Viral Video : 50 ಅಡಿ ಎತ್ತರದ ಮರವೇರಿದ ಪೋರಿ; ಕಣ್ಣು ಮಿಟುಕಿಸುವುದರೊಳಗೆ ಮರದ ತುದಿ ತಲುಪುವ ಸಾಹಸಿ
Viral Video: ಸಾಮಾನ್ಯವಾಗಿ ಸಣ್ಣವರಿರುವಾಗ ಎಲ್ಲರೂ ಮರ ಹತ್ತುವುದಿದೆ. ಆ ವಯಸ್ಸಿನಲ್ಲಿ ಮರ ಹತ್ತುವುದು, ಹಣ್ಣು ಕೀಳುವುದು, ಮರ ಕೋತಿ ಆಟವಾಡುವುದು ಇವೆಲ್ಲಾ ಕಾಮನ್. ಆದರೆ ಅದೇ ಅಭ್ಯಾಸವನ್ನು ಮುಂದುವರೆಸಿಕೊಂಡೇ ಹೋದರೆ ಅದು ಸ್ವಲ್ಪ ವಿಶೇಷ ಅನ್ನಿಸದೇ ಇರದು. ಇನ್ನು ಕೆಲವರು ಸಣ್ಣ ಪುಟ್ಟ ಮರಗಳನ್ನು ಹತ್ತಬಹುದು. ಆದರೆ ಎತ್ತರದ ಮರ ಹತ್ತುವುದಕ್ಕೆ ಹೋಗುವುದಿಲ್ಲ. ಎತ್ತರದ ಮರಗಳನ್ನು ನೋಡುವಾಗಲೇ ಕೈ ಕಾಲು ನಡುಗುತ್ತವೆ. ಇನ್ನು ಹತ್ತುವುದು ದೂರದ ಮಾತು.
50 ಅಡಿ ಎತ್ತರದ ಮರ
ಹಿಮಾಚಲ ಪ್ರದೇಶದ ಕಟೆಂಟ್ ಕ್ರಿಯೇಟರ್ ಪೂಜಾ ಗುಲೇರಿಯಾ ಅವರ ವೀಡಿಯೊ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವೀಡಿಯೊದಲ್ಲಿ, ಪೂಜಾ 50 ಅಡಿ ಎತ್ತರದ ಪೈನ್ ಟ್ರೀಯನ್ನು ಸರಸರನೆ ಹತ್ತಿದ್ದಾರೆ. ಅಷ್ಟು ಎತ್ತರದ ಮರ ಹತ್ತುವಾಗ ಸ್ವಲ್ಪವೂ ಹೆದರಿಕೆ ಅನ್ನುವುದೇ ಅವರಲ್ಲಿ ಕಾಣಿಸಲಿಲ್ಲ. ಇವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಇವರು ಮರ ಹತ್ತುವ ವೇಗಕ್ಕೆ ಎಲ್ಲರೂ ದಂಗಾಗಿದ್ದಾರೆ. ಅಂದ ಹಾಗೆ ಪೂಜಾಗೆ ಮರ ಹತ್ತುವುದು ಹೊಸದೇನಲ್ಲ.

ಮರ ಹತ್ತುವುದು ಇವರ ಹವ್ಯಾಸ
ಅವರ ಸೋಶಿಯಲ್ ಮಿಡಿಯಾ ಅಕೌಂಟ್‌ಗಳನ್ನು ಓಪನ್ ಮಾಡಿ ನೋಡಿದರೆ ಅವರು ಬೇರೆ ಬೇರೆ ಮರಗಳನ್ನು ವೇಗವಾಗಿ ಹತ್ತುವ ಹಲವಾರು ವೀಡಿಯೊಗಳು ನೋಡಬಹುದು. ಈ ಬಾರಿ, ಜನರು ಅವರ ಮರ ಹತ್ತುವ ಶೈಲಿಯನ್ನು ನೋಡಿ ಹೊಗಳುತ್ತಿದ್ದಾರೆ. ವೀಡಿಯೊಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಅವರನ್ನು ಮರಗಳ ರಾಣಿ ಎಂದು ಕರೆದರೆ, ಇನ್ನು ಕೆಲವರು ಅವರನ್ನು ಒಲಿಂಪಿಕ್ ಕ್ರೀಡಾಪಟುವಿಗೆ ಹೋಲಿಸಿದ್ದಾರೆ.
