Romance Video Viral: ಪಬ್ಲಿಕ್ ಬಸ್ಸಿನಲ್ಲೇ ಪ್ರೇಮಿಗಳ ರೋಮ್ಯಾನ್ಸ್: ಅಸಭ್ಯತೆಯ ವಿಡಿಯೋ ಲೀಕ್
ಬೆಂಗಳೂರು ಮೆಟ್ರೋ, ಮುಂಬೈ ಮೆಟ್ರೋ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಯುವಕ-ಯುವತಿಯರ ರೋಮ್ಯಾನ್ಸ್, ಲವ್ವಿಡವ್ವಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಮೆಟ್ರೋದಲ್ಲಿ ಪ್ರೇಮಿಗಳು ರೋಮ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಸಾರ್ವಜನಿಕ ಸಾರಿಗೆ ಬಸ್ ನಲ್ಲಿ ಹಿಂಬದಿ ಸೀಟಿನಲ್ಲಿ ಕೂತಿದ್ದ ಜೋಡಿಗಳು ಈ ಲೋಕವನ್ನೆ ಮರೆತು ರೋಮ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.
ನಾಲ್ಕು ಗೋಡೆಗಳ ಮಧ್ಯೆ ನಡೆಬೇಕಿರುವ ಘಟನೆಗಳು ಇಂದು ಸಾರ್ವಜನಿಕವಾಗಿ ಜಗಜ್ಜಾಹಿರಾಗುತ್ತಿವೆ. ಅಶ್ಲೀಲ ಪ್ರಕರಣಗಳು ಸಾರ್ವಜನಿಕ ಪ್ರದೇಶಗಳಲ್ಲಿ ನಡೆಯುತ್ತಿರುವುದು ಕಳವಳಕಾರಿ ವಿಷಯ. ಕೆಲವು ಪ್ರೇಮಿಗಳು ಬೇಕು ಅಂತಲೇ ಕೆಲವೊಮ್ಮೆ ಪಬ್ಲಿಕ್ ಸ್ಥಳದಲ್ಲಿ ಹೀಗೆ ಮಾಡುತ್ತಾರೆ ಎಂದನಿಸುತ್ತದೆ.

ಓಡಿಶಾ ರಾಜ್ಯದ ಭುವನೇಶ್ವರ್‌ನಲ್ಲಿ ಸರ್ಕಾರಿ ಬಸ್‌ನಲ್ಲಿ ಹಿಂಬದಿ ಕೂತಿದ್ದ ಯುವಕ-ಯುವತಿ ಇಬ್ಬರು ಹಾಡಹಗಲೇ ರೋಮ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಈ ಘಟನೆಗಳನ್ನು ಅವರ ಮುಂದಿನ ಸೀಟಿನಲ್ಲಿ ಕೂತಿದ್ದ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಲ್ಲಿನ ರೊರ್ಕೆಲಾ ಎಂಬಲ್ಲಿಗೆ ಈ ಇಬ್ಬರು ಪ್ರೇಮಿಗಳು ತೆರಳುತ್ತಿದ್ದರು. ಟಿಕೆಟ್ ಪಡೆದ ಬಳಿಕ ಹಿಂದಿನ ಖಾಲಿ ಸೀಟಿನಲ್ಲಿ ಇಬ್ಬರು ಕೂತಿದ್ದಾರೆ. ಯುವಕನ ತೊಡೆಯ ಮೇಲೆ ಕುಳಿತ ಯುವತಿಯನ್ನು ಯುವಕ ಅಪ್ಪಿ ಮುದ್ದಾಡಿದ ದೃಶ್ಯಗಳು ವೈರಲ್ ಆಗಿವೆ.
ಸಭ್ಯತೆಯ ಗಡಿ ದಾಟಿದ ಪ್ರೇಮಿಗಳು
ಸಾರ್ವಜನಿಕ ಪ್ರದೇಶಗಳಲ್ಲಿ ಈ ಜೋಡಿಯು ಸಭ್ಯತೆಯ ಗಡಿ ದಾಟಿ ನಡೆದುಕೊಂಡಿದ್ದಾರೆ. ಅವರು ಕುಳಿತ ಸೀಟಿನ ಸಾಲುಗಳಲ್ಲೇ ಪಕ್ಕದಲ್ಲಿಯೇ ವೃದ್ಧೆಯೊಬ್ಬರು ಕೂತಿದ್ದಾರೆ. ಆದರೂ ಸಹ ಸಾರ್ವಜನಿಕ ಜವಾಬ್ದಾರಿ ಮರೆತ ಜೋಡಿಗಳು ರೋಮ್ಯಾನ್ಸ್ ಮಾಡಿದ್ದಾರೆ. ಇದರೊಂದಿಗೆ ತಮ್ಮ ಖಾಸಗಿ ಸಂಬಂಧವನ್ನು ಜನರ ಮುಂದಿಟ್ಟಿದ್ದಾರೆ.
ಮಹಿಳೆಯರು ಮಕ್ಕಳು, ಹಿರಿಯ ನಾಗರಿಕರು, ಸುಸಂಸ್ಕೃತರು ಓಡಾಡುವ ಸರ್ಕಾರಿ ಬಸ್‌ನಲ್ಲಿ ಈ ರೀತಿ ವರ್ತನೆ ತೋರಿರುವುದ ನಿಜಕ್ಕೂ ಅಸಹ್ಯಕರ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications