾರೆ. ತನ್ನ ವಿಡಿಯೋವನ್ನು ತಾವೇ (@manishadancer) Instagram ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳೆಯರು ಮಕ್ಕಳು ಓಡಾಡುವ ಸಾರ್ವಜನಿಕ ಮೆಟ್ರೋ ರೈಲಿನಲ್ಲಿ ಅರೆ ಬರೆ ಬಟ್ಟೆ ತೊಟ್ಟು, ಸಹ ಪ್ರಯಾಣಿಕರಿಗೆ ಕಿರಿ ಕಿರಿ ಅನ್ನಿಸುವಂತೆ, ನೋಡಲು ಮುಜುಗರವಾಗುವಂತೆ ನೃತ್ಯ ಮಾಡಿದ್ದಾರೆ. ಡಾನ್ಸ್ ಮಾಡುವಾಗ ಪಕ್ಕದಲ್ಲೇ ಮಹಿಳೆ ಪ್ರಯಾಣಿಕರೊಬ್ಬರು ಮುಜುಗರಪಟ್ಟುಕೊಂಡಿದ್ದನ್ನು ನೋಡಬಹದು. ಹೀಗಾಗಿ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಘಟನೆ ಕುರಿತು ದೆಹಲಿ ಮೆಟ್ರೋ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಮೆಟ್ರೋದಲ್ಲಿನ ಮಹಿಳೆ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಲವರು ಕಾಮೆಂಟ್‌ಗಳ ಮೂಲಕ ಇದು ಸರಿಯಲ್ಲ, DMRC ನಿಯಮ ಉಲ್ಲಂಘಿಸುವುದು ತಪ್ಪು. ಅವರ ವಿರುದ್ಧ ಕ್ರಮ ಜರುಗಿಸುವಂತೆ ಕೆಲವರು ಒತ್ತಾಯಿಸಿದ್ದಾರೆ.

₹10,000 ದಂಡ ವಿಧಿಸಬಹುದೇ?

ಮಹಿಳೆ ಡಾನ್ಸ್ ಅಶ್ಲೀಲವಾಗಿದೆ. ಸಹ ಪ್ರಯಾಣಿಕರಿಗೆ ತೊಂದರೆ ಆಗಿದೆ ಎಂದು ಟೀಕಿಸಿದರು. ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ನಡವಳಿಕೆ ಸೂಕ್ತವಲ್ಲ ಎಂದು ದೂರಿದ್ದಾರೆ. ಅಧಿಕಾರಿಗಳು ಇಂತಹ ಘಟನೆ ಬಗ್ಗೆ ಗಮನಹರಿಸಬೇಕು ಎಂದರು.

ಇಂತಹ ಘಟನೆಗಳ ಕಡಿವಾಣಕ್ಕಾಗಿ ₹10,000 ದಂಡ ವಿಧಿಸಬಹುದೇ? ಇದನ್ನು ತಡೆಯಲು ಯಾವುದೇ ಕಾನೂನು ಮಾರ್ಗವಿಲ್ಲವೇ? ಪ್ರತಿ ಮೆಟ್ರೋ ರೈಲಿನಲ್ಲಿ ಪೊಲೀಸ್/ಸಿಬ್ಬಂದಿ ನಿಯೋಜಿಸಬೇಕು. ಕೇಂದ್ರ ರೈಲ್ವೆ ಸಚಿವರು ಕಠಿಣ ಕಾನೂನು ತರಬೇಕು ಎಂದೆಲ್ಲ ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಬಗ್ಗೆ ದೆಹಲಿ ಮೆಟ್ರೋಗೆ ಟ್ಯಾಗ್ ಮಾಡಲಾಗಿದ್ದು, ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಯಾರೇ ಆಗಲಿ ಸಾರ್ವಜನಿಕ ಸ್ಥಳಗಳು, ಬಸ್, ರೈಲು, ಮೆಟ್ರೋಗಳಲ್ಲಿ, ಇಲ್ಲವೇ ಕಚೇರಿಗಳಲ್ಲಿ ಈ ರೀತಿ ವಿಡಿಯೋ, ಅಶ್ಲೀಲ ನೃತ್ಯ, ಅಸಭ್ಯ ವರ್ತನೆ ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಸದರಿ ವಿಡಿಯೋ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+