ನಿಮಿಷಗಳಲ್ಲಿ ಏರಿ ಬಿಡುತ್ತಾರೆ ಮರ
ಪೂಜಾ ತನ್ನ ಕೈ ಮತ್ತು ಕಾಲುಗಳ ಸಹಾಯದಿಂದ ಮರದ ಕಾಂಡವನ್ನು ಹಿಡಿದುಕೊಂಡು ಬೇಗನೆ ಮರ ಹತ್ತಿಕೊಂಡು ಹೋಗುವುದನ್ನು ನೋಡಬಹುದು. ಅವರು ಮರ ಎಷ್ಟು ಫಾಸ್ಟ್ ಆಗಿ ಹತ್ತುತ್ತಾರೆ ಎಂದರೆ ಯಾರಾದರೂ ಮರಕ್ಕೇ ಏಣಿ ಹಾಕಿಸಿದ್ದಾರೆ ಅಂತ ಅನ್ನಿಸಬೇಕು. ಕೆಲವೇ ಕ್ಷಣಗಳಲ್ಲಿ, ಸಾಕಷ್ಟು ಎತ್ತರದ ಮರದ ತುದಿಯನ್ನು ತಲುಪಿ ಕ್ಯಾಮೆರಾಗೆ ಕೈ ಬೀಸುತ್ತಾಳೆ. ನಿಖಿಲ್ ಸೈನಿ ಕೂಡಾ ಇವರ ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.
ಪೂಜಾ ಧೈರ್ಯಕ್ಕೆ ತಲೆದೂಗಿದ ವೀಕ್ಷಕರು
ಪೂಜಾ ಅಷ್ಟು ಸುಲಭವಾಗಿ ಮರ ಹತ್ತುವುದನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅನೇಕರು ಆಕೆಯ ಧೈರ್ಯ ಮತ್ತು ಕೌಶಲ್ಯವನ್ನು ಹೊಗಳಿದರೆ, ಇನ್ನು ಕೆಲವರು ಇಂತಹ ಸಾಧನೆ ಎಲ್ಲರಿಗೂ ಸಾಧ್ಯವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಕುತೂಹಲಕಾರಿಯಾಗಿ, ಪೂಜಾ ಮರಗಳನ್ನು ಹತ್ತುವ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದು ಇದೇ ಮೊದಲಲ್ಲ. ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ವಿವಿಧ ಮರಗಳನ್ನು ವೇಗವಾಗಿ ಏರುವುದನ್ನು ತೋರಿಸುವ ಹಲವಾರು ವೀಡಿಯೊಗಳಿವೆ. ಇದರರ್ಥ ಮರ ಹತ್ತುವುದು ಅವರಿಗೆ ಹೊಸದಲ್ಲ. ಬಹುಶಃ ಇದು ಎತ್ತರದ ಮರಗಳನ್ನು ಸುಲಭವಾಗಿ ತಲುಪುವ ಅವರ ಸಾಮರ್ಥ್ಯವನ್ನು ತೋರಿಸುತ್ತದೆ.
ವಿಡಿಯೋಗೆ ಹರಿದು ಬರುತ್ತಿದೆ ಕಾಮೆಂಟ್
ಜನರು ಈ ವೀಡಿಯೊ ನೋಡಿ ನಾನಾ ರೀತಿಯಲ್ಲಿ ಕಾಂಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಮರಗಳ ರಾಣಿ ಎಂದು ಕರೆದರೆ, ಇನ್ನೊಬ್ಬರು ಅವರನ್ನು ಒಲಿಂಪಿಕ್ ದೀದಿ ಅಂತ ಹೇಳಿದ್ದಾರೆ. ಇನ್ನು ಕೆಲವರು ಇವರ ಧೈರ್ಯ ಸಾಹಸವನ್ನು ಕೊಂಡಾಡಿದರೆ ಇನ್ನು ಕೆಲವರು ಎತ್ತರದ ಮರವನ್ನು ಹತ್ತುವುದು ಅಪಾಯಕಾರಿಯಾಗಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.


Click it and Unblock the Notifications